newsfirstkannada.com

ನಾಡಹಬ್ಬ ದಸರಾ ಟೈಂನಲ್ಲೇ ಏರ್​​ಶೋ? ರಕ್ಷಣಾ ಸಚಿವರ ಜೊತೆ ಸಿದ್ದರಾಮಯ್ಯ ಚರ್ಚಿಸಿದ್ದೇನು..?

Share :

Published August 4, 2023 at 6:43am

    ಮೋದಿಗೆ ಶ್ರೀಗಂಧದ ಅಂಬಾರಿಯ ಸ್ಮರಣಿಕೆ ಉಡುಗೊರೆ

    ಮೊದಲ ಬಾರಿಗೆ ಸಂಸತ್ ಭವನಕ್ಕೆ ಸಿದ್ದು ಭೇಟಿ

    ರಾಜ್ಯದ ಪಾಲಿನ GST ಬಿಡುಗಡೆಗೆ ಮನವಿ

ರಾಜಕೀಯ ಮೇಲಾಟ. ಚುನಾವಣೆ ಸಂಗ್ರಾಮ. ಮಾತಿನ ವಾಗ್ಬಾಣ. ಅದೆಲ್ಲವೂ ಈಗ ಇತಿಹಾಸದ ಕಾಲಗರ್ಭ ಸೇರಿದೆ. 2018ರಲ್ಲಿ ಮೋದಿ ಮೇಲುಗೈ ಸಾಧಿಸಿದ್ರೆ, 2023ರಲ್ಲಿ ಸಿದ್ದರಾಮಯ್ಯ ಸಮರದಲ್ಲಿ ಗೆದ್ದಿದ್ದಾರೆ. ದಕ್ಷಿಣ ಹೆಬ್ಬಾಗಿಲಲ್ಲಿ ಹಸ್ತೋತ್ಸವ ನಡೆಸಿದ ಸಿದ್ದು ಪಡೆ, ಗೆಲುವಿನ ಕೇಕೆ ಹಾಕಿ ಬಿಜೆಪಿಯನ್ನ ಧೂಳೀಪಟ ಮಾಡಿದೆ. ಸದ್ಯ ಗತವೈಭವಕ್ಕೆ ಮರಳಿರುವ ಕಾಂಗ್ರೆಸ್​ನ ಸಿದ್ದರಾಮಯ್ಯ, 2017ರ ಬಳಿಕ ಮೊದಲ ಬಾರಿಗೆ ಪ್ರಧಾನಿ ಮೋದಿ ಭೇಟಿ ಆಗಿದ್ದಾರೆ.

ರಾಜ್ಯಕ್ಕೆ ಬರಬೇಕಾದ ಅನುದಾನಗಳ ಪಟ್ಟಿಕೊಟ್ಟ ಸಿಎಂ!

ದೆಹಲಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಮೊದಲ ಬಾರಿಗೆ ನಿನ್ನೆ ಸಂಸತ್ ಭವನಕ್ಕೆ ಭೇಟಿ ನೀಡಿದ್ದರು. ಚುನಾವಣೆ ರಾಜಕೀಯ ಬಳಿಕ ಪ್ರಥಮ ಬಾರಿಗೆ ಪ್ರಧಾನಿ ಮೋದಿಯನ್ನ ಮುಖಾಮುಖಿ ಆದರು. ಮೈಸೂರು ಪೇಟ, ಶಾಲು ಹಾಕಿ ಸನ್ಮಾನಿಸಿದ್ರು. ಕರ್ನಾಟಕದ ಶ್ರೀಗಂಧದ ಹಾರ ಹಾಗೂ ಶ್ರೀಗಂಧದ ಅಂಬಾರಿಯ ಸ್ಮರಣಿಕೆಯನ್ನ ಉಡುಗೊರೆ ನೀಡಿದ್ದಾರೆ. ಈ ಸೌಹಾರ್ದಯುತ ಭೇಟಿ ಹಾಗೂ ಮಾತುಕತೆ ಆರಂಭದಲ್ಲಿ ಪರಸ್ಪರ ಆರೋಗ್ಯ ವಿಚಾರಿಸಿದ ಉಭಯ ನಾಯಕರು, ಬಳಿಕ ರಾಜ್ಯದ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದ್ದರು ಅಲ್ಲದೆ, ವಿವಿಧ ಯೋಜನೆಗಳಡಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಬಾಕಿ ಅನುದಾನ ಬಿಡುಗಡೆ ಬಗ್ಗೆ ಪ್ರಧಾನಿ ಗಮನಕ್ಕೆ ತಂದ್ದರು. ರಾಜ್ಯದ ಅಭಿವೃದ್ದಿ ಯೋಜನೆಗಳು ಹಾಗೂ ಬೃಹತ್ ನೀರಾವರಿ ಯೋಜನೆಗಳಿಗೆ ಕೇಂದ್ರದ ಸಹಕಾರವನ್ನು ಸಿಎಂ ಕೋರಿದ್ರು ಎಂದು ಗೊತ್ತಾಗಿದೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್​​ರನ್ನೂ ಸಿದ್ದರಾಮಯ್ಯ ಭೇಟಿ ಮಾಡಿದರು. ಈ ವೇಳೆ ಮೈಸೂರು ದಸರಾ ಮಹೋತ್ಸವದಲ್ಲಿ ಏರ್ ಶೋ ನಡೆಸುವಂತೆ ಮನವಿ ಮಾಡಿದ್ದಾರೆ. ಅಕ್ಟೋಬರ್ 15ಕ್ಕೆ ಮೈಸೂರು ದಸರಾ ಉದ್ಘಾಟನೆ ಆಗಲಿದೆ. ಈ ದಸರಾ ಹಬ್ಬಕ್ಕೆ ಏರ್‌ ಶೋ ನಡೆಸಲು ಅವರು ಮನವಿ ಮಾಡಿದ್ದರು. ಈ ಸಂಬಂಧ ಅಧಿಕೃತ ಮನವಿ ಪತ್ರವನ್ನ ರಾಜನಾಥ್ ಸಿಂಗ್ ನೀಡಿದ್ದಾರೆ. ಮೈಸೂರು ದಸರಾ ವಿಶ್ವವಿಖ್ಯಾತವಾಗಿದೆ. ಅಕ್ಟೋಬರ್ 24ರವರೆಗೆ ನಡೆಯಲಿರುವ ದಸರಾ ಹಬ್ಬದಲ್ಲಿ ಭಾಗಿಯಾದಲು ದೇಶ ವಿದೇಶದ ಜನ ಆಗಮಿಸ್ತಾರೆ. ಈ ಸಂದರ್ಭದಲ್ಲಿ ಏರ್ ಶೋ ನಡೆಸಿದರೆ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗಿಯಾಗಿ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿದೆ ಎಂದರು. ಈ ಹಿಂದೆ 2017 ಹಾಗೂ 2019ರ ದಸರಾ ವೇಳೆ ಇಂಡಿಯನ್‌ ಏರ್‌ಫೋರ್ಸ್‌ ಕಡೆಯಿಂದ ಮೈಸೂರಿನ ಟಾರ್ಚ್‌ ಲೈಟ್‌ ಪರೇಡ್‌ ಗ್ರೌಂಡ್‌ನಲ್ಲಿ ಸ್ಪೆಷಲ್‌ ಏರ್‌ಶೋ ನಡೆಸಲಾಗಿತ್ತು ಅನ್ನೋದನ್ನ ಗಮನಕ್ಕೆ ತಂದ್ದರು.

ರಾಜ್ಯವನ್ನೇ ಪ್ರತಿನಿಧಿಸುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನ ಸಿಎಂ ಭೇಟಿ ಮಾಡಿದ್ದರು. ಪ್ರಧಾನಿಯಂತೆ ನಿರ್ಮಲಾರಿಗೂ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ, ಗಂಧದ ಹಾರ ಹಾಕಿ, ಹಳದಿ ವರ್ಣದ ಶಾಲನ್ನು ಹೊದಿಸಿ ಸತ್ಕರಿಸಿದ್ದರು. ಈ ವೇಳೆ, ರಾಜ್ಯದ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದರು.

ರಾಜ್ಯಕ್ಕೆ ಬರಬೇಕಾದ ಜಿಎಸ್​ಟಿ ಪಾಲನ್ನು ಬಿಡುಗಡೆ ಮಾಡಲು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದಷ್ಟೇ ಅಲ್ಲ, ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿಯನ್ನೂ ಕೂಡ ಸಿಎಂ ಭೇಟಿ ಆದರು. ಈ ವೇಳೆ, ಸತೀಶ್​​ ಜಾರಕಿಹೊಳಿ ಜೊತೆಗಿದ್ದರು. ರಾಜ್ಯದಲ್ಲಿನ ಹೆದ್ದಾರಿಗಳ ಕಾಮಗಾರಿ, ಇನ್​​ಕಂಪ್ಲೀಟ್​​ ರಸ್ತೆಗಳ ಕುರಿತು ಗಮನಕ್ಕೆ ತಂದ್ರು. ಒಟ್ಟಾರೆ, ಕೇಂದ್ರದಿಂದ ಬರಬೇಕಿರುವ ಅನುದಾನ ಪಡೆದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಅಲ್ಪ ಸಹಕಾರ ಆಗಲಿದೆ ಅನ್ನೋದು ರಾಜ್ಯ ಸರ್ಕಾರ ನಂಬ್ಕೊಂಡಿದೆ. ಹಾಗಂತ ಕೇಂದ್ರ ಕೊಡುಗೈ ದಾನಿ ಆಗುತ್ತಾ? ಇಲ್ವಾ ಅನ್ನೋದು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಡಹಬ್ಬ ದಸರಾ ಟೈಂನಲ್ಲೇ ಏರ್​​ಶೋ? ರಕ್ಷಣಾ ಸಚಿವರ ಜೊತೆ ಸಿದ್ದರಾಮಯ್ಯ ಚರ್ಚಿಸಿದ್ದೇನು..?

https://newsfirstlive.com/wp-content/uploads/2023/08/SIDDARAMIAH.jpg

Load More