ಕಿಚ್ಚ ಸುದೀಪ್ ಅವರಿಂದ ನನಗೆ 36 ಲಕ್ಷ ನಷ್ಟವಾಗಿದೆ ಎಂದ ರೆಹಮಾನ್
ಸುದ್ದಿಗೋಷ್ಠಿಯಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಹುಚ್ಚ ಚಿತ್ರದ ನಿರ್ಮಾಪಕ
ಯಾವ ದೇವರ ಮೇಲೆ ಆಣೆ ಮಾಡಲು ಸಿದ್ಧನಿದ್ದೇನೆ ಎಂದ ರೆಹಮಾನ್
ಸ್ಯಾಂಡಲ್‌ವುಡ್ ನಿರ್ಮಾಪಕ ಎನ್. ಕುಮಾರ್ ಹಾಗೂ ಕಿಚ್ಚ ಸುದೀಪ್ ಮಧ್ಯೆ ಕಳೆದ ಎರಡು ವಾರದಿಂದ ಗಂಭೀರ ಆರೋಪಗಳು ಕೇಳಿ ಬರುತ್ತಲೇ ಇದೆ. ಮೊದಲಿಗೆ ನಟ ಸುದೀಪ್ ವಿರುದ್ಧ ಎಮ್.ಎನ್ ಕುಮಾರ್ ಅವರು 10 ಕೋಟಿ ರೂಪಾಯಿಯ ಆರೋಪ ಮಾಡಿದ್ದರು. ನಿರ್ಮಾಪಕ ಸಂಘ ಹಾಗೂ ನಟ ಕಿಚ್ಚ ಸುದೀಪ್ ಪರವಾಗಿ ಅವರ ಆಪ್ತ ಜಾಕ್ ಮಂಜುನಾಥ್ ಈ ಕುರಿತು ಸಮರ್ಥನೆ ನೀಡಿದ್ದರು. ಇದೀಗ ಈ ಕೋಟಿ ಗಲಾಟೆ ಫಿಲ್ಮ್ ಚೇಂಬರ್ ಬಿಟ್ಟು ನ್ಯಾಯಾಲಯದ ಮೆಟ್ಟಿಲಿನಲ್ಲಿ ನಿಂತಿದೆ. ವಿಷಯ ಹೀಗಿರುವಾಗ ಇದರ ಮಧ್ಯೆ ನಟ ಸುದೀಪ್ ಅವರ ವಿರುದ್ಧ ಮತ್ತೊಂದು ಸ್ಫೋಟಕ ಮಾಹಿತಿಯನ್ನ ನಿರ್ಮಾಪಕ ರೆಹಮಾನ್ ಬಿಚ್ಚಿಟ್ಟಿದ್ದಾರೆ.
ನಿರ್ಮಾಪಕ ರೆಹಮಾನ್ ಅವರು ಸ್ಯಾಂಡಲ್ವುಡ್ನಲ್ಲಿ ಹಿರಿಯ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಯಜಮಾನ ಹಾಗೂ ಸುದೀಪ್ ಅವರ ಕರಿಯರ್ನಲ್ಲೇ ಮಾಸ್ ಹಿಟ್ ಇಮೇಜ್ ತಂದು ಕೊಟ್ಟ ಹುಚ್ಚ ಸಿನಿಮಾ ನಿರ್ಮಾಪಕರು ರೆಹಮಾನ್. ಇದೇ ರೆಹಮಾನ್ ಈಗ ನಟ ಸುದೀಪ್ ಅವರಿಂದ ನನಗೆ 36 ಲಕ್ಷ ನಷ್ಟವಾಗಿದೆ. ಅವರು ಸಿನಿಮಾ ಮಾಡೋದಾಗಿ ಹೇಳಿದ್ದರಿಂದ ನಾನು ಮೂರು ಸಿನಿಮಾ ರಿಮೇಕ್ ರೈಟ್ಸ್ ಅನ್ನ ಮತ್ತು ಐದು ಲಕ್ಷ ಅಡ್ವಾನ್ಸ್ ಅನ್ನ ಕೊಟ್ಟಿದೇನೆ. ಐದು ಲಕ್ಷದಲ್ಲಿ 1.5 ಲಕ್ಷ ನನಗೆ ವಾಪಸ್ ಕೊಟ್ಟಿದ್ದಾರೆ. ಆದರೆ ಇನ್ನೂಳಿದ ದುಡ್ಡ ಸುದೀಪ್ ಅವರಿಂದ ವಾಪಸ್ ಬಂದಿಲ್ಲ ಎಂದು ಆರೋಪ ಮಾಡಿದ್ದಾರೆ.
ಈ ಬಗ್ಗೆ ನಾನು ಸುದೀಪ್ ಅವರ ಬಳಿ ಹಲವು ಬಾರಿ ಸಾವಿರಾರು ಬಾರಿ ಮಾತನಾಡಿದ್ದೇನೆ. ದಿಕ್ಕು ದೋಚದೆ ನಿರ್ಮಾಪಕ ಸಂಘಕ್ಕೂ ದೂರು ಕೋಡೊದಕ್ಕೆ ಮುಂದಾಗಿದ್ದೆ. ಆದರೆ ಏನೂ ಪ್ರಯೋಜನವಾಗಿಲ್ಲ. ಈಗ ನಿರ್ಮಾಪಕ ಎನ್.ಕುಮಾರ್ ಅವರಿಗೆ ಆದ ಅನ್ಯಾಯದ ವಿಚಾರ ಕೇಳಿದಾಗ ನಾನು ಕೂಡ ಮಾಧ್ಯಮಗಳ ಮುಂದೆ ಬಂದು ನನ್ನ ನಷ್ಟದ ವಿಚಾರವನ್ನ ಹಂಚಿಕೊಳ್ಳಬೇಕು ನಿಮ್ಮ ಮುಂದೆ ಬಂದಿದ್ದೇನೆ ಎಂದಿದ್ದಾರೆ. ಈ ಕುರಿತು ನ್ಯೂಸ್ ಫಸ್ಟ್ ಜೊತೆ ಮಾತನಾಡಿದ ನಿರ್ಮಾಪಕ ರೆಹಮಾನ್ ನಾನು ಬೇಕಾದರೆ ಯಾವ ದೇವರ ಆಣೆ ಮಾಡಲು ಸಿದ್ಧವಿದ್ದೇನೆ. ಕುರಾನ್, ಭಗವತ್ ಗೀತೆ, ಬೈಬಲ್ ಮುಟ್ಟಿ ಹೇಳುತ್ತೇನೆ ಎಂದಿದ್ದಾರೆ.
ನಟ ಕಿಚ್ಚ ಸುದೀಪ್ ವಿರುದ್ಧ ಮತ್ತೊಬ್ಬ ನಿರ್ಮಾಪಕ ರೆಹಮಾನ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ಮಾತಾಡಿ ಸ್ಫೋಟಕ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ.
#newsfirstlive #newsfirstkannada #KannadaNews #Bengaluru #ProducerRehman @KicchaSudeep pic.twitter.com/NYzmlOxUn8— NewsFirst Kannada (@NewsFirstKan) July 10, 2023
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ