ಹಬ್ಬಕ್ಕೆಂದು ಊರಿಗೆ ಹೊರಟೋರಿಗೆ ಟಿಕೆಟ್ ಬೆಲೆ ಏರಿಕೆ ಬಿಸಿ!
ಹೆಚ್ಚುವರಿಯಾಗಿ 1200 ಬಸ್ಗಳನ್ನ ಬಿಟ್ಟ ಕೆಸ್ಆರ್ಟಿಸಿ ಸಂಸ್ಥೆ
ದುಬಾರಿ ಟಿಕೆಟ್ ದರ ನೀಡಲಾಗದೆ ಪ್ರಯಾಣಿಕರು ಕಂಗಾಲು
ಬೆಂಗಳೂರು: ಗಣೇಶ ಚತುರ್ಥಿ ಹಬ್ಬಕ್ಕೆಂದು ಊರಿಗೆ ತೆರಳೋಕೆ ಸಿದ್ಧವಾಗಿರೋರಿಗೆ ಸಾರಿಗೆ ಇಲಾಖೆಯವರು ಬೆಲೆ ಏರಿಕೆ ಹೆಚ್ಚಳ ಮಾಡಿ ಶಾಕ್ ನೀಡಿದ್ದಾರೆ. ಇಲಾಖೆ ಆಯುಕ್ತರ ಆದೇಶಕ್ಕೂ ಡೋಂಟ್ ಕೇರ್ ಅನ್ನದೇ ಖಾಸಗಿ ಬಸ್ನವರು ಪ್ರಯಾಣಿಕರಿಗೆ ಟಿಕೆಟ್ ಭಾರ ಹೊರಿಸುತ್ತಿದ್ದಾರೆ.
ಬೆಂಗಳೂರಿನಿಂದ ಹಬ್ಬಕ್ಕೆ ಹೊರಟೋರಿಗೆ ಟಿಕೆಟ್ ರೇಟ್ ಕೇಳಿ ದಂಗು ಬಡಿದಂತಾಗಿದೆ. ಒಂದು ಕಡೆ ಗಣೇಶ ಹಬ್ಬದ ಸಂಭ್ರಮ. ಮತ್ತೊಂದು ಕಡೆ ಖಾಸಗಿ ಬಸ್ನ ಟಿಕೆಟ್ ದರ ಹೆಚ್ಚಳ. ಗಣಪತಿ ಹಬ್ಬದ ಸಂಭ್ರಮದಲ್ಲಿದ್ದ ಪ್ರಯಾಣಿಕರ ಸಂತಸಕ್ಕೆ ಖಾಸಗಿ ಸಾರಿಗೆ ಬ್ರೇಕ್ ಹಾಕಿದೆ. ಇತ್ತ ದುಬಾರಿ ಟಿಕೆಟ್ ದರ ನೀಡಲಾಗದೆ ಪ್ರಯಾಣಿಕರು ಕಂಗಾಲಾಗಿದ್ದಾರೆ. ಹೌದು ಕೆಸ್ಆರ್ಟಿಸಿ ಹೆಚ್ಚುವರಿಯಾಗಿ 1200 ಬಸ್ಗಳನ್ನ ಬಿಟ್ಟರೂ ಕೂಡ ಖಾಸಗಿ ಬಸ್ 20% ದರ ಏರಿಕೆ ಮಾಡಿದೆ. ಬೆಂಗಳೂರಿನಿಂದ ವಿವಿಧ ಭಾಗಗಳಿಗೆ ತೆರಳುವವರು ಡಬಲ್- ತ್ರಿಬಲ್ ಹಣ ಕೊಟ್ಟು ಹೋಗಬೇಕಾಗಿದೆ.
ಖಾಸಗಿ ಬಸ್ ಮಾಲೀಕರಿಗೆ ಈಗಾಗಲೇ ಸಾರಿಗೆ ಇಲಾಖೆ ಆಯುಕ್ತ ಯೋಗೀಶ್ ಬಸ್ ದರ ಹೆಚ್ಚಳ ಮಾಡಿದ್ದಾರೆ. ಹೀಗಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತಾ ಎಚ್ಚರಿಕೆ ನೀಡಿದ್ದಾರೆ. ಆದ್ರೆ ಸಾರಿಗೆ ಇಲಾಖೆಯ ಎಚ್ಚರಿಕೆಯನ್ನೂ ಕಡೆಗಣಿಸಿ ಖಾಸಗಿ ಬಸ್ ಮಾಲೀಕರು ಹಾಗೂ ಟಿಕೆಟ್ ಬುಕ್ಕಿಂಗ್ ಕಂಪನಿಯವರು ಟಿಕೆಟ್ ದರ ಹೆಚ್ಚಿಸಿದ್ದಾರೆ.
ಖಾಸಗಿ ಬಸ್ ಹಳೆ- ಹೊಸ ದರ
ಬೆಂಗಳೂರು TO ಉಡುಪಿ- 700-800- 1400- 1800
ಬೆಂಗಳೂರು TO ಬೆಳಗಾವಿ- 800-900- 1500-2500
ಬೆಂಗಳೂರು TO ಹುಬ್ಬಳ್ಳಿ- 700-800- 1500-2000
ಬೆಂಗಳೂರು TO ಶಿವಮೊಗ್ಗ -700-800- 1200-1800
ಬೆಂಗಳೂರು TO ಕಲಬುರಗಿ-1000-1200- 1500-2000
ಬೆಂಗಳೂರು TO ರಾಯಚೂರು- 700-800- 1000-1400
ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳವಾಗಿರೋದು ಪ್ರಯಾಣಿಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಬಗ್ಗೆ ಸಾರಿಗೆ ಇಲಾಖೆ ಕಟ್ಟು ನಿಟ್ಟಿನ ಕ್ರಮ ವಹಿಸುವ ಅಗತ್ಯ ಇದೆ. ಹಾಗೂ ಟಿಕೆಟ್ ದರವನ್ನ ಕಡಿಮೆ ಮಾಡಿ ಪ್ರಯಾಣಿಕರ ಟಿಕೆಟ್ ಭಾರ ಇಳಿಸುವ ಕೆಲಸ ಸಾರಿಗೆ ಇಲಾಖೆ ಮಾಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ