newsfirstkannada.com

ಮತ್ತೆ ಮೋದಿ ವಿದ್ಯಾರ್ಹತೆ ಬಗ್ಗೆ ಪ್ರಶ್ನೆ; ರಾಜ್ಯ ಬಿಜೆಪಿ-ಕಾಂಗ್ರೆಸ್​ ವಾಗ್ಯುದ್ಧಕ್ಕೆ ಮೂಲ ಕಾರಣ ಏನು ಗೊತ್ತಾ?

Share :

14-06-2023

  ಪ್ರಧಾನಿ ಮೋದಿ ವಿದ್ಯಾರ್ಹತೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ

  ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ನಾಯಕರು ಕೆಂಡಾಮಂಡಲ

  ಪ್ರಧಾನಿ ಮೋದಿಗೆ ಬೈದ ಮಾತ್ರಕ್ಕೆ ದೊಡ್ಡವರು ಆಗಲ್ಲ ಎಂದ ಬಿಜೆಪಿ

ಬೆಂಗಳೂರು: ರಾಜ್ಯದಲ್ಲಿ ಮಂತ್ರಿಗಳ ಎಜುಕೇಷನ್‌ ಕ್ವಾಲಿಫಿಕೇಷನ್‌ ಕುರಿತಂತೆ ಹೊಸದೊಂದು ಟಾಕ್​ವಾರ್​ ಶುರುವಾಗಿದೆ. ತಮ್ಮ ವಿದ್ಯಾರ್ಹತೆ ಪ್ರಶ್ನಿಸಿದ ಬಿಜೆಪಿಗೆ ತಿರುಗೇಟು ಕೊಟ್ಟಿರುವ ಸಚಿವ ಪ್ರಿಯಾಂಕ್‌ ಖರ್ಗೆ, ಪ್ರಧಾನಿ ವಿದ್ಯಾರ್ಹತೆ ಬಗ್ಗೆ ಪ್ರಶ್ನಿಸಿದ್ದಾರೆ. ಈ ಮೂಲಕ ವಾಗ್ಯುದ್ಧಕ್ಕೆ ರಣವೀಳ್ಯ ಕೊಟ್ಟಿದ್ದು, ಖರ್ಗೆ ಪ್ರಶ್ನೆಗೆ ಕೌಂಟರ್‌ ಕೊಡಲು ಕೇಸರಿ ಕಲಿಗಳು ಅಖಾಡಕ್ಕಿಳಿದಿದ್ದಾರೆ.

ಇತ್ತೀಚೆಗೆ ಪ್ರಧಾನಿ ಮೋದಿಯವರ ವಿದ್ಯಾರ್ಹತೆ ಭಾರೀ ಸದ್ದು ಮಾಡಿತ್ತು. ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲದೇ ರಾಜ್ಯಮಟ್ಟದಲ್ಲೂ ಮೋದಿ ಎಷ್ಟು ಓದಿದ್ದಾರೆನ್ನುವ ಪ್ರಶ್ನೆ ಅಷ್ಟ ದಿಕ್ಕುಗಳಲ್ಲೂ ಮಾರ್ಧನಿಸಿತ್ತು. ಅಲ್ಲದೇ ಬಿಜೆಪಿ ಅವಧಿಯ ಪಠ್ಯ ಪರಿಷ್ಕರಣೆ ಬಗ್ಗೆ ಮಾತನಾಡಿದ್ದ ಸಚಿವ ಪ್ರಿಯಾಂಕ ಖರ್ಗೆ, ಯಾವ ಆಧಾರದಲ್ಲಿ ಚಕ್ರವರ್ತಿ ಸೂಲಿಬೆಲೆ ಬರೆದ ಪಾಠವನ್ನ ಪುಸ್ತಕದಲ್ಲಿ ಸೇರ್ಪಡೆ ಮಾಡಿದ್ದಾರೆ? ಅವರು ಪಿಹೆಚ್‌ಡಿ ಮಾಡಿದ್ದಾರಾ ಅಂತ ಪ್ರಶ್ನಿಸಿದ್ದರು. ಸದ್ಯ ಇದೇ ಮಾತು ಖರ್ಗೆ ವರ್ಸಸ್​ ಬಿಜೆಪಿ ನಾಯಕರ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ.

‘ಪ್ರಧಾನ ಮಂತ್ರಿಗಳ ವಿದ್ಯಾರ್ಹತೆ ಏನು ಎಂಬುದನ್ನ ಹೇಳಲಿ’

ಅದ್ಯಾವಾಗ ಚಕ್ರವರ್ತಿ ಸೂಲಿಬೆಲೆ ಪಠ್ಯದ ಬಗ್ಗೆ ಪ್ರಿಯಾಂಕ ಖರ್ಗೆ ಮಾತಾಡಿ ಅವರ ಓದಿನ ಬಗ್ಗೆ ಮಾತಾಡಿದ್ರೋ ಬಿಜೆಪಿ ಕೂಡ ಪ್ರತಿಯಾಗಿ ಪ್ರಿಯಾಂಕ್‌ ಖರ್ಗೆ ಅಫಿಡವಿಟ್‌ ಶೇರ್‌ ಮಾಡಿತ್ತು. ತಾನು ಲಾ ಸ್ಕೂಲ್‌ನಲ್ಲಿ ಓದಿದ್ದಾಗಿ ಹೇಳಿಕೊಂಡಿದ್ದನ್ನೂ ಕೇಸರಿ ನಾಯಕರು ಪ್ರಶ್ನಿಸಿದ್ರು. ಸದ್ಯ ಈ ವಿದ್ಯಾರ್ಹತೆಯ ಟಾಕ್​ವಾರ್​ ತಾರಕಕ್ಕೆ ಹೋಗಿದೆ. ಇಂದು ಪ್ರಧಾನಮಂತ್ರಿಗಳ ವಿದ್ಯಾರ್ಹತೆ ಏನು ಅಂತ ಖರ್ಗೆ ಪುನರ್​ಪ್ರಶ್ನೆ ಕೇಳಿದ್ದಾರೆ. ನನ್ನ ವಿದ್ಯಾರ್ಹತೆ ಏನೆಂದು ಅಫಿಡವಿಟ್​ನಲ್ಲಿ ನೋಡಲಿ ಅಂತ ತಿರುಗೇಟು ಕೊಟ್ಟಿದ್ದಾರೆ.

ಮೋದಿ ವಿದ್ಯಾಭ್ಯಾಸ ಪ್ರಶ್ನಿಸಿದ್ದ ಖರ್ಗೆಗೆ ಸಿ.ಟಿ ರವಿ ಕೌಂಟರ್

ಇನ್ನು ಮೋದಿ ವಿದ್ಯಾಭ್ಯಾಸ ಪ್ರಶ್ನಿಸಿದ್ದಕ್ಕೆ ಸಚಿವ ಪ್ರಿಯಾಂಕ ಖರ್ಗೆಗೆ ಮಾಜಿ ಸಚಿವ ಸಿ.ಟಿ ರವಿ ಕೌಂಟರ್ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಒಬ್ಬ ಸಾಮಾನ್ಯ ವ್ಯಕ್ತಿ. ಚಹಾ‌ ಮಾರುವ ಹಿನ್ನೆಲೆಯಿಂದ ದೇಶದ ಪ್ರಧಾನಿ ಹುದ್ದೆಗೇರಿದವರು. ಪ್ರಿಯಾಂಕ್​ ಖರ್ಗೆ ದೊಡ್ಡ ಕುಟುಂಬದ ಹಿನ್ನಲೆಯಿಂದ ಬಂದವರು. ಪ್ರಧಾನಿ ಬಗ್ಗೆ ಮಾತ್ನಾಡಿ ಮತ್ತೆ ದೊಡ್ಡವರಾಗೋದು ಬೇಡ ಅಂತ ಕುಟುಕಿದ್ದಾರೆ.

ಒಟ್ಟಾರೆ ಪ್ರಧಾನಿ ಮೋದಿ ವಿದ್ಯಾಭ್ಯಾಸದ ಬಗ್ಗೆ ಮಾತಾಡಿ ಸಚಿವ ಪ್ರಿಯಾಂಕ್ ಖರ್ಗೆ ಹೊಸ ಟಾಕ್​ವಾರ್​ಗೆ ಮುನ್ನುಡಿ ಬರೆದಿದ್ದಾರೆ. ಇದಕ್ಕೆ ಕೇಸರಿ ಕಲಿಗಳು ಸರಿಯಾಗೇ ಠಕ್ಕರ್ ಕೊಡ್ತಿದ್ದಾರೆ. ಇದು ಮುಂದೆ ಮತ್ಯಾವ ಹಂತಕ್ಕೆ ಹೋಗುತ್ತೋ ಕಾದು ನೋಡ್ಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಮೋದಿ ವಿದ್ಯಾರ್ಹತೆ ಬಗ್ಗೆ ಪ್ರಶ್ನೆ; ರಾಜ್ಯ ಬಿಜೆಪಿ-ಕಾಂಗ್ರೆಸ್​ ವಾಗ್ಯುದ್ಧಕ್ಕೆ ಮೂಲ ಕಾರಣ ಏನು ಗೊತ್ತಾ?

https://newsfirstlive.com/wp-content/uploads/2023/06/Priyank-Kharge.jpg

Load More