newsfirstkannada.com

ಆಂಗ್ಲರ ನಾಡಲ್ಲಿ ಅಬ್ಬರದ ಬ್ಯಾಟಿಂಗ್.. ಪೃಥ್ವಿ ಶಾ ದ್ವಿಶತಕಕ್ಕೆ ಅಡ್ಬಿದ್ದ ಫ್ಯಾನ್ಸ್​

Share :

11-08-2023

    ಆಂಗ್ಲರ ನಾಡಲ್ಲಿ ಪೃಥ್ವಿ ಶಾ ಅಮೋಘ ಬ್ಯಾಟಿಂಗ್

    ಏಕದಿನ ವಿಶ್ವಕಪ್​ಗೂ ಮುನ್ನ ಗಮನ ಸೆಳೆದ ಶಾ

    153 ಎಸೆತಗಳಲ್ಲಿ 244 ರನ್​​​​​​​​​​​ ಸಿಡಿಸಿ ಮಿಂಚಿದ ಶಾ

ಮೊನ್ನೆ ಪೂಜಾರ. ಈಗ ಪೃಥ್ವಿ ಶಾ. ಟೀಮ್ ಇಂಡಿಯಾ ಕಮ್​​ಬ್ಯಾಕ್​ಗೆ ಹೆಣಗಾಡ್ತಿರುವ ಈ ಮುಂಬೈಕರ್, ಈಗ ಇಂಗ್ಲೆಂಡ್​ನ ರಾಯಲ್​​ ಒನ್​ಡೇ ಕಪ್​​ನಲ್ಲಿ ಅಬ್ಬರಿಸಿ ಬೊಬ್ಬೆರೆದಿದ್ದಾರೆ. ಅಷ್ಟೇ ಅಲ್ಲ.! ಅಂದು ಹಾಕಿದ್ದ ಸವಾಲು ಗೆಲ್ಲುವ ಹಾದಿಯಲ್ಲಿದ್ದಾರೆ.

ಪೃಥ್ವಿ ಶಾ. ಮೋಸ್ಟ್ ಡೇಂಜರಸ್ ಬ್ಯಾಟ್ಸ್​​ಮನ್. ಏಕದಿನ, ಟಿ20 ಫಾರ್ಮೆಟ್​ಗಂತೂ, ಪೃಥ್ವಿ ಹೇಳಿಮಾಡಿಸಿದ ಆಟಗಾರ. ಪೃಥ್ವಿ ಆರ್ಭಟಿಸೋಕೆ ಶುರು ಮಾಡಿದ್ರೆ, ಮೈದಾನದಲ್ಲಿ ನಾನ್​ಸ್ಟಾಪ್ ಬೌಂಡರಿ, ಸಿಕ್ಸರ್​ಗಳ ಸುರಿಮಳೆಯೇ ಆಗುತ್ತೆ. ಆದ್ರೆ, ಇಂತಹ ಡ್ಯಾಶಿಂಗ್ ಓಪನರ್​​​​​​​​​ ಟೀಮ್ ಇಂಡಿಯಾದಿಂದ ಔಟ್ ಆಗಿ 2 ವರ್ಷವೇ ಉರುಳಿವೆ. ಇದೀಗ ಕಮ್​​ಬ್ಯಾಕ್ ಶಪಥ ಮಾಡಿ ಇಂಗ್ಲೆಂಡ್​ಗೆ ಹಾರಿರುವ ಡೈನಾಮಿಕ್​ ಬ್ಯಾಟರ್ ಸೆಲೆಕ್ಷನ್ ಕಮಿಟಿಗೆ ಸಂದೇಶ ನೀಡಿದ್ದಾರೆ.

ಆಂಗ್ಲರ ನಾಡಲ್ಲಿ ಪೃಥ್ವಿ ಶಾ ವಿರೋಚಿತ ಬ್ಯಾಟಿಂಗ್​..!

ರಾಯಲ್​ ಲಂಡನ್​ ಒನ್​ ಡೇ ಕಪ್​ನ ಮೊದಲ ಪಂದ್ಯದಲ್ಲಿ ಕೇವಲ 34 ರನ್​ಗೆ ಇನ್ನಿಂಗ್ಸ್​ ಅಂತ್ಯಗೊಳಿಸಿದ್ದ ಪೃಥ್ವಿ ಶಾ,  2ನೇ ಪಂದ್ಯದಲ್ಲಿ ಸಿಡಿಲಬ್ಬರ ಬ್ಯಾಟಿಂಗ್ ನಡೆಸಿದ್ದಾರೆ. ನಾರ್ಥ್‌ಹ್ಯಾಂಪ್ಟನ್‌ಶೈರ್‌ ಪರ ಇನಿಂಗ್ಸ್ ಆರಂಭಿಸಿದ ಶಾ, ಸಾಮರ್‌ಸೆಟ್‌ ಬೌಲರ್‌ಗಳಿಗೆ ನಡುಕು ಹುಟ್ಟಿಸಿದ್ರು. ಮೊದಲ ಎಸೆತದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಪೃಥ್ವಿ ಶಾ, ದ್ವಿಶತಕ ಸಿಡಿಸಿದರು.

81 ಎಸೆತದಲ್ಲಿ 100 ರನ್​.. 129 ಎಸೆತದಲ್ಲಿ 200 ರನ್..!

ಹೌದು! ಈ ಅದ್ಬುತ ಇನ್ನಿಂಗ್ಸ್​ನಲ್ಲಿ 153 ಎಸೆತ ಎದುರಿಸಿದ ಪೃಥ್ವಿ ಶಾ, 8 ಭರ್ಜರಿ ಸಿಕ್ಸರ್‌ ಹಾಗೂ 25 ಮನಮೋಹಕ ಬೌಂಡರಿಗಳೊಂದಿಗೆ 244 ರನ್​​​ ಸಿಡಿಸಿದ್ರು. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಮೊದಲ 81 ಎಸೆತದಲ್ಲಿ ಶತಕ ಪೂರೈಸಿದ ಮುಂಬೈಕರ್​, ನಂತರದ 48 ಎಸೆತಗಳಲ್ಲೇ ಡಬಲ್ ಹಂಡ್ರೆಡ್​ ಸಿಡಿಸಿದರು. ಇದು ಪೃಥ್ವಿ ಕರಿಯರ್​ನ ಲಿಸ್ಟ್​ ಎ ಮಾದರಿಯ 2ನೇ ದ್ವಿಶತಕ.

ಪದೇ ಪದೇ ವೈಫಲ್ಯ, ಬೇಸತ್ತಿದ್ದ ಮುಂಬೈಕರ್​.!

18ನೇ ವಯಸ್ಸಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿರಿಸಿದ್ದ ಪೃಥ್ವಿ, ಬಂದಷ್ಟೇ ಬೇಗ ಹೊರಬಿದ್ದಿದ್ರು..  ಆಗೊಮ್ಮೆ ಈಗೊಮ್ಮೆ ಟೀಮ್ ಇಂಡಿಯಾಗೆ ಎಂಟ್ರಿ ನೀಡಿದರೂ, ಸಿಕ್ಕ ಅವಕಾಶ ಕೈಚೆಲ್ಲಿದ್ರು. ಅಷ್ಟೇ ಅಲ್ಲ.!  2023ರ ಐಪಿಎಲ್​​​ನಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಮುಂಬೈಕರ್, ಫಾರ್ಮ್​ ಕಂಡುಕೊಳ್ಳಲು ಇನ್ನಿಲ್ಲದ ಸರ್ಕಸ್ ನಡೆಸಿದ್ರು.

ಇದಿಷ್ಟೇ ಅಲ್ಲ! ಇಂಗ್ಲೆಂಡ್‌ಗೆ ಫ್ಲೈಟ್​​ ಹೇರುವ ಮುನ್ನ ದುಲೀಪ್‌ ಟ್ರೋಫಿಯಲ್ಲಿ ಸಂಪೂರ್ಣ ವಿಫಲರಾಗಿದ್ದ ಪೃಥ್ವಿ ಶಾ, ಇದಕ್ಕೂ ಮುನ್ನ ನಡೆದ ರಣಜಿ ಟ್ರೋಫಿ ಟೂರ್ನಿಯಲ್ಲೂ ಹೇಳಿಕೊಳ್ಳುವ ಪರ್ಫಾಮೆನ್ಸ್​ ನೀಡಿರಲಿಲ್ಲ.

 ಶಪಥ ಮಾಡಿ ಇಂಗ್ಲೆಂಡ್​ ಫ್ಲೈಟ್​ ಹೇರಿದ್ದ ಪೃಥ್ವಿ..!

ಟ್ಯಾಲೆಂಟ್​ ಇದ್ರೂ ಅಸ್ಥಿರ ಪ್ರದರ್ಶನದ ಕಾರಣಕ್ಕೆ ಮನನೊಂದಿದ್ದ ಪೃಥ್ವಿ, ಕಮ್​ಬ್ಯಾಕ್​ಗಾಗಿ ಇನ್ನಿಲ್ಲದ ಸರ್ಕಸ್​ ನಡೆಸಿದ್ರು. ತಂಡದಲ್ಲಿ ಸ್ಥಾನ ನೀಡದ ಸೆಲೆಕ್ಟರ್​ಗಳ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದರು. ಇಂಥಹ ಪರಿಸ್ಥಿತಿಯಲ್ಲಿ ಪೃಥ್ವಿಗೆ ಅವಕಾಶದ ಬಾಗಿಲು ತೆರೆದಿದ್ದು, ಇಂಗ್ಲೆಂಡ್​ನ ರಾಯಲ್ ಲಂಡನ್​ ಒನ್​​​ಡೇ ಕಪ್​. ಅದರಂತೆ ಇಂಗ್ಲೆಂಡ್​​ ಪ್ಲೈಟ್​ ಏರಿದ ಶಾ, ಡಬಲ್ ಸೆಂಚೂರಿಯೊಂದಿಗೆ ತಾಕತ್ತು ಪ್ರದರ್ಶಿಸಿದ್ದಾರೆ. ವಿಶ್ವಕಪ್​ಗೂ ಮುನ್ನ ಸೆಲೆಕ್ಟರ್​​ಗಳು ತಮ್ಮತ್ತ ತಿರುಗಿನೋಡುವಂತೆ ಮಾಡಿದ್ದಾರೆ.

ಅಂದು ಹಾಕಿದ್ದ ಸವಾಲು ಗೆಲ್ಲುವ ಹಾದಿಯಲ್ಲಿ ಮುನ್ನಡೆಯುತ್ತಿರುವ ಪೃಥ್ವಿ ಶಾ, ಕಮ್​​ಬ್ಯಾಕ್​​ ಕನಸು ನನಸು ಮಾಡಿಕೊಳ್ಳೋ ಕಾತರದಲ್ಲಿದ್ದಾರೆ. ಆದ್ರೆ, ವಿಶ್ವಕಪ್​ ತಂಡದಲ್ಲಿ ಸ್ಥಾನ ಸಿಗೋದು ಡೌಟ್​ ಆದ್ರೂ, ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡೋಕೆ ಅವಕಾಶವಿದೆ. ಆದ್ರೆ, ಈ ಕನಸು ನನಸಾಗಬೇಕಾದ್ರೆ, ಈ ರೌದ್ರವತಾರದ ಬ್ಯಾಟಿಂಗ್​​​​​​​​​​​​ ಮುಂದುವರಿಯಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಂಗ್ಲರ ನಾಡಲ್ಲಿ ಅಬ್ಬರದ ಬ್ಯಾಟಿಂಗ್.. ಪೃಥ್ವಿ ಶಾ ದ್ವಿಶತಕಕ್ಕೆ ಅಡ್ಬಿದ್ದ ಫ್ಯಾನ್ಸ್​

https://newsfirstlive.com/wp-content/uploads/2023/08/Pruthvi-shah-1.jpg

Load More