ಮೆಟ್ರೋದಲ್ಲಿ ಮೋದಿ ಮೋಡಿ.. ಅಲ್ಲೇ ಪ್ರಶ್ನೋತ್ತರ ..!
ಪ್ರಧಾನಿ ಬಳಿ ಮಾತನಾಡಿ ಖುಷಿ ವ್ಯಕ್ತಪಡಿಸಿದ ಪ್ರಯಾಣಿಕರು
ಅಷ್ಟಕ್ಕೂ ಮೋದಿ ಮೆಟ್ರೋ ಮೂಲಕ ಹೋಗಿದ್ದು ಎಲ್ಲಿಗೆ..?
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಏಕಾಏಕಿ ದೆಹಲಿಯ ಮೆಟ್ರೋದಲ್ಲಿ ಪ್ರಯಾಣಿಕರ ಜೊತೆ ಪ್ರಯಾಣ ಬೆಳೆಸಿದ್ದಾರೆ. ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರ ಜೊತೆ ಮಾತುಕತೆ ನಡೆಸಿ, ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಿದರು.
ದೆಹಲಿಯ ವಿಶ್ವವಿದ್ಯಾಲಯದ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಪ್ರಧಾನಿ ಮುಖ್ಯ ಅತಿಥಿಯಾಗಿ ಭಾಗಿಯಾಗಬೇಕಿತ್ತು. ಹೀಗಾಗಿ ತಮ್ಮ ನಿವಾಸದ ಬಳಿ ಇರುವ ಮೆಟ್ರೋ ನಿಲ್ದಾಣದಿಂದ ಪ್ರಯಾಣ ಬೆಳೆಸಿದರು. ಇನ್ನು ವಿವಿಯ ಶತಮಾನೋತ್ಸವದ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಲಾಗಿದೆ.
ಮೋದಿಯವರು ತಮ್ಮ ನಿವಾಸ ಸ್ಥಳದ ಬಳಿ ಇರುವ ಲೋಕ ಕಲ್ಯಾಣ ಮಾರ್ಗದಲ್ಲಿ ಮೇಟ್ರೋಗಾಗಿ ಕಾದು ನಿಂತಿದ್ದರು. ಈ ವೇಳೆ ಪ್ರಯಾಣಕರು ಪ್ರಧಾನಿಗಳನ್ನು ನೋಡಿ ಆಶ್ಚರ್ಯವಾಗಿದ್ದಾರೆ. ನಾವು ನೋಡುತ್ತಿರುವುದು ನಿಜವೇ ಎಂದು ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಂಡಿದ್ದಾರೆ. ಬಳಿಕ ಪ್ರಧಾನಿಯವರು ತಾವೇ ತೆಗೆದುಕೊಂಡ ಮೆಟ್ರೋ ಟಿಕೆಟ್ ತೆಗೆದುಕೊಂಡು ಲೋಕ ಕಲ್ಯಾಣ ಮಾರ್ಗದ ಮೂಲಕ 6.8 ಕಿಲೋ ಮೀಟರ್ ದೂರ ಇರುವ ದೆಹಲಿಯ ವಿಶ್ವವಿದ್ಯಾಲಯಕ್ಕೆ ಪ್ರಯಾಣ ಬೆಳೆಸಿದರು.
ದೆಹಲಿ ಮೆಟ್ರೋದಲ್ಲಿ ಪ್ರಧಾನಿ ನರೇಂದ್ರ ಮೋದಿ #PMModi #narendramodi #DelhiMetro #DelhiUniversity @narendramodi @narendramodi @BJP4Karnataka @BJP4India pic.twitter.com/NOJNmRzGsO
— NewsFirst Kannada (@NewsFirstKan) June 30, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ