Advertisment

ನಟ ಸುದೀಪ್​​ ತಾಯಿ ನಿಧನಕ್ಕೆ ಪ್ರಧಾನಿ ಸಂತಾಪ ಪತ್ರ; ಕಿಚ್ಚನಿಗೆ ಮೋದಿ ಸಾಂತ್ವನ

author-image
Veena Gangani
Updated On
ನಟ ಸುದೀಪ್​​ ತಾಯಿ ನಿಧನಕ್ಕೆ ಪ್ರಧಾನಿ ಸಂತಾಪ ಪತ್ರ; ಕಿಚ್ಚನಿಗೆ ಮೋದಿ ಸಾಂತ್ವನ
Advertisment
  • ಸುದೀಪ್ ತಾಯಿ ನಿಧನಕ್ಕೆ ಸಂತಾಪ ಸೂಚಿಸಿದ್ದ ಪ್ರಧಾನಿ‌ ಮೋದಿ
  • ಪ್ರಧಾನಿ ಮೋದಿ ಸಂತಾಪಕ್ಕೆ ಧನ್ಯವಾದ ಹೇಳಿದ ನಟ ಸುದೀಪ್
  • ಪತ್ರದ ಮೂಲಕ‌ ಕಿಚ್ಚ ಸುದೀಪ್​ಗೆ ಸಾಂತ್ವನ ಹೇಳಿದ್ದ ಭಾರತದ ಪ್ರಧಾನಿ

ಕನ್ನಡದ ನಟ ಕಿಚ್ಚ ಸುದೀಪ್​ ಅವರ ತಾಯಿ ಇತ್ತೀಚೆಗಷ್ಟೇ ನಿಧನರಾಗಿದ್ದರು. ಕಿಚ್ಚ ಸುದೀಪ್​ ಅವರ ತಾಯಿ ಇನ್ನಿಲ್ಲ ಎಂಬ ಸುದ್ದಿ ತಿಳಿದ ಕೂಡಲೇ ಸ್ಯಾಂಡಲ್​ವುಡ್​ ನಟ ನಟಿಯರು, ಅಭಿಮಾನಿಗಳು, ಕುಟುಂಬಸ್ಥರು, ಅದರಲ್ಲೂ ಕಿಚ್ಚ ಸುದೀಪ್​ ಅವರು ಅತೀವ ದುಃಖಿತರಾಗಿದ್ದರು.

Advertisment

ಇದನ್ನೂ ಓದಿ:BBK11: ಬಿಗ್​ಬಾಸ್​ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಐಶ್ವರ್ಯಾ.. ಆ ತಪ್ಪು ಮಾಡಬಾರದಿತ್ತು ಅಂತ ಹೇಳಿದ್ದೇಕೆ?

publive-image

ನಟ ಕಿಚ್ಚ ಸುದೀಪ್​ ಅವರ ತಾಯಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ರಾಜಕೀಯ ಗಣ್ಯರು ಕೂಡ ಸಂತಾಪ ಸೂಚಿಸಿದ್ದರು. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ಕಿಚ್ಚ ಸುದೀಪ್​ ಅವರ ತಾಯಿ ನಿಧನದ ಸುದ್ದಿ ಕೇಳಿ ಮರುಗಿದರು. ಹೀಗಾಗಿ ಕಿಚ್ಚ ಸುದೀಪ್​ ಅವರಿಗೆ ಅಕ್ಟೋಬರ್ 23ರಂದು ಪ್ರಧಾನಿ ಕಚೇರಿಯಿಂದ ಸಂತಾಪ ಪತ್ರವನ್ನು ಕಳುಹಿಸಿ ಕೊಡಲಾಗಿದೆ. ಇದೇ ವಿಚಾರವನ್ನು ಕಿಚ್ಚ ಸುದೀಪ್​ ಅವರು ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Advertisment


">October 28, 2024

ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ಪ್ರಧಾನಿ ನರೇಂದ್ರ ಮೋದಿ ಜಿ... ನಿಮ್ಮ ಸಹಾನುಭೂತಿಯ ಸಂತಾಪ ಪತ್ರಕ್ಕಾಗಿ ಪ್ರಾಮಾಣಿಕ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು ಈ ಆಳವಾದ ಕಷ್ಟದ ಸಮಯದಲ್ಲಿ ಸಾಂತ್ವಾನದ ಮೂಲಸೆಲೆಯನ್ನು ನೀಡಿದೆ. ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ. ನಿಮ್ಮ ವಿಶ್ವಾಸಕ್ಕೆ ನಾನು ಅಭಾರಿ ಅಂತ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment