newsfirstkannada.com

ಆಸ್ಟ್ರೇಲಿಯಾದಲ್ಲಿ ಮಕ್ಕಳಿಗಾಗಿ ಹೋರಾಟ; ನಿರಾಸೆಯಿಂದ ಸ್ವದೇಶಕ್ಕೆ ಬಂದು ಮಲಪ್ರಭಾ ನದಿಗೆ ಹಾರಿ ಪ್ರಾಣ ಬಿಟ್ಟ ತಾಯಿ

Share :

01-09-2023

    ಸಿಡ್ನಿಯಲ್ಲಿ ಪತಿ‌ ಹಾಗೂ ಮಕ್ಕಳೊಂದಿಗೆ ವಾಸಿಸುತ್ತಿದ್ದ ಎಂಜಿನಿಯರ್‌ ಪ್ರಿಯದರ್ಶಿನಿ

    ಧಾರವಾಡದಲ್ಲಿದ್ದ ತಂದೆಯ ಹೆಸರಿಗೆ ಎಲ್ಲಾ ವಸ್ತುಗಳನ್ನ ಪಾರ್ಸೆಲ್‌ ಮಾಡಿದ ಟೆಕ್ಕಿ

    ಮಕ್ಕಳನ್ನ ಸ್ವದೇಶಕ್ಕೆ ಕರೆತರಲು ಪ್ರಯತ್ನಿಸಿ ಸೋತು ಪ್ರಾಣತ್ಯಾಗ ಮಾಡಿದ ತಾಯಿ

ಧಾರವಾಡ: ಆಸ್ಟ್ರೇಲಿಯಾ ಪೌರತ್ವ ಪಡೆದಿದ್ದ ಧಾರವಾಡ ಮೂಲದ ಎಂಜಿನಿಯರ್‌ ಪ್ರಿಯದರ್ಶಿನಿ ಪಾಟೀಲ್‌ ಅವರು ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗನ ಆರೋಗ್ಯದ ಸಮಸ್ಯೆ ಬಗ್ಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಅವರು ಆಸ್ಟ್ರೇಲಿಯಾದಲ್ಲಿ ಕಾನೂನು ಹೋರಾಟ ನಡೆಸಿದ್ದರು. ಆಸ್ಟ್ರೇಲಿಯಾದಲ್ಲೇ ಕಿರುಕುಳಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ತವರು ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದ ಅವರು ತಮ್ಮ ಎಲ್ಲಾ ವಸ್ತುಗಳನ್ನು ತಂದೆಯ ಹೆಸರಿಗೆ ಪಾರ್ಸಲ್‌ ಕಳುಹಿಸಿ, ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಏನಿದು ಪ್ರಕರಣ..? 

ಧಾರವಾಡ ಮೂಲದ ಪ್ರಿಯದರ್ಶಿನಿ ಪಾಟೀಲ್​ ಇತ್ತೀಚೆಗೆ ಸ್ವದೇಶಕ್ಕೆ ಬಂದು ಮನೆಗೂ ಬಾರದೇ ನೇರವಾಗಿ ಮಲಪ್ರಭಾ ನದಿಗೆ ಹಾರಿ ಪ್ರಾಣ ಬಿಟ್ಟಿದ್ದರು. ತಮ್ಮ ಇಬ್ಬರು ಮಕ್ಕಳನ್ನು ಆಸ್ಟ್ರೇಲಿಯಾ ಸರ್ಕಾರ ಕಸ್ಟಡಿಗೆ ಪಡೆದಿದ್ದರಿಂದ ಮನನೊಂದ ಪ್ರಿಯದರ್ಶಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೂ ಮುಂಚೆ ಕೊರಿಯರ್ ಮಾಡಿದ್ದ ಪ್ರಿಯದರ್ಶಿನಿ ಅವರ ಡೆತ್ ನೋಟ್ ತಂದೆ ಅವರಿಗೆ ತಲುಪಿದೆ. ಆ ಡೆತ್ ನೋಟ್ ನಲ್ಲಿ ತಮ್ಮ ವಿರುದ್ಧ ಪಿತೂರಿ ಮಾಡಿ‌ ಮಕ್ಕಳು ಸರ್ಕಾರದ ಕಸ್ಟಡಿಗೆ ಹೋಗುವಂತೆ ಮಾಡಲಾಗಿದೆ ಅಂತಾ ಬರೆದಿದ್ದರು.

ಇದಾದ ಬಳಿಕ ಪ್ರಿಯದರ್ಶಿನಿ ಪಾಟೀಲ್​​ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮೃತಳ ತಂದೆ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಜೊತೆಗೆ ಕೇಂದ್ರ ವಿದೇಶಾಂಗ ಸಚಿವರ ಗಮನಕ್ಕೂ ತಂದಿದ್ದಾರೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿದ ವಿದೇಶಾಂಗ ಇಲಾಖೆ ಘಟನೆಯನ್ನು ಖಂಡಿಸಿ ಆಸ್ಟ್ರೇಲಿಯಾ ರಾಯಭಾರ ಕಚೇರಿಗೆ ಪತ್ರ ಬರೆದಿದೆ. ಈಗ ಈ ಪತ್ರಕ್ಕೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ರಾಯಭಾರ ಕಚೇರಿ ಘಟನೆಗೆ ವಿಷಾದ ವ್ಯಕ್ತಪಡಿಸಿದೆ.

ಪ್ರಿಯದರ್ಶಿನಿ ಅವರ ಮಕ್ಕಳು ಆಸ್ಟ್ರೇಲಿಯಾ ಸರ್ಕಾರದ ಸುಪರ್ದಿಯಲ್ಲಿಯೇ ಇದ್ದು, ಈಗ ತಾಯಿಯ ಸಾವಿನ ಬಳಿಕವೂ ಅವರನ್ನು ಪಾಲಕರಿಗೆ ಆಸ್ಟ್ರೇಲಿಯಾ ಸರ್ಕಾರ ಒಪ್ಪಿಸಿಲ್ಲ. ಅಲ್ಲಿನ ಕಠಿಣ ಕಾನೂನುಗಳ ಕಾರಣಕ್ಕೆ ಇಂತಹ ಸಂಕಷ್ಟ ಒದಗಿ ಬಂದಿದೆ. ‌ಯಾವಾಗ ಪ್ರಿಯದರ್ಶಿನಿ ಆತ್ಮಹತ್ಯೆ ಆಯಿತೋ ಆಗ ಇದೇ ರೀತಿ ದೇಶದ ಬೇರೆ ಬೇರೆ ಕಡೆಯ ಎನ್.ಐ.ಆರ್‌ಗಳ‌ ಮಕ್ಕಳು ಬೇರೆ ಬೇರೆ ದೇಶಗಳಲ್ಲಿ ಸಿಲುಕಿರೋ‌ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಪ್ರಿಯದರ್ಶಿನಿ ಆತ್ಮಹತ್ಯೆಯನ್ನೇ ಮುಂದಿಟ್ಟುಕೊಂಡು ಹೊರದೇಶಗಳಲ್ಲಿರೋ‌ ಮಕ್ಕಳನ್ನು ಸ್ವದೇಶಕ್ಕೆ ತರಲು ಆಗ್ರಹಿಸಿ ಆಂದೋಲನವೇ ಆರಂಭಗೊಂಡಿದೆ.

ತನ್ನ ಮಕ್ಕಳನ್ನು ಕರೆತರಲಾಗದ ತಾಯಿ ಕೊನೆಗೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಜೀವ ಕಳೆದುಕೊಂಡಿದ್ದಾರೆ. ಆದರೆ ಪ್ರಿಯದರ್ಶಿನಿಯ ಪ್ರಾಣತ್ಯಾಗ ವ್ಯರ್ಥವಾಗದೇ ಆಕೆಯ ಮಕ್ಕಳು ಮಾತ್ರವಲ್ಲ ಉಳಿದವರ ಮಕ್ಕಳು ಸ್ವದೇಶಕ್ಕೆ ಬರುವಂತೆ ಆಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ಟ್ರೇಲಿಯಾದಲ್ಲಿ ಮಕ್ಕಳಿಗಾಗಿ ಹೋರಾಟ; ನಿರಾಸೆಯಿಂದ ಸ್ವದೇಶಕ್ಕೆ ಬಂದು ಮಲಪ್ರಭಾ ನದಿಗೆ ಹಾರಿ ಪ್ರಾಣ ಬಿಟ್ಟ ತಾಯಿ

https://newsfirstlive.com/wp-content/uploads/2023/09/death-27.jpg

Load More