newsfirstkannada.com

ಅಬ್ಬಾ.. ಮಗುವಿಗೆ ನಾಮಕರಣ.. ದರ್ಶನ್ ಕೈದಿ ನಂ. 6106 ಫುಲ್‌ ಟ್ರೆಂಡ್‌! ಏನೆಲ್ಲಾ ಮಾಡಿದ್ರು?

Share :

Published July 2, 2024 at 2:23pm

Update July 2, 2024 at 2:39pm

    ಕೊಲೆ ಕೇಸ್‌ನಲ್ಲಿ ಜೂನ್ 11ರಂದು ನಟ ದರ್ಶನ್ ಬಂಧನ

    ದರ್ಶನ್ ಕೈದಿ ನಂಬರ್ 6106 ಫೋಟೋಗಳು ಸಖತ್‌ ವೈರಲ್

    ಇದು ನಮ್ಮ ಬಾಸ್ ಹವಾ ಅಂತ ಅಭಿಮಾನಿಗಳು ಕಮೆಂಟ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಪಾಲಾಗಿದ್ದಾರೆ. ಕಳೆದ ಜೂನ್ 11ರಂದು ಬಂಧನವಾದ ದರ್ಶನ್ ಅವರು ಇಲ್ಲಿವರೆಗೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಸೆರೆವಾಸ ಅನುಭವಿಸುತ್ತಿದ್ದರೆ, ಅವರ ಅಭಿಮಾನಿಗಳು ಹೊರಗಡೆ ಒದ್ದಾಡುತ್ತಿದ್ದಾರೆ. ದರ್ಶನ್ ಅವರಿಗೆ ಜೈಲಾಧಿಕಾರಿಗಳು ಕೊಟ್ಟ ಕೈದಿ ನಂಬರ್ ಅನ್ನೇ ಟ್ರೆಂಡ್ ಆಗಿ ಮಾಡಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿ ಗಳಗಳನೆ ಕಣ್ಣೀರಿಟ್ಟ ನಟ ದರ್ಶನ್​​.. ತನ್ನ ತಾಯಿ ಜೊತೆಗೆ ಹೇಳಿದ್ದೇನು? 

ವಾಹನಗಳ ಮೇಲೆ ಕೈದಿ ನಂಬರ್ 6106 ಸ್ಟಿಕರ್ ಹಾಕಿದ್ದ ದರ್ಶನ್ ಅಭಿಮಾನಿಗಳು ಅದನ್ನೇ ಟ್ರೆಂಡ್‌ ಮಾಡಿದ್ದಾರೆ. ಅಭಿಮಾನಿಯೊಬ್ಬ ತನ್ನ ಕೈ ಮೇಲೆ ದರ್ಶನ್ ಕೈದಿ ನಂಬರ್ ಟ್ಯಾಟೋ ಹಾಕಿಸಿಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಈಗಾಗಲೇ ಹಲವು ಅಭಿಮಾನಿಗಳು ಕೈ ಮೇಲೆ ದರ್ಶನ್ ಕೈದಿ ನಂಬರ್ 6106ನ ಹಾಕಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಮಗುವಿಗೂ ಕೈದಿ ನಂಬರ್!
ದರ್ಶನ್ ಅಭಿಮಾನಿಗಳು ತಮ್ಮ ಕೈ ಮೇಲೆ ಟ್ಯಾಟು ಹಾಕಿಸಿಕೊಂಡಿರೋದು ಒಂದು ಕಡೆಯಾದ್ರೆ ಮತ್ತೊಂದೆಡೆ ಮಗುವಿನ ಫೋಟೋ ಶೂಟ್‌ನಲ್ಲಿ ದರ್ಶನ್ ಕೈದಿ ನಂಬರ್ ಟ್ರೆಂಡ್ ಆಗುತ್ತಿದೆ. ನಟನಿಗಾಗಿ ಹೆತ್ತ ಮಗುವನ್ನೇ ಅಭಿಮಾನಿಯೊಬ್ಬರು ಕೈದಿ ರೀತಿ ಬಿಳಿ ಬಟ್ಟೆ ಹಾಕಿ ಕೈ ಕೋಳ ಮಾದರಿ ಇಟ್ಟು ಫೋಟೋ ಶೂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಮಗುವಿಗೆ ಇದೇ ಕೈದಿ ನಂಬರ್ ನ್ನೇ ಹೆಸರಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ದರ್ಶನ್​ರನ್ನ ನೋಡಲು ಹುಬ್ಬಳ್ಳಿಯಿಂದ ಬಂದ ಅಜ್ಜಿ.. ನೆಚ್ಚಿನ ನಟನ ಕುರಿತು ಹೇಳುವುದೇನು? 

ಮಕ್ಕಳಿಗೆ ಕೃಷ್ಣನ ವೇಷ, ಸ್ವಾಮಿ ವಿವೇಕಾನಂದರು ವೇಷ, ಅಂಬೇಡ್ಕರ್‌ರಂತಹ ಗಣ್ಯ ವ್ಯಕ್ತಿಗಳ ರೀತಿಯ ಫೋಟೋ ಶೂಟ್ ಮಾಡಸಲಾಗಿತ್ತು. ಆದರೆ ದರ್ಶನ್ ಮೇಲಿನ ಅಭಿಮಾನಕ್ಕೆ ಫ್ಯಾನ್ಸ್‌ ಒಂದು ವರ್ಷದ ಮಗುವಿಗೆ ಕೈದಿ ನಂಬರ್ ಹಾಕಿ ಫೋಟೋ ಶೂಟ್ ಮಾಡಿದ್ದಾರೆ. ಮಗುವಿಗೆ ಈ ರೀತಿ ಕೈದಿ ಫೋಟೋ ಶೂಟ್ ಮಾಡಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಇನ್ನು, ಕೈದಿ ನಂಬರ್‌ನಲ್ಲಿ ದರ್ಶನ್ ಭಾವಚಿತ್ರ ಮೂಡಿ ಬಂದಿದ್ದು, ಇದು ನಮ್ಮ ಬಾಸ್ ಹವಾ ಅಂತ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ನಮ್ಮ ಬಾಸ್‌ಗೆ ಕೊಡುವ ಪ್ರಮೋಶನ್ ನೋಡಿ ಬರುವ ಎಲ್ಲ ಮೂವೀಗಳು ಸೂಪರ್ ಹಿಟ್ ಆಗಬೇಕು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ಮಗುವಿಗೆ ನಾಮಕರಣ.. ದರ್ಶನ್ ಕೈದಿ ನಂ. 6106 ಫುಲ್‌ ಟ್ರೆಂಡ್‌! ಏನೆಲ್ಲಾ ಮಾಡಿದ್ರು?

https://newsfirstlive.com/wp-content/uploads/2024/07/Darshan-fans-Khaidi-6106-2.jpg

Load More