FIR ಮಾಡಿಸಿದ್ದಕ್ಕೆ ಗ್ರಾ.ಪಂ ಸದಸ್ಯೆ ಖಾಸಗಿ ಫೋಟೋ ವೈರಲ್
ಖಾಸಗಿ ಫೋಟೋ ವೈರಲ್ ಮಾಡಿದ್ದು ಯಾರು ಅಲ್ಲ, ಪಂ. ಸದಸ್ಯರು!
ನಗ್ನ ಫೋಟೋ ರೀತಿ ಮಾಡಿ ವೈರಲ್ ಮಾಡಿದ ಆರೋಪಿ ವಿರುದ್ಧ ಕೇಸ್
ಬೆಂಗಳೂರು: ನಿಜಕ್ಕೂ ಇದೊಂದು ರಾಜಕೀಯದ ಅಶ್ಲೀಲತೆ. ಯಾವಾಗ ಎದರುರಾಳಿಯನ್ನ ಸೋಲಿಸಲು ಸಾಧ್ಯವಿಲ್ಲವೋ ಆಗ ಅವರನ್ನ ತೇಜೋವಧೆ ಮಾಡೋದಕ್ಕೆ ಮುಂದಾಗ್ತಾರೆ. ಇಲ್ಲೂ ಅದೇ ಆಗಿದೆ. ಮಹಿಳೆಯ ಖಾಸಗಿ ಚಿತ್ರಗಳನ್ನಿಟ್ಟುಕೊಂಡು ರಾಜಕೀಯ ಮಾಡಲು ಮುಂದಾಗಿದ್ದವರ ವಿರುದ್ಧ ಕಾನೂನು ಸಮರಕ್ಕೆ ಸಂತ್ರಸ್ತೆ ಮುಂದಾಗಿದ್ದಾಳೆ.
FIR ಮಾಡಿಸಿದ್ದಕ್ಕೆ ಗ್ರಾ.ಪಂ. ಸದಸ್ಯೆ ಖಾಸಗಿ ಫೋಟೋ ವೈರಲ್
ನೆಲಮಂಗಲದ ಟಿ. ಬೇಗೂರು ಪಂಚಾಯ್ತಿಯಲ್ಲಿ ನಡೆದ ಸಾಮನ್ಯ ಸಭೆಯಲ್ಲಿ ರೀ ಬೋರ್ ವೆಲ್ ವಿಚಾರಕ್ಕೆ ಜೆಡಿಎಸ್ನ ಗ್ರಾಮ ಪಂಚಾಯತಿ ಸದಸ್ಯ ಮುನಿರಾಜು ಕಾಂಗ್ರೆಸ್ ಸದಸ್ಯೆ ಮೇಲೆ ಗಲಾಟೆ ನಡೆಸಿ ಅವ್ಯಾಚ ಶಬ್ದಗಳಿಂದ ನಿಂದಿಸಿದ್ರು. ಹೀಗಾಗಿ ಕಾಂಗ್ರೆಸ್ ಸದಸ್ಯೆ ಇವರ ವಿರುದ್ಧ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ರು. FIR ಮಾಡಿಸಿದ್ದಕ್ಕೆ ಪಂಚಾಯ್ತಿ ಸದಸ್ಯೆಯದ್ದು ಎನ್ನಲಾದ ಖಾಸಗಿ ಫೋಟೋವನ್ನ ವೈರಲ್ ಮಾಡ್ತಿದ್ದಾರಂತೆ.
ಟಿ. ಬೇಗೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಮಹಿಳೆಯ ನಗ್ನ ಫೋಟೋವೊಂದು ವೈರಲ್ ಆಗ್ತಿದ್ದು, ಇದು ನನ್ನ ಫೋಟೋ ಅಂತ ಹೇಳಿ ವೈರಲ್ ಆಗ್ತಿದೆ ಅಂತ ಗ್ರಾಮ ಪಂಚಾಯತಿ ಸದಸ್ಯೆ ಎಸ್ಪಿ ಕಚೇರಿಗೆ ದೂರು ನೀಡಿದ್ದಾರೆ.
ಟಿ.ಬೇಗೂರು ಗ್ರಾಮ ಪಂಚಾಯತಿ ಸದಸ್ಯ ಬಿಕೆ ಮುನಿರಾಜು ಹಾಗೂ ವಸಂತ್ ಎಂಬುವವರ ವಿರುದ್ಧ ದೂರು ನೀಡಿರುವ ಸಂತ್ರಸ್ಥೆ, ನನ್ನ ಫೋಟೋವನ್ನ ಎಡಿಟ್ ಮಾಡಿ ಈ ರೀತಿ ವೈರಲ್ ಮಾಡ್ತಿದ್ದಾರೆ. ನನಗೆ ನ್ಯಾಯ ಕೊಡಿಸಿ ಅಂತ ಅಳಲು ತೋಡಿಕೊಂಡಿದ್ದಾರೆ.
ಸದ್ಯ ಪಂಚಾಯ್ತಿ ಸದಸ್ಯೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿದ್ದು, ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ. ಇನ್ನು ಟಿ.ಬೇಗೂರು ಗ್ರಾಮ ಪಂಚಾಯತಿ ಸದಸ್ಯನ ವಿರುದ್ದ ಎಸ್ಪಿಗೂ ಸಂತ್ರಸ್ತೆ ದೂರು ನೀಡಿದ್ದಾರೆ. ಅದೇನೆ ಇದ್ರು ರಾಜಕೀಯ ದ್ವೇಷವನ್ನ ಈ ರೀತಿ ವೈಯಕ್ತಿಕ ತೇಜೋವಧೆಗೆ ಬಳಸೋದು ಎಷ್ಟು ಸರಿ ಅಲ್ವಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ