ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವೊಂದರ ಅಕ್ರಮ ಬಯಲು
ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ ಎಂದು ನಂಬಿದವರಿಗೆ ಮೋಸ
ಅತ್ತ ನೆಮ್ಮದಿಯಿಂದ ಊಟ ಮಾಡೋಕೆ ಆಗದೆ ಕಣ್ಣೀರು ಹಾಕ್ತಿರೋ ರೈತರು
ಚಾಮರಾಜನಗರ: ಮಲೆಯುರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕರ್ಮಕಾಂಡ ಬಯಲಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ ಎಂದು ನಂಬಿದವರಿಗೆ ಪಂಗನಾಮ ಹಾಕಿದ ಘಟನೆ ಬಯಲಿಗೆ ಬಂದಿದೆ.
ಸೊಸೈಟಿ ಆಡಳಿತ ಮಂಡಳಿ ರೈತರು ಅಡವಿಟ್ಟಿದ್ದ ಚಿನ್ನಾಭರಣವನ್ನ ಖಾಸಗಿ ಫೈನಾನ್ಸ್ ಗಳಲ್ಲಿ ಅಡವಿಟ್ಡು ದೋಖಾ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಂದಾಜು 3.20 ಕೋಟಿ ರೂಪಾಯಿ ದೋಖಾ ಎಂಬ ಆರೋಪ ಅವರ ಮೇಲಿದೆ. ಇತ್ತ ಅಡವಿಟ್ಟಿದ್ದ ಚಿನ್ನ ಸಿಗದೆ ಇತ್ತ ಸೊಸೈಟಿ ಅಧ್ಯಕ್ಷ, ಕಾರ್ಯದರ್ಶಿ ಸಂಪರ್ಕಕ್ಕೂ ಸಿಗದೆ ರೈತರು ಕಂಗಾಲಾಗಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ನಂಬಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡ್ತಿವಿ ಎಂದು ರೈತರು ಚಿನ್ನ ಅಡವಿಟ್ಟಿದ್ದಾರೆ. ಆದರೆ ಈಗ ಚಿನ್ನ ಕೇಳಿದ್ರೆ ಏನೇನೋ ಹೇಳ್ತಿದಾರೆ. ಒಂದು ವಾರದಿಂದ ನೆಮ್ಮದಿಯಿಂದ ಊಟ ಮಾಡೋಕೆ ಆಗ್ತಿಲ್ಲ. ಪಡೆದಿದ್ದ ಸಾಲ ವಾಪಸ್ ಕಟ್ತಿವಿ ಅಂದ್ರು ತಗೊಳ್ತಿಲ್ಲ. ಈ ವಿಚಾರವಾಗಿ ಮನೆಯಲ್ಲಿ ನೆಮ್ಮದಿ ಹಾಳಾಗಿದೆ. ನಮಗೆ ನ್ಯಾಯ ಕೊಡಿಸಿ ಎಂದು ರೈತರು ಅಂಗಲಾಚುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ