newsfirstkannada.com

ನಾಳೆ ಮಧ್ಯರಾತ್ರಿಯಿಂದ ಆಟೋ, ಕ್ಯಾಬ್​​, ಖಾಸಗಿ ಬಸ್​​ ಸಿಗಲ್ಲ.. ಜನ ಓದಲೇಬೇಕಾದ ಸ್ಟೋರಿ

Share :

09-09-2023

    ಗ್ಯಾರಂಟಿಗಳಿಂದ ಖಾಸಗಿ ವಾಹನಗಳ ಮಾಲೀಕರಿಗೆ ಹೊಡೆತ

    ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದ ಖಾಸಗಿ ಸಾರಿಗೆ ಒಕ್ಕೂಟ

    ನಾಳೆ ಮಧ್ಯರಾತ್ರಿಯಿಂದಲೇ ಬೀದಿಗಿಳಿಯಲ್ಲ ಆಟೋ, ಕ್ಯಾಬ್​ಗಳು!

ಬೆಂಗಳೂರು: ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಲಕ್ಷ್ಮೀ ಹೀಗೆ ಗ್ಯಾರಂಟಿಗಳ ಮೇಲೆ ಗ್ಯಾರಂಟಿ ಘೋಷಿಸಿ ಅಧಿಕಾರ ಹಿಡಿದಿರೋ ಕಾಂಗ್ರೆಸ್‌ ಸರ್ಕಾರಕ್ಕೆ, ಈ ಗ್ಯಾರಂಟಿ ಯೋಜನೆಗಳಿಂದಲೇ ಹೊಡೆತ ಬೀಳ್ತಿದೀಯಾ ಎಂಬ ಅನುಮಾನ ಶುರುವಾಗಿದೆ. ಶಕ್ತಿ ಯೋಜನೆಯಿಂದ ಖಾಸಗಿ ಬಸ್‌ನ ಕೇಳೋರಿಲ್ಲ. ಎಷ್ಟೇ ಹೊತ್ತು ಆದ್ರೂ ಸರಿ ಸರ್ಕಾರಿ ಬಸ್‌ಗೆ ಹೋಗ್ತೀವಿ ಅನ್ನೋ ಮಾತು ಕೇಳಿಬರ್ತಿದೆ. ಹೀಗಾಗಿ ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಅದೆಷ್ಟೋ ಹೊಡೆತ ಬಿದ್ದಿದೆ. ಇಷ್ಟು ದಿನ ಸುಮ್ಮನಿದ್ದ ಖಾಸಗಿ ಸಾರಿಗೆ ಒಕ್ಕೂಟ ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿದೆ.

ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ‘ಖಾಸಗಿ’ ಸಜ್ಜು
ನಾಳೆ ಮಧ್ಯರಾತ್ರಿ 12ಗಂಟೆಯಿಂದ ಖಾಸಗಿ ಸಂಚಾರ ಸ್ತಬ್ಧ!

ಶಕ್ತಿ ಯೋಜನೆ ಎಫೆಕ್ಟ್‌ನಿಂದಾಗಿ ನಷ್ಟದತ್ತ ಸಾಗ್ತಿರೋ ಖಾಸಗಿ ಸಾರಿಗೆ ಒಕ್ಕೂಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟು ಸೋಮವಾರ ಬಂದ್‌ಗೆ ಕರೆಕೊಟ್ಟಿವೆ. ನಾಳೆ ಮಧ್ಯರಾತ್ರಿ 12ಗಂಟೆಯಿಂದಲೇ ಯಾವುದೇ ಖಾಸಗಿ ವಾಹನಗಳು ಕೂಡ ರಸ್ತೆಗಿಳಿಯಲ್ಲ. ಸುಮಾರು 30ಕ್ಕೂ ಹೆಚ್ಚು ಸಂಘಟನೆಯಡಿ 7 ಲಕ್ಷಕ್ಕೂ ಹೆಚ್ಚು ವಾಹನಗಳ ಸಂಚಾರ ಬಂದ್ ಆಗಲಿದೆ.

ಬಂದ್‌ನ ರೂಪುರೇಷೆ..?

ಭಾನುವಾರ ಮಧ್ಯರಾತ್ರಿ 12 ಗಂಟೆಯಿಂದಲೇ ಖಾಸಗಿ ಸಾರಿಗೆ ಓಡಾಟ ಸ್ತಬ್ಧವಾಗಲಿದೆ. ಸೋಮವಾರ ಮಧ್ಯರಾತ್ರಿವರೆಗೆ ಅದೇ ಪರಿಸ್ಥಿತಿ ಮುಂದುವರೆಸಲು ಒಕ್ಕೂಟ ಮನವಿ ಮಾಡಿದೆ. ಏರ್‌ಪೋರ್ಟ್‌ ಟ್ಯಾಕ್ಸಿ ಕೂಡ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. ಮೆರವಣಿಗೆ ಬಳಿಕ ಫ್ರೀಡಂಪಾರ್ಕ್‌ನಲ್ಲಿ ಶಕ್ತಿ ಪ್ರದರ್ಶನ ಮಾಡಲಾಗುತ್ತೆ. ಅಲ್ದೇ ಪ್ರತಿಭಟನೆಯಲ್ಲಿ ಬೇರೆ ಜಿಲ್ಲೆಗಳ ಚಾಲಕರಿಗೂ ಭಾಗಿಯಾಗಲು ಒಕ್ಕೂಟ ಮನವಿ ಮಾಡಿದೆ.

ಇನ್ನು, ಸೋಮವಾರ ಆಗ್ತಿರೋ ಬಂದ್‌ಗೆ ಓಲಾ ಊಬರ್ ಚಾಲಕರು ಹಾಗೂ ಮಾಲೀಕರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಅನಧಿಕೃತವಾಗಿ ರನ್ ಆಗ್ತಾ ಇರೋ ಱಪಿಡೋ ಬ್ಯಾನ್‌ಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ತಿಳಿಸಿದ್ರು.

ಅಪ್ಪಿ ತಪ್ಪಿ ಗಾಡಿ ಓಡಿಸಿದ್ರೆ ಸಿಗುತ್ತೆ ಮೊಟ್ಟೆ ಭಾಗ್ಯ

ಒಂದು ವೇಳೆ ಸೋಮವಾರ ಬಂದ್‌ಗೆ ಬೆಂಬಲ ಕೊಡದೇ ಗಾಡಿ ಓಡಿಸಿದ್ರೆ ಮೊಟ್ಟೆ ಹೊಡಿತೀವಿ ಅಂತಾ ಕೆಲ ಟ್ಯಾಕ್ಸಿ ಚಾಲಕರು ವಾರ್ನಿಂಗ್ ಕೊಟ್ಟಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಲೇಬೇಕು. ನೀವೇನಾದ್ರೂ ಕದ್ದುಮುಚ್ಚಿ ಡ್ಯೂಟಿ ಮಾಡಿದ್ರೆ ಕಂಡಲ್ಲೇ ಮೊಟ್ಟೆ ಹೊಡೆಯುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಚಾಲಕರ ಒಕ್ಕೂಟ, ಇಂಡಿಯನ್ ವೆಹಿಕಲ್ಸ್ ಡ್ರೈವರ್ ಟ್ರೇಡ್ ಯೂನಿಯನ್, ಭಾರತ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್, ನಮ್ಮ ಚಾಲಕರ ಟ್ರೇಡ್ ಯೂನಿಯನ್ ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಇನ್ನು, ಬಂದ್‌ಗೆ ಬೆಂಬಲ ಸೂಚಿಸಿ ಕೆಲ ಖಾಸಗಿ ಶಾಲೆಗಳು ಕೂಡ ರಜೆ ಘೋಷಣೆ ಮಾಡಿವೆ.

ಒಟ್ನಲ್ಲಿ, ಸರ್ಕಾರದ ವಿರುದ್ಧ ಸಮರ ಸಾರಿರೋ ಖಾಸಗಿ ಸಾರಿಗೆ ಒಕ್ಕೂಟ ಬಂದ್‌ಗೇನು ಕರೆ ಕೊಟ್ಟಿವೆ. ಆದ್ರೆ ಇದ್ರಿಂದ ಅದೆಷ್ಟು ಜನ್ರಿಗೆ ಸಂಕಷ್ಟ ತರುತ್ತೋ..ಮತ್ಯಾವ ಬೆಳವಣಿಗೆ ಆಗುತ್ತೋ ಅನ್ನೋದು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಳೆ ಮಧ್ಯರಾತ್ರಿಯಿಂದ ಆಟೋ, ಕ್ಯಾಬ್​​, ಖಾಸಗಿ ಬಸ್​​ ಸಿಗಲ್ಲ.. ಜನ ಓದಲೇಬೇಕಾದ ಸ್ಟೋರಿ

https://newsfirstlive.com/wp-content/uploads/2023/07/Auto-Taxi-Bundh.jpg

Load More