newsfirstkannada.com

ಸರ್ಕಾರಿ ಬಸ್​​ನಲ್ಲಿ ಮಹಿಳೆಯರಿಗೆ ಫ್ರೀ.. ಖಾಸಗಿ ಬಸ್ ಮಾಲೀಕರು ಕಂಗಾಲು.. ಸರ್ಕಾರದ ಮುಂದೆ ಹೊಸ ಪ್ರಸ್ತಾಪ..!

Share :

05-06-2023

    ಸರ್ಕಾರಿ ಬಸ್​​ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

    ಖಾಸಗಿ ಬಸ್ ಮಾಲೀಕರಿಗೆ ಮತ್ತೆ ತಲೆಬಿಸಿ

    ಸರ್ಕಾರದ ಮುಂದೆ ಹೊಸ ಪ್ರಸ್ತಾಪ ಇಟ್ಟ ಬಸ್ ಮಾಲೀಕರು

ಕೊಟ್ಟ ಮಾತಿನಂತೆ ಕಾಂಗ್ರೆಸ್ ಗ್ಯಾರಂಟಿ‌ ಜಾರಿ‌ ಮಾಡಿದೆ. ಮನೆಯೊಡತಿಗೆ 2000 ರೂಪಾಯಿ ಖಚಿತವಾಗಿದೆ. 200 ಯೂನಿಟ್ ವಿದ್ಯುತ್ ಉಚಿತ ಸಿಗುವುದರಲ್ಲಿದೆ. ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಫ್ರಿ ಪ್ರಯಾಣ ಘೋಷಿಸಿದೆ. ಹತ್ತು ಕೆಜಿ ಅಕ್ಕಿ ಸಿಗಲಿದೆ. ಜೊತೆಗೆ ಯುವನಿಧಿಗೂ ಮುಹೂರ್ತ ಫಿಕ್ಸ್​ ಮಾಡಿದೆ.

ಈ ಮೂಲಕ ಐದು ಭರವಸೆ ಈಡೇರಿಸುವ ಹೊರೆ ಇಳಿಸಿ ನಿಟ್ಟುಸಿರು ಬಿಟ್ಟಿದೆ. ಇದರ ನಡುವೆ ಸರ್ಕಾರಿ ಬಸ್​ಗಳಲ್ಲಿ ಮಾತ್ರ ಫ್ರೀ ಪ್ರಯಾಣದ ಬಗ್ಗೆ ವಿರೋಧ ವ್ಯಕ್ತವಾಗಿದೆ.‌ ಖಾಸಗಿ ಬಸ್ ಮಾಲೀಕರಿಂದ ಸರ್ಕಾರಕ್ಕೆ ಹೊಸ ಬೇಡಿಕೆಯೊಂದು ಬಂದಿದೆ.

ಜೂನ್ 11ರಿಂದ ಸಿದ್ದು ಸರ್ಕಾರ ರಾಜ್ಯದ ಎಲ್ಲಾ ಮಹಿಳೆಯರಿಗೆ ಸಾರಿಗೆ ಬಸ್ ಉಚಿತ ಪ್ರಯಾಣ ಅಂತ ಘೋಷಣೆ ಮಾಡಿದೆ. ಅದ್ರಂತೆ ಲಕ್ಷುರಿ ಬಸ್ ಹಾಗೂ ಸೆಮಿ‌ ಲಕ್ಷುರಿ ಬಸ್​ಗಳಲ್ಲಿ ಹೊರತುಪಡಿಸಿ ಎಲ್ಲಾ ಮಹಿಳೆಯರು ರಾಜ್ಯಾದ್ಯಂತ ಸರ್ಕಾರಿ ಬಸ್​ನಲ್ಲಿ ಉಚಿತವಾಗಿ‌ ಸಂಚರಿಸಬಹುದು. ಆದರೆ ಸಾರಿಗೆ ಸಂಸ್ಥೆಯ ಸುಮಾರು 12 ಸಾವಿರ ನಾರ್ಮಲ್ ಬಸ್​ನಿಂದ ಈ ಯೋಜನೆ ಯಶಸ್ವಿ ಅಸಾಧ್ಯ ಅಂತ ರಾಜ್ಯ ಖಾಸಗಿ ಬಸ್ ಮಾಲೀಕರ ಪೆಡರೆಷನ್ ಅಭಿಪ್ರಾಯಪಟ್ಟಿದೆ. ರಾಜ್ಯ ಸರ್ಕಾರಕ್ಕೆ ಹೊಸ‌‌ ಸಲಹೆಯೊಂದನ್ನು ನೀಡಿದೆ.
ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಬಳಿ‌ 23,978 ಬಸ್​ಗಳಿವೆ.

ಈ ಪೈಕಿ 10 ಸಾವಿರಕ್ಕೂ ಅಧಿಕ ಲಕ್ಷುರಿ ಬಸ್ ಹಾಗೂ ಸೆಮಿ ಲಕ್ಷುರಿ ಬಸ್ ಇವೆ. ಅಲ್ಲದೆ ಕರ್ನಾಟಕದ ಕೆಲವು ಭಾಗಗಳಲ್ಲಿನ ಹಲವು ಹಳ್ಳಿಗೆ ಇನ್ನೂ ಸಾರಿಗೆ ಬಸ್ ಸಂಪರ್ಕವೇ ಇಲ್ಲ. ಜೊತೆಗೆ ನಿತ್ಯ ಸಾರಿಗೆ ಬಸ್ ನಲ್ಲಿ ಅಂದಾಜು 80 ಲಕ್ಷ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಈ ಪೈಕಿ ಅರ್ಧಕರ್ಧ ಮಂದಿ ಮಹಿಳಾ ಪ್ರಯಾಣಿಕರು ಓಡಾಡ್ತರೆ.

ಇಷ್ಟೂ ಮಂದಿಗೆ 13 ಸಾವಿರ ಬಸ್​ಗಳಿಂದ ಸೇವೆ ಅಸಾಧ್ಯವಂತೆ. ಹೀಗಾಗಿ ಖಾಸಗಿ ಬಸ್​ಗಳನ್ನು ಒಳಗೊಂಡಂತೆ ಗ್ಯಾರಂಟಿ ಯೋಜನೆ ಕಾರ್ಯರೂಪಕ್ಕೆ ಬರಬೇಕು ಅಂತ ಕರ್ನಾಟಕ ರಾಜ್ಯ ಖಾಸಗಿ ಬಸ್ ಪೆಡರೆಷನ್ ಮನವಿ ಮಾಡಿದೆ. ಒಟ್ಟಾರೆ ಗ್ಯಾರಂಟಿ ಜಾರಿ‌ ಮಾಡಿ ನಿಟ್ಟುಸಿರು ಬಿಟ್ಟಿರುವ ಸರ್ಕಾರ, ಖಾಸಗಿ ಬಸ್​ಗಳಿಂದ ಬಂದ ಬೇಡಿಕೆಗೆ ಹೇಗೆ ಸ್ಪಂದಿಸುತ್ತೆ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಬಸ್​​ನಲ್ಲಿ ಮಹಿಳೆಯರಿಗೆ ಫ್ರೀ.. ಖಾಸಗಿ ಬಸ್ ಮಾಲೀಕರು ಕಂಗಾಲು.. ಸರ್ಕಾರದ ಮುಂದೆ ಹೊಸ ಪ್ರಸ್ತಾಪ..!

https://newsfirstlive.com/wp-content/uploads/2023/06/hasana-4.jpg

Load More