/newsfirstlive-kannada/media/post_attachments/wp-content/uploads/2024/11/PRIYANKA-VADRA-4.jpg)
ವಯನಾಡು ಕ್ಷೇತ್ರದಿಂದ ಭರ್ಜರಿ ಗೆಲುವ ದಾಖಲಿಸಿ ಮೊದಲ ಬಾರಿಗೆ ಪಾರ್ಲಿಮೆಂಟ್​ ಪ್ರವೇಶ ಪಡೆದ ಪ್ರಿಯಾಂಕಾ ವಾದ್ರಾ ಗಾಂಧಿ, ತಮ್ಮ ಪ್ರವೇಶವನ್ನು ಕೇವಲ ಒಂದು ರಾಜಕೀಯ ಕ್ಷಣವನ್ನಾಗಿಸದೆ ಅದೊಂದು ವಿಶೇಷ ಹೆಗ್ಗುರುತನ್ನಾಗಿ ಮಾಡಿದ್ದಾರೆ. ಕೇರಳದ ಕಸುವಾ ಸಾರಿಯಲ್ಲಿ ಸಂಸತ್ ಪ್ರವೇಶಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ ಈ ಒಂದು ಉಡುಗೆಯಲ್ಲಿ ತಮ್ಮ ಅಜ್ಜಿ ಇಂದಿರಾ ಗಾಂಧಿಯನ್ನು ನೆನಪಿಸಿದರು. ಇಂದಿರಾ ಗಾಂಧಿಯವರು ಕೂಡ ತಮ್ಮ ರಾಜಕೀಯ ಕಾಲಘಟ್ಟದಲ್ಲಿ ಇದೇ ರೀತಿ ಸರಳ ಹಾಗೂ ಮಟ್ಟಸವಾಗಿ ಸೀರೆಯನ್ನುಟ್ಟುಕೊಂಡು, ನೆರಿಗೆಯ ತುದಿಯನ್ನು ಒದೆಯುತ್ತಾ ಸಂಸತ್ತಿಗೆ ಪ್ರವೇಶಿಸದರೆ ಇಡೀ ಪಾರ್ಲಿಮೆಂಟ್ ಮೂಕ ವಿಸ್ಮಿತಗೊಂಡು ಇಂದಿರಾ ಅವರನ್ನು ನೋಡುತ್ತಿತ್ತು.
ಈಗ ಪ್ರಿಯಾಂಕಾ ಗಾಂಧಿ ವಾದ್ರಾ ಪಾರ್ಲಿಮೆಂಟ್​ಗೆ ಎಂಟ್ರಿ ಕೊಟ್ಟ ರೀತಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನೇ ನೆನಪಿಸುವಂತಿತ್ತು.
ಇಂದಿರಾ ಗಾಂಧಿಯವರೊಂದಿಗೆ ಪ್ರಿಯಾಂಕಾ ವಾದ್ರಾ ಅವರನ್ನು ಹೋಲಿಕೆ ಮಾಡುತ್ತಿರುವುದು ಕೇವಲ ಹೊಗಳಿಕೆಗೆ ಅಲ್ಲ. ಮೂರು ಬಾರಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಇಂದಿರಾ ಗಾಂಧಿಯವರು ಕೂಡ ಸಾಮಾನ್ಯ ಜನರು ಉಡುವಂತಹ ಉಡುಗೆಗಳನ್ನು ಧರಿಸಿಯೇ ಸಂಸತ್​ಗೆ ಬರುತ್ತಿದ್ದರು. ಅದು ದೇಶದ ಜನರೊಂದಿಗೆ ಸರಳವಾಗಿ ಅವರ ಜೊತೆ ಸಂಪರ್ಕ ಬೆಳೆಸುತ್ತಿತ್ತು. ಅದೇ ಭಾವನಾತ್ಮಕ ನಂಟನ್ನು ಈಗ ಪ್ರಿಯಾಂಕ ಗಾಂಧಿಯವರು ಉಟ್ಟ ಸೀರೆ ನೆನಪಿಸಿದೆ.
ಇದನ್ನೂ ಓದಿ:ಇಂದು ದಿಢೀರ್ ದೆಹಲಿಗೆ ಸಿದ್ದರಾಮಯ್ಯ.. ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆ; 5 ಕಾರಣಗಳು!
/newsfirstlive-kannada/media/post_attachments/wp-content/uploads/2024/11/PRIYANKA-VADRA-5.jpg)
ಮೊದಲ ಬಾರಿ ಸಂಸತ್ ಪ್ರವೇಶಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ನಾನು ಇಂದು ಸಂಸದೆಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸುವಾಗ ನನ್ನ ಅಜ್ಜಿ ಇಂದಿರಾಗಾಂಧಿಯವರೇ ನೆನಪಾದರು. ನನ್ನ ತಂದೆಯೂ ಕೂಡ ನೆನೆಪಾದರು ಎಂದು ಹೇಳಿದರು.ಕಸುವಾ ಸಾರಿ ಕೇವಲ ಒಂದು ಧಿರಿಸು ಅಲ್ಲ ಅದು ಕೇರಳದ ಸಂಸ್ಕೃತಿ ಹಾಗೂ ಒಗ್ಗಟ್ಟಿನ ಗುರುತು. ಪ್ರಿಯಾಂಕಾ ಗಾಂಧಿ ಇಂದು ಉಟ್ಟುಕೊಂಡು ಬಂದಿದ್ದ ಕಸುವಾ ಸೀರೆ ಕೇರಳದ ಅದರಲ್ಲೂ ವಯನಾಡು ಜನರಿಗೆ ತಮ್ಮನ್ನು ಗೆಲ್ಲಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸುವ ರೀತಿಯಲ್ಲಿತ್ತು. ಈ ಒಂದು ಸಾರಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವಂತಹ ಕೈಯಿಂದ ನೇಯ್ದಿರುವಂತ ಸಾರಿ. ತಮ್ಮ ಅಜ್ಜಿಯಂತೆ ಸಾಮಾನ್ಯರು ಉಡುವ ಸೀರೆಯನ್ನುಟ್ಟು ಬಂದಿದ್ದ ಪ್ರಿಯಾಂಕಾ ಇಂದಿರಾ ಅವರ ಪ್ರತಿರೂಪದಂತೆ ಕಂಡರು.
/newsfirstlive-kannada/media/post_attachments/wp-content/uploads/2024/11/PRIYANKA-VADRA-3.jpg)
ಪ್ರಿಯಾಂಕಾ ಪ್ರತಿಜ್ಞಾ ವಿಧಿ ಸ್ವೀಕರಿಸುವಾಗ ಅವರ ತಾಯಿ ಸೋನಿಯಾ ಗಾಂಧಿ, ಸಹೋದರ ರಾಹುಲ್ ಗಾಂಧಿ, ಪುತ್ರ ಪುತ್ರಿಯರಾದ ರೈಹಾನ್ ವಾದ್ರಾ ಹಾಗೂ ಮರಿಯಾ ವಾದ್ರಾ ಮತ್ತು ಪತಿ ರಾಬರ್ಟ್ ವಾದ್ರಾ ಪಾರ್ಲಿಮೆಂಟ್​ನಲ್ಲಿ ಹಾಜರಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us