newsfirstkannada.com

‘ಆರೋಪಿಗಳನ್ನು‌ ಶಿಕ್ಷಿಸದೆ ಬಿಡಲ್ಲ..’ ಮಹಿಳೆಯರ ಬೆತ್ತಲೆ ಪ್ರಕರಣ ಬಗ್ಗೆ ಬೇಸರ ವ್ಯಕ್ತಪಡಿಸಿದ ಪ್ರಧಾನಿ ಮೋದಿ

Share :

20-07-2023

    ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಪ್ರಕರಣ

    ಘಟನೆ ಬಗ್ಗೆ ಬೇಸರ ಹೊರಹಾಕಿದ ಪ್ರಧಾನಿ

    ನನ್ನ ಹೃದಯಕ್ಕೆ ನೋವಾಗಿದೆ ಎಂದ ಮೋದಿ

ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತಾಗಿ ದೆಹಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಮಣಿಪುರದ ಘಟನೆಯಿಂದ ಇಡೀ ದೇಶ ಆಕ್ರೋಶಗೊಂಡಿದೆ. ನನ್ನ ಹೃದಯಕ್ಕೆ ನೋವಾಗಿದೆ, ಕ್ರೋದದಿಂದ ಕೂಡಿದೆ. ಮನಸ್ಸಿಗೆ ನೋವಾಗಿದೆ. ಆರೋಪಿಗಳನ್ನು‌ ಶಿಕ್ಷಿಸದೆ ಬಿಡಲ್ಲ ಎಂಬ ಭರವಸೆಯನ್ನು ದೇಶಕ್ಕೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಇವತ್ತಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುತ್ತಿದೆ. ಈ ಬೆನ್ನಲ್ಲೇ ಮಣಿಪುರದಲ್ಲಿ ಮಾರ್ಚ್​ 4 ರಂದು ನಡೆದಿರುವ ಅಮಾನುಷ ವಿಡಿಯೋವೊಂದು ವೈರಲ್​ ಆಗುತ್ತಿದೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದವು. ಮಣಿಪುರ ಹಿಂಸಾಚಾರದಲ್ಲಿ 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇದೀಗ ದೇಶವೇ ತಲೆ ತಗ್ಗಿಸುವಂತಹ ವಿಡಿಯೋವೊಂದು ವೈರಲ್​ ಆಗಿದೆ. ಈ ಬಗ್ಗೆ ಪ್ರಧಾನಿ ಮೋದಿ ಸಂಸತ್​​ನಲ್ಲಿ ಮಾತನಾಡಬೇಕು. ಮಣಿಪುರದಲ್ಲಿ ಏನಾಗ್ತಿದೆ ಎಂದು ದೇಶದ ಜನರಿಗೆ ತಿಳಿಸಬೇಕು ಅಂತ ಆಗ್ರಹಿಸಿದ್ದವು. ಅಂತೆಯೇ ಸಂಸತ್​ ಕಲಾಪಕ್ಕೆ ಆಗಮಿಸುವ ವೇಳೆ ಮಾತನಾಡಿದ ಮೋದಿ,‘ಇಡೀ ದೇಶ ನಾಚಿಕೆಪಡುವಂತ ಘಟನೆ. ಮಣಿಪುರದ ಘಟನೆ ಸಭ್ಯ ಸಮಾಜಕ್ಕೆ ನಾಚಿಕೆಗೇಡಿನ ಘಟನೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಏನಿದು ಪ್ರಕರಣ?

ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಆದರೆ ಈ ವಿಡಿಯೋ 2 ತಿಂಗಳು ಹಳೆಯದ್ದಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಹಿಳೆಯರು, ಇಬ್ಬರು ಪುರುಷರು ಅಪಹರಣಕ್ಕೆ ಒಳಗಾಗಿದ್ದರು. ಪೊಲೀಸ್ ಠಾಣೆಯಿಂದ ಸುಮಾರು 2 ಕಿಲೋ ಮೀಟರ್ ದೂರದಲ್ಲಿರುವ ಕಾಡಿಗೆ ಅವರನ್ನು ಎಳೆದೊಯ್ದಿದ್ದರು. ಅಲ್ಲಿ ಅತ್ಯಾಚಾರಿಗಳ ತಂಡ ಮೊದಲು ಓರ್ವ ವ್ಯಕ್ತಿಯನ್ನು ಕೊಲೆ ಮಾಡಿದೆ. ನಂತರ ಮೂವರು ಮಹಿಳೆಯರ ನಗ್ನಗೊಳಿಸಿದ್ದಾರೆ. ಅವರ ಎದುರಲ್ಲೇ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ನಂತರ ಆಕೆ ಸಹೋದರನ್ನೂ ಕೊಂದಿದ್ದಾರೆ. ಬಳಿಕ ಮೆರವಣಿಗೆ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ನೊಂಗ್​ ಪೊಕ್​ ಸೆಕ್ಮಯ್​​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪುರದಲ್ಲಿ ಮಹಿಳೆತರ ಮೇಲೆ ಹಿಂಸಾಚಾರ

ಮೇ 4 ರಂದು ಮಣಿಪುರದಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಸರಿಸುಮಾರು 800 ರಿಂದ 1000 ಮಂದಿ ಶಸ್ತ್ರಸಜ್ಜಿತವಾಗಿ ಬಂದು ಮಣಿಪುರದಲ್ಲಿ ಹಿಂಸಾಚಾರ ಮಾಡಿದ್ದರು. ಇವರು, AK ರೈಫಲ್ಸ್​​, ಎಸ್​​ಎಎಲ್​​ಆರ್ (SALR)​, ಐಎನ್​​​ಎಸ್​​ಎಎಸ್ (INSAS)​ ಮತ್ತು 303 ರೈಫಲ್ಸ್​​ ಹಿಡಿದು ಗ್ರಾಮಗಳಿಗೆ ನುಗ್ಗಿದ್ದರು. ಗ್ರಾಮದಲ್ಲಿದ್ದ ಅಂಗಡಿ, ಮನೆ-ಮಠಗಳನ್ನು ಧ್ವಂಸ ಮಾಡಿ ಹಿಂಸಾಚಾರ ನಡೆಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಆರೋಪಿಗಳನ್ನು‌ ಶಿಕ್ಷಿಸದೆ ಬಿಡಲ್ಲ..’ ಮಹಿಳೆಯರ ಬೆತ್ತಲೆ ಪ್ರಕರಣ ಬಗ್ಗೆ ಬೇಸರ ವ್ಯಕ್ತಪಡಿಸಿದ ಪ್ರಧಾನಿ ಮೋದಿ

https://newsfirstlive.com/wp-content/uploads/2023/07/Modi-2-1.jpg

Load More