newsfirstkannada.com

×

ಬುದ್ಧಿ ಕಲಿಯದ ಪೃಥ್ವಿ ಶಾ.. ಟೀಂ ಇಂಡಿಯಾದಿಂದ ಗೇಟ್​ಪಾಸ್ ಬೆನ್ನಲ್ಲೇ ಮತ್ತೊಂದು ಬಿಗ್​ಶಾಕ್..!

Share :

Published October 23, 2024 at 12:43pm

Update October 25, 2024 at 6:21am

    ಫಿಟ್ನೆಸ್​ ಬಗ್ಗೆ ತಲೆಯೇ ಕೆಡಿಸಿಕೊಳ್ಳಲ್ಲ, ಹೋದಲೆಲ್ಲ ಅಶಿಸ್ತು

    ಗ್ರೌಂಡ್​​ಗೆ ಬಂದರೂ ನೆಟ್ಸ್​​ನಲ್ಲಿ ಕಾಲ ಕಳೆಯಲ್ಲವಂತೆ

    ಪೃಥ್ವಿ ವಿರುದ್ಧ ಮುಂಬೈ ಕ್ರಿಕೆಟ್​ ಸಂಸ್ಥೆ ದೃಢ ನಿರ್ಧಾರ

ಟೀಂ ಇಂಡಿಯಾದ ಸೆನ್ಸೇಷನಲ್ ಬ್ಯಾಟ್ಸ್​ಮನ್ ಆಗಿದ್ದ ಪೃಥ್ವಿ ಶಾ, ತಮ್ಮ ತಪ್ಪುಗಳಿಂದ ಇನ್ನೂ ಬುದ್ಧಿ ಕಲಿತಿಲ್ಲ. ಚಿಕ್ಕ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು, ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಂದಷ್ಟೇ ಬೇಗ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಕಳೆದುಕೊಂಡರು. ಇದೀಗ ದೇಶೀಯ ಕ್ರಿಕೆಟ್​ನಿಂದಲೂ ಅವರು ಹೊರಬಿದ್ದಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಮಾಧ್ಯಮ ವರದಿಗಳ ಪ್ರಕಾರ.. ಸಂಜಯ್ ಪಾಟೀಲ್ (ಅಧ್ಯಕ್ಷ), ರವಿ ಟಿ, ಜಿತೇಂದ್ರ ಠಾಕ್ರೆ, ಕಿರಣ್ ಪವಾರ್ ಮತ್ತು ವಿಕ್ರಾಂತ್ ಅವರನ್ನೊಳಗೊಂಡ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಆಯ್ಕೆ ಸಮಿತಿ ಪೃಥ್ವಿ ಶಾರನ್ನು ಕನಿಷ್ಠ ಒಂದು ರಣಜಿ ಪಂದ್ಯದಿಂದ ಕೈಬಿಡಲು ನಿರ್ಧರಿಸಿದೆ. ಅವರನ್ನು ಹೊರಗಿಡಲು ನಿರ್ದಿಷ್ಟ ಕಾರಣವನ್ನು ನೀಡಿಲ್ಲ. ಫಿಟ್‌ನೆಸ್ ಮತ್ತು ಶಿಸ್ತಿನ ವಿಚಾರದಲ್ಲಿ ಆಯ್ಕೆ ಸಮಿತಿಗೆ ಅಸಮಾಧಾನ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ರಾಹುಲ್​​ಗೆ ರಾಹುಕಾಲ; 2ನೇ ಟೆಸ್ಟ್​​ನಲ್ಲಿ ಕನ್ನಡಿಗನ ಸ್ಥಾನದ ಮೇಲೆ ಕಣ್ಣಿಟ್ಟ ಸ್ಟಾರ್​ ಕ್ರಿಕೆಟರ್

ಪೃಥ್ವಿ ಅವರ ಅಶಿಸ್ತು ಮುಂಬೈ ಕ್ರಿಕೆಟ್ ಸಂಸ್ಥೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆ ಮೂಲಕ ತಂಡದಿಂದ ಕೈಬಿಟ್ಟು ಪಾಠ ಕಲಿಸಲು ಮುಂದಾಗಿದೆ ಎನ್ನಲಾಗಿದೆ. ಯಾಕೆಂದರೆ ನೆಟ್ ಸೆಷನ್‌ಗೆ ಪೃಥ್ವಿ ತಡವಾಗಿ ಆಗಮಿಸ್ತಿದ್ದಾರಂತೆ, ಇದರಿಂದ ತಂಡದ ನಿರ್ವಹಣೆಗೆ ದೊಡ್ಡ ಚಿಂತೆಯಾಗಿದೆ. ಅವರು ನೆಟ್ ಸೆಷನ್‌ಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ತೂಕದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇದರಿಂದ ಕೋಚ್ ಹಾಗೂ ನಾಯಕ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.

ಪೃಥ್ವಿ ಶಾ ತಮ್ಮ ವೃತ್ತಿಜೀವನದಲ್ಲಿ 5 ಟೆಸ್ಟ್, 6 ODI ಮತ್ತು 1 T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 58 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 1 ಶತಕ ಮತ್ತು 2 ಅರ್ಧ ಶತಕಗಳೊಂದಿಗೆ 339 ರನ್ ಗಳಿಸಿದ್ದಾರೆ. ಇದರ ಹೊರತಾಗಿ ODI ನಲ್ಲಿ 189 ರನ್ ಗಳಿಸಿದ್ದಾರೆ.

ಇದನ್ನೂ ಓದಿ:ಪುಟಾಣಿ ಮಗಳನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಹರ್ಷಿಕಾ ಪೂಣಚ್ಚ ದಂಪತಿ; ಕ್ಯೂಟ್​ ವಿಡಿಯೋ ಇಲ್ಲಿದೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬುದ್ಧಿ ಕಲಿಯದ ಪೃಥ್ವಿ ಶಾ.. ಟೀಂ ಇಂಡಿಯಾದಿಂದ ಗೇಟ್​ಪಾಸ್ ಬೆನ್ನಲ್ಲೇ ಮತ್ತೊಂದು ಬಿಗ್​ಶಾಕ್..!

https://newsfirstlive.com/wp-content/uploads/2024/10/PRITVI.jpg

Load More