newsfirstkannada.com

ಇಂದು ಸಿಲಿಕಾನ್ ಸಿಟಿಗೆ ಸಾರಥಿಗಳ ಅಷ್ಟದಿಗ್ಬಂಧನ.. ಪ್ರತಿಭಟನಾಕಾರರಿಂದ ಮೆರವಣಿಗೆ, ಫ್ರೀಡಂಪಾರ್ಕ್​ನಲ್ಲಿ ಶಕ್ತಿ ಪ್ರದರ್ಶನ..!

Share :

11-09-2023

  ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನಿಟ್ಟಿರುವ ಖಾಸಗಿ ಸಂಘಟನೆಗಳು

  ರಾಜಧಾನಿಯಲ್ಲಿ 7 ಲಕ್ಷಕ್ಕೂ ಹೆಚ್ಚು ವಾಹನಗಳು ಕಾರ್ಯಾಚರಣೆ ಸ್ಥಗಿತ

  ಪ್ರತಿಭಟನೆಕಾರರಿಂದ ಮೆರವಣಿಗೆ, ಫ್ರೀಡಂಪಾರ್ಕ್​ನಲ್ಲಿ ಶಕ್ತಿ ಪ್ರದರ್ಶನ..!

ಬೆಂಗಳೂರಿನ ಸಾರ್ವಜನಿಕರು ಕೆಲಸಕ್ಕೆ ಹೋಗಲು ಓಲಾ, ಊಬರ್, ಆಟೋ, ಟ್ಯಾಕ್ಸಿ ನಂಬಿಕೊಂಡಿದ್ರೆ ಕಷ್ಟ. ಯಾಕೆ ಅಂದ್ರೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಖಾಸಗಿ ಸಾರಿಗೆ ಸಂಘಗಳು ಬೆಂಗಳೂರು ಬಂದ್​​ಗೆ ಕರೆ ನೀಡಿದ್ದು ಖಾಸಗಿ ವಾಹನಗಳು ಇವತ್ತು ರಸ್ತೆಗಿಳಿಯಲ್ಲ. ಹೀಗಾಗಿ ಇವತ್ತು ಸಾರಿಗೆ ಸೇವೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ. ಈ ಮಧ್ಯೆ ಪ್ರಯಾಣಿಕರಿಗೆ ತೊಂದರೆ ಆಗದಂತೆ ಬಿಎಂಟಿಸಿ ಪ್ಲಾನ್ ಮಾಡಿದೆ.

ಮಧ್ಯರಾತ್ರಿ 12 ಗಂಟೆಯಿಂದಲೇ ‘ಖಾಸಗಿ’ ಮುಷ್ಕರ ಸ್ಟಾರ್ಟ್​!

ಆಟೋ, ಟ್ಯಾಕ್ಸಿ.. ಓಲಾ, ಉಬರ್.. ಗೂಡ್ಸ್ ವಾಹನ, ಖಾಸಗಿ ಬಸ್ ಈ ಎಲ್ಲಾ ಖಾಸಗಿ ಸಾರಿಗೆಗಳು ಮಧ್ಯರಾತ್ರಿಯಿಂದಲ್ಲೇ ಸಂಚಾರ ನಿಲ್ಲಿಸಿವೆ. ಈ ಮೂಲಕ ಸರ್ಕಾರಕ್ಕೆ ಸವಾಲ್​ ಹಾಕಿವೆ.

ಕಾರು ಚಾಲನೆ ಮಾಡದಂತೆ ಪ್ರತಿಭಟನಾಕಾರರಿಂದ ಡ್ರೈವರ್​ಗೆ ಎಚ್ಚರಿಕೆ

ಒಂದಲ್ಲ ಎರಡಲ್ಲ.. ಸುಮಾರು 35ಕ್ಕೂ ಹೆಚ್ಚು ಖಾಸಗಿ ಸಾರಿಗೆ ಸಂಘಟನೆಗಳು ಇಂದು ಮುಷ್ಕರಕ್ಕೆ ಕರೆಕೊಟ್ಟಿದ್ದು ಇವತ್ತು ಖಾಸಗಿ ಸಂಚಾರ ಸೇವೆಯಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ಯಾಕಂದ್ರೆ ಖಾಸಗಿ ಸಂಘಟನೆಗಳು ಸುಮಾರು 29 ಬೇಡಿಕೆಗಳನ್ನ ಸರ್ಕಾರದ ಮುಂದಿಟ್ಟಿದ್ವು. ಆಗಸ್ಟ್ 31 ರೊಳಗೆ ಬೇಡಿಕೆ ಈಡೇರಿಸುವಂತೆ ಹೇಳಿದ್ವು. ಆದ್ರೆ ಸರ್ಕಾರದಿಂದ ಯಾವುದೇ ಬೇಡಿಕೆ ಈಡೇರಿಲ್ಲ. ಹೀಗಾಗಿ ಮಧ್ಯರಾತ್ರಿಯಿಂದ ಖಾಸಗಿ ಸಾರಿಗೆ ಸಂಘಟನೆಗಳು ಮುಷ್ಕರ ಮಾಡುತ್ತಿವೆ.

7 ಲಕ್ಷಕ್ಕೂ ಹೆಚ್ಚು ವಾಹನಗಳು ಕಾರ್ಯಾಚರಣೆ ನಿಲ್ಲಿಸಲಿದ್ದು ರಾಜ್ಯ ರಾಜಧಾನಿ ಸ್ತಬ್ಧವಾಗುವ ಸಾಧ್ಯತೆ ಇದೆ. ಇನ್ನು ಬಂದ್​ನ ರೂಪುರೇಷೆ ಹೇಗಿದೆ ಅಂತ ನೋಡೋದಾದ್ರೆ,

 • ಮಧ್ಯರಾತ್ರಿಯಿಂದ ಇವತ್ತು ಮಧ್ಯರಾತ್ರಿವರೆಗೆ ಬಂದ್​
 • ಏರ್‌ಪೋರ್ಟ್​​ ಟ್ಯಾಕ್ಸಿ ಸಂಪೂರ್ಣ ಸ್ಥಗಿತವಾಗಲಿವೆ
 • ನಗರದೊಳಗೆ ಬೃಹತ್ ಮೆರವಣಿಗೆ ಮಾಡಲು ತಯಾರಿ
 • ಮೆರವಣಿಗೆ ಬಳಿಕ ಫ್ರೀಡಂಪಾರ್ಕ್​ನಲ್ಲಿ ಶಕ್ತಿ ಪ್ರದರ್ಶನ
 • ಪ್ರತಿಭಟನೆಯಲ್ಲಿ ಬೇರೆ ಜಿಲ್ಲೆಗಳ ಚಾಲಕರಿಗೂ ಅವಕಾಶ
 • 3 ಲಕ್ಷ ಆಟೋ, 1.5ಲಕ್ಷ ಟ್ಯಾಕ್ಸಿ, 20.000 ಗೂಡ್ಸ್ ವಾಹನ
 • ಐದು ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು
 • 80 ಸಾವಿರ ಸಿಟಿ ಟ್ಯಾಕ್ಸಿ, ಕಾರ್ಪೊರೇಟ್ ಕಂಪನಿ ಬಸ್ ಬಂದ್
 • ಒಟ್ಟು 5ಲಕ್ಷಕ್ಕೂ ಹೆಚ್ಚು ವಾಹನಗಳು ಸ್ತಬ್ಧವಾಗುವ ಸಾಧ್ಯತೆ
 • ಬೆಳಗ್ಗೆ 11 ಗಂಟೆಗೆ ಸಿಎಂ ಮನೆಗೆ ಮುತ್ತಿಗೆ ಹಾಕಲು ನಿರ್ಧಾರ
 • ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟದ ನಿರ್ಧಾರ

ನಾಲ್ಕು ದಿಕ್ಕುಗಳಿಂದ ಸಿಟಿಗೆ ಲಗ್ಗೆಯಿಡಲಿದ್ದಾರೆ ಚಾಲಕರು

ನೆಲಮಂಗಲ , ವೈಟ್ ಫೀಲ್ಡ್, ಕೆಂಗೇರಿ, ಕೆಆರ್ ಪುರಂ, ಹೆಬ್ಬಾಳ ಹೀಗೆ ನಗರದ ನಾಲ್ಕು ದಿಕ್ಕುಗಳಿಂದ್ಲೂ ಸಾರಥಿಗಳು ಱಲಿ ಮೂಲಕ ನಗರಕ್ಕೆ ಎಂಟ್ರಿ ಕೊಡಲಿದ್ದಾರೆ. ಱಲಿ ಹತ್ತಿಕ್ಕುವ ಪ್ರಯತ್ನವೇನಾದ್ರೂ ಪೊಲೀಸರು ಮಾಡಿದ್ರೆ ಸ್ಥಳದಲ್ಲೇ ರಸ್ತೆ ತಡೆದು ಪ್ರತಿಭಟನೆ ನಡೆಸಲು ಸಂಘಟನೆಗಳು ಪ್ಲಾನ್​ ಮಾಡಿವೆ. ಮೆರವಣಿಗೆ ಮೂಲಕ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣಕ್ಕೆ ಬರಲಿರುವ ಚಾಲಕರಿಂದ ಟ್ರಾಫಿಕ್​ ಜಾಮ್ ಕಿರಿಕಿರಿಯೂ ಇರಲಿದೆ.

ಕೆಲ ಶಾಲೆಗಳಿಗಷ್ಟೇ ರಜೆ ಘೋಷಣೆ, ಮಕ್ಕಳಲ್ಲಿ ಗೊಂದಲ

ಇವತ್ತು ಶಾಲೆ ಇರುತ್ತಾ ಇರಲ್ವಾ? ಅನ್ನೋ ಗೊಂದಲದಲ್ಲಿ ಶಾಲಾ ಮಕ್ಕಳ ಪೋಷಕರು ಇದ್ದಾರೆ. ಒಂದು ಕಡೆ ಶಾಲಾ ವಾಹನ ಬರಲ್ಲ, ಇನ್ನೊಂದು ಕಡೆ ಹಲವು ಶಾಲೆ ರಜೆ ಘೋಷಣೆ ಮಾಡಿಲ್ಲ. ಪಾಲಕ ಪೋಷಕರು ಸ್ವಂತ ಗಾಡಿಯಲ್ಲಿ ಮಕ್ಕಳನ್ನ ಶಾಲೆ ಕರೆ ತರುವಂತೆ ಸೂಚನೆ ನೀಡಲಾಗಿದೆ. ಆದ್ರೆ ನಗರದಲ್ಲಿ ದೊಡ್ಡ ಮಟ್ಟದ ಱಲಿ ನಡೆಯೋದ್ರಿಂದ ಸ್ವಂತ ಗಾಡಿಯ ಪಯಣವೂ ಕಬ್ಬಿಣದ ಕಡಲೆಯಾಗಿದೆ.

ಬಂದ್ ಹಿನ್ನೆಲೆಯಲ್ಲಿ ಮಾರ್ಕೆಟ್​ನಲ್ಲಿ ಬಸ್​ಗಳನ್ನ ಸಾಲಾಗಿ ನಿಲ್ಲಿಸಲಾಗಿದೆ

500 ಹೆಚ್ಚುವರಿ ಬಸ್​ಗಳನ್ನ ರಸ್ತೆಗಿಳಿಸಲಿರೋ ಬಿಎಂಟಿಸಿ

ಖಾಸಗಿ ಸಾರಿಗೆ ಮುಷ್ಕರಕ್ಕೆ ಸೆಡ್ಡು ಹೊಡೆಯೋಕೆ ಮುಂದಾಗಿರೋ ಸಾರಿಗೆ ಇಲಾಖೆ ಹೆಚ್ಚುವರಿ ಬಸ್ ಬಿಡಲು ನಿರ್ಧರಿಸಿದೆ. ಬಿಎಂಟಿಸಿಯ 500 ಬಸ್​ಗಳು ಹೆಚ್ಚುವರಿಯಾಗಿ ರಸ್ತೆಗಿಳಿಯಲಿದ್ರೆ, 4,000 ಟ್ರಿಪ್​ಗಳನ್ನ ಹೆಚ್ಚುವರಿಯಾಗಿ ಓಡಿಸಲು ನಿರ್ಧಾರ ಮಾಡಿದೆ. ಕೆಂಪೇಗೌಡ ಬಸ್ ನಿಲ್ದಾಣ, ಕೃ.ರಾ. ಮಾರುಕಟ್ಟೆ ಹಾಗೂ ಶಿವಾಜಿನಗರ ಬಸ್ ನಿಲ್ದಾಣಗಳಿಂದ ಬಸ್​​ಗಳು ಸಂಚಾರ ಆರಂಭಿಸಲಿವೆ. ಅಷ್ಟೇ ಅಲ್ಲ ಪ್ರಯಾಣಿಕರ ಅಧಿಕ ದಟ್ಟಣೆ ಕಂಡುಬಂದ ಮಾರ್ಗಗಳಲ್ಲಿ ಹೆಚ್ಚುವರಿ ಸಾರಿಗೆಗಳ ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ.

ಇವತ್ತು ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಈ ಹೆಚ್ಚುವರಿ ಬಸ್ ಸೇವೆ ಇರಲಿದ್ದು, ಮುಖ್ಯವಾಗಿ ಏರ್​ಪೋರ್ಟ್, ಸರ್ಜಾಪುರ, ಅತ್ತಿಬೆಲೆ, ಮೈಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಯಲಹಂಕ, ವೈಟ್ ಫೀಡ್ಡ್ ಹಾಗೂ ಔಟರ್ ರಿಂಗ್ ರಸ್ತೆ ಭಾಗದಲ್ಲಿ ಸಂಚಾರ ಮಾಡಲಿವೆ. ಎಲ್ಲ ಗೊಂದಲಗಳ ನಡುವೆ ಮುಷ್ಕರ ನಡೆಯೋದು ಪಕ್ಕಾ. ಅದಕ್ಕೆ ನೀವೂ ಪರ್ಯಾಯ ದಾರಿಗಳನ್ನ ಹುಡುಕಿಕೊಳ್ಳೋದು ಸೇಫ್​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಸಿಲಿಕಾನ್ ಸಿಟಿಗೆ ಸಾರಥಿಗಳ ಅಷ್ಟದಿಗ್ಬಂಧನ.. ಪ್ರತಿಭಟನಾಕಾರರಿಂದ ಮೆರವಣಿಗೆ, ಫ್ರೀಡಂಪಾರ್ಕ್​ನಲ್ಲಿ ಶಕ್ತಿ ಪ್ರದರ್ಶನ..!

https://newsfirstlive.com/wp-content/uploads/2023/09/BNG_BANDH_BUS.jpg

Load More