newsfirstkannada.com

ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದ ವಸತಿ ಶಾಲೆಯ ಪ್ರಾಂಶುಪಾಲ.. ವಿದ್ಯೆ ಕಲಿಸುವ ಗುರುಗಳೇ ಹೀಗೆ ಮಾಡಿದ್ರೆ ಹೇಗೆ?

Share :

03-08-2023

  ಲಂಚಕ್ಕೆ ಆಸೆಪಟ್ಟು ಅರೆಸ್ಟ್​ ಆದ ಪಾಂಶುಪಾಲ

  25 ಸಾವಿರದ ಆಸೆಗೆ ಲೋಕಾಯುಕ್ತರ ಬಲೆಗೆ

  6ನೇ ತರಗತಿ ವಿದ್ಯಾರ್ಥಿಯ ಪ್ರವೇಶಕ್ಕೆ ಲಂಚದ ಬೇಡಿಕೆ

ಬೀದರ್​​: ವಸತಿ ಶಾಲೆಯ ಪ್ರಾಂಶುಪಾಲರೊಬ್ಬರು ಲಂಚ ಪಡೆಯುವಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದ ಪ್ರಕರಣ ಬಸವಕಲ್ಯಾಣ ತಾಲ್ಲೂಕಿನ ಮುಡಬಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಶಂಕರ್​ನನ್ನು ಅರೆಸ್ಟ್​​ ಮಾಡಲಾಗಿದೆ.

ಪ್ರಾಂಶುಪಾಲ ಶಂಕರ್ ಶಾಲೆಯಲ್ಲಿ ಮಕ್ಕಳಿಗೆ ಪ್ರವೇಶ ನೀಡಲು 25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 6ನೇ ತರಗತಿ ವಿದ್ಯಾರ್ಥಿಗೆ ಪ್ರವೇಶ ನೀಡಲು ಹಣದ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿತ್ತು. ಇದರ ಅನ್ವಯ ದಾಳಿ ನಡೆಸಿದ ಲೋಕಾಯುಕ್ತರ ತಂಡ ಪ್ರಾಂಶುಪಾಲ ಶಂಕರ್​ನನ್ನು ಬಂಧಿಸಿದ್ದಾರೆ.

ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಶಂಕರ್

ಯಲಗುಂಡಿ‌ ಗ್ರಾಮದ ನಾಗಶೆಟ್ಟಿ‌ ಪೂಜಾರಿ ಎಂಬುವರ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಶಂಕರ್​ 25 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಡಿವೈ‌ಎಸ್‌ಪಿ ಒಲೇಕರ್ ನೇತೃತ್ವದ ಅಧಿಕಾರಿಗಳಿಂದ ದಾಳಿ ನಡೆಸಿ ಲಂಚಕೋರನನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದ ವಸತಿ ಶಾಲೆಯ ಪ್ರಾಂಶುಪಾಲ.. ವಿದ್ಯೆ ಕಲಿಸುವ ಗುರುಗಳೇ ಹೀಗೆ ಮಾಡಿದ್ರೆ ಹೇಗೆ?

https://newsfirstlive.com/wp-content/uploads/2023/08/Principal-Shankar.jpg

Load More