ನ್ಯೂಸ್ ಫಸ್ಟ್ ಇಂಪ್ಯಾಕ್ಟ್.. ದಶಕದ ಸಮಸ್ಯೆಗೆ ಪರಿಹಾರ
ದುಪ್ಪಟ್ಟು ಹಣ ವಸೂಲಿಗೆ ಮುಂದಾದ ಖಾಸಗಿ ಬಸ್
ಟಿಕೆಟ್ ದರ ನೋಡಿ ದಂಗಾದ ಪ್ರಯಾಣಿಕರು..!
ಬೆಂಗಳೂರು: ಸರ್ಕಾರ ಜಾರಿಗೊಳಿಸಿದ ಮಹತ್ತರ ಯೋಜನೆಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು. ಆದ್ರೆ ಇದೇ ಶಕ್ತಿ ಯೋಜನೆ ಎಫ್ಟೆಕ್ಟ್ನಿಂದ ಖಾಸಗಿ ಸಾರಿಗೆಯವರಿಗೆ ನಷ್ಟವಾಗಿದ್ದು, ನಮ್ಮ ಸಮಸ್ಯೆಗೆ ಪರಿಹಾರ ನೀಡಿ ಅಂತಾ ಸೆಪ್ಟೆಂಬರ್ 11 ರಂದು ಬೆಂಗಳೂರಿನಲ್ಲಿ ಪ್ರತಿಭಟನೆಗೂ ಇಳಿದಿದ್ರು. ಇದೀಗ ಖಾಸಗಿ ಬಸ್ ಮಾಲೀಕರು ಜನಸಾಮಾನ್ಯರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಗೌರಿ-ಗಣೇಶ ಹಬ್ಬ ಬಂತು. ಕೆಲಸಕ್ಕೆ ಬ್ರೇಕ್ ಹಾಕಿ ಊರಿಗೆ ತೆರಳಿ ಫ್ಯಾಮಿಲಿ ಜೊತೆ ಹಬ್ಬ ಸೆಲಬ್ರೇಟ್ ಮಾಡೋಣ ಹೊರಟಿದ್ದ ಪ್ರಯಾಣಿಕರಿಗೆ ಖಾಸಗಿ ಬಸ್ ಬಿಗ್ ಶಾಕ್ ನೀಡಿದೆ. ಆನ್ಲೈನ್ ಟಿಕೆಟ್ ದರವನ್ನ ದುಪ್ಪಟ್ಟು ಏರಿಕೆ ಮಾಡಿರೋ ಖಾಸಗಿ ಸಾರಿಗೆ ಇಲಾಖೆಗೆ ಜನರು ಹಿಡಿಶಾಪ ಹಾಕ್ತಿದ್ದಾರೆ.
ಗಣೇಶ ಚತುರ್ಥಿ ಹಬ್ಬ ಇರೋದ್ರಿಂದ ಬೆಂಗಳೂರಿಗರು ತಮ್ಮ ತಮ್ಮ ಊರಿಗೆ ತೆರಳೋ ನಿಮಿತ್ತ ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ್ದಾರೆ. ಆದ್ರೆ ಟಿಕೆಟ್ ರೇಟ್ ನೋಡಿದ ಪ್ರಯಾಣಿಕರು ಶಾಕ್ ಆಗಿದ್ದಾರೆ.
ನೋಡಿದ್ರಲ್ಲಾ 450 ರಿಂದ ಪ್ರಾರಂಭವಾದ ಮೊತ್ತ ಹೇಗೆ 2 ಸಾವಿರ ದಾಟಿದೆ ಅಂತಾ. ಇಷ್ಟೊಂದು ಹಣ ಟ್ರಾನ್ಸ್ಪಾರ್ ಮಾಡಿಕೊಂಡಿರೋದು ಯಾವುದೋ ಹೊರರಾಜ್ಯಕ್ಕೆ ತೆರಳೋಕೆ ಅಲ್ಲಾ. ಬದಲಾಗಿ ನಮ್ಮದೇ ರಾಜ್ಯದ ಬಳ್ಳಾರಿ, ಶಿವಮೊಗ್ಗ, ಬೆಳಗಾವಿ ಸೇರಿದಂತೆ ಇತರೆ ಊರಿಗೆ ತೆರಳಲು ಖಾಸಗಿ ಬಸ್ ಫಿಕ್ಸ್ ಮಾಡಿರೋ ದುಬಾರಿ ರೇಟ್. ಈ ಹಿಂದೆ 500 ರಿಂದ 700 ರೂಪಾಯಿ ಇದ್ದ ಮೊತ್ತ ದಿಢೀರ್ ಅಂತಾ ಏರಿಕೆಯಾಗಿದ್ದು ಪ್ರಯಾಣಿಕರು ಕಂಗಾಲಾಗಿದ್ದಾರೆ.
ಒಟ್ನಲ್ಲಿ ಸಾರಿಗೆ ಇಲಾಖೆ ಆದೇಶವನ್ನೂ ಮೀರಿ ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಿಂದ ಸಾವಿರಗಟ್ಟಲೆ ಹಣ ವಸೂಲಿ ಮಾಡ್ತಿರೋರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಹಾಗೂ ಪ್ರಯಾಣಿಕರ ಪ್ರಶ್ನೆಗಳಿಗೂ ಸಾರಿಗೆ ಇಲಾಖೆ ಉತ್ತರಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ