newsfirstkannada.com

ರಶ್ಮಿಕಾ, ಕತ್ರಿನಾ, ಕಾಜೋಲ್‌ ಬಳಿಕ ಮೋದಿ ಸರದಿ.. ಡೀಪ್‌ ಫೇಕ್ ವಿಡಿಯೋ ಬಗ್ಗೆ ಪ್ರಧಾನಿ ಕಳವಳ; ಹೇಳಿದ್ದೇನು?

Share :

17-11-2023

    ಚಿಕ್ಕಂದಿನಿಂದಲೂ ನಾನು ಎಂದಿಗೂ ಗರ್ಭಾ ನೃತ್ಯ ಮಾಡಿಯೇ ಇಲ್ಲ

    ನನ್ನದೇ ವಿಡಿಯೋ ಅತ್ಯಂತ ನೈಜ ರೀತಿಯಲ್ಲಿ ಎಡಿಟ್ ಮಾಡಲಾಗಿದೆ

    ಇದೇ ರೀತಿ ಬೇರೆಯವರ ಫೋಟೋ ಎಡಿಟ್ ಆಗಬಹುದು ಎಚ್ಚರ

ನವದೆಹಲಿ: ನ್ಯಾಷನಲ್‌ ಕ್ರಶ್ ರಶ್ಮಿಕಾ ಮಂದಣ್ಣ, ಬಾಲಿವುಡ್‌ ನಟಿಯರಾದ ಕತ್ರಿನಾ ಕೈಫ್, ಕಾಜೋಲ್ ಆಯ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಡೀಪ್ ಫೇಕ್‌ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. AI ಟೆಕ್ನಾಲಜಿಸ್ ಬಳಸಿ ಮೋದಿಯವರ ಗರ್ಭಾ ನೃತ್ಯ ಮಾಡುತ್ತಿರೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ.

ಈ ಡೀಪ್‌ ಫೇಕ್‌ ವಿಡಿಯೋಗಳನ್ನ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೂ ಗಮನಿಸಿದ್ದಾರೆ. ಇಂದು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ದೀಪಾವಳಿ ಮಿಲನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, AI ದುರುಪಯೋಗ ನಡೆಯುತ್ತಿರುವ ಬಗ್ಗೆ ಜನರಲ್ಲಿ ಮಾಹಿತಿ ನೀಡಬೇಕು ಎಂದು ಕರೆ ಕೊಟ್ಟಿದ್ದಾರೆ.
ಇದೇ ವೇಳೆ, ಡೀಪ್‌ ಫೇಕ್‌ಗಳು ಪ್ರಸ್ತುತ ಭಾರತೀಯ ವ್ಯವಸ್ಥೆಯು ಎದುರಿಸುತ್ತಿರುವ ಅತಿ ದೊಡ್ಡ ಬೆದರಿಕೆಗಳಲ್ಲಿ ಒಂದು ಎಂದು ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.

ನಕಲಿ ಮತ್ತು ನೈಜ ಕ್ಲಿಪ್‌ಗಳ ನಡುವೆ ವ್ಯತ್ಯಾಸವನ್ನು ಕಂಡು ಹಿಡಿಯುವುದು ಕಷ್ಟಕರವಾಗಿದೆ. ನನ್ನದೇ ವಿಡಿಯೋ ಅತ್ಯಂತ ನೈಜ ರೀತಿಯಲ್ಲಿ ಎಡಿಟ್ ಮಾಡಲಾಗಿದೆ. ಚಿಕ್ಕಂದಿನಿಂದಲೂ ನಾನು ಗರ್ಭಾ ನೃತ್ಯ ಆಡಿಲ್ಲ. ಆದರೆ AI ಬಳಸಿ ಫೋಟೋ ಎಡಿಟ್ ಮಾಡಲಾಗಿದೆ. ಇದೇ ರೀತಿ ಬೇರೆಯವರ ಫೋಟೋ ಕೂಡ ಎಡಿಟ್ ಆಗಬಹುದು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಇದು ಸಮಾಜದಲ್ಲಿ ಅವ್ಯವಸ್ಥೆಯನ್ನು ಉಂಟು ಮಾಡಬಹುದು. ಹೆಚ್ಚುತ್ತಿರುವ ಈ ಸಮಸ್ಯೆಯ ಬಗ್ಗೆ ಜನರಿಗೆ ಶಿಕ್ಷಣ ನೀಡಬೇಕು. ಡೀಪ್‌ ಫೇಕ್‌ಗಳಿಗಾಗಿ ಕೃತಕ ಬುದ್ಧಿಮತ್ತೆಯ ದುರುಪಯೋಗದ ಬಗ್ಗೆ ನಾಗರಿಕರು ಮತ್ತು ಮಾಧ್ಯಮಗಳು ಬಹಳ ಜಾಗರೂಕರಾಗಿರಬೇಕು ಎಂದು ಮೋದಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಶ್ಮಿಕಾ, ಕತ್ರಿನಾ, ಕಾಜೋಲ್‌ ಬಳಿಕ ಮೋದಿ ಸರದಿ.. ಡೀಪ್‌ ಫೇಕ್ ವಿಡಿಯೋ ಬಗ್ಗೆ ಪ್ರಧಾನಿ ಕಳವಳ; ಹೇಳಿದ್ದೇನು?

https://newsfirstlive.com/wp-content/uploads/2023/11/pm-modi-39.jpg

Load More