newsfirstkannada.com

ಯೋಗಿ ನಾಡಲ್ಲಿ ಜೈ ಶ್ರೀರಾಮ್‌ ಘೋಷಣೆ ಗದ್ದಲ; ಆಕ್ಷೇಪ ವ್ಯಕ್ತಪಡಿಸಿದ್ದ ಪ್ರೊಫೆಸರ್ ದಿಢೀರ್‌ ಯುಟರ್ನ್‌; ಕಾರಣವೇನು?

Share :

21-10-2023

    ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದ ಪ್ರಕರಣ

    ಸ್ಟೇಜ್​ನಿಂದ ಕೆಳಗಿಳಿ, ಗೆಟ್​ ಔಟ್​ ಅಂತ ಬೈದಿದ್ದ ಪ್ರೊಫೆಸರ್ ವಿಡಿಯೋ ವೈರಲ್

    ಯೋಗಿ ಆದಿತ್ಯನಾಥ್ ನಾಡಲ್ಲೇ ಜೈ ಶ್ರೀರಾಮ್‌ ಘೋಷಣೆಗೆ ಅಡ್ಡಿಪಡಿಸಿದ ವಿವಾದ

ಲಕ್ನೋ: ಇಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದು ಉತ್ತರಪ್ರದೇಶದಲ್ಲಿ ಸಂಚಲನ ಸೃಷ್ಟಿಸಿದೆ. ನಿನ್ನೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಪ್ರೊಫೆಸರ್‌ ಮಮತಾ ಗೌತಮ್ ಎಂಬುವವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇಂದು ತಮ್ಮ ನಿರ್ಧಾರಕ್ಕೆ ಸ್ಪಷ್ಟನೆ ನೀಡಿರುವ ಪ್ರೊಫೆಸರ್ ಸಡನ್ ಯುಟರ್ನ್ ಹೊಡೆದಿದ್ದಾರೆ.

ಉತ್ತರಪ್ರದೇಶದ ಗಾಜಿಯಾಬಾದ್‌ನ ಎಬಿಇಎಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಗೌತಮ್ ಸ್ಟೇಜ್​ ಮೇಲೆ ಜೈ ಶ್ರೀ ರಾಮ್ ಅಂತ ಪ್ರೇಕ್ಷಕರಿಗೆ ವಿಶ್​ ಮಾಡಿದರು. ಇದಕ್ಕೆ ಸಿಟ್ಟಾದ ಶಿಕ್ಷಕಿ ಮಮತಾ, ಇದು ಕಾಲೇಜ್​ ಕಲ್ಚರ್​ ಇವೆಂಟ್​. ಇಲ್ಲಿ ಯಾಕೆ ಧರ್ಮವನ್ನ ಮಧ್ಯೆ ತರುತ್ತಿಯಾ. ಸ್ಟೇಜ್​ನಿಂದ ಕೆಳಗಿಳಿ, ಗೆಟ್​ ಔಟ್​ ಅಂತ ಬೈದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಪ್ರೊಫೆಸರ್ ಮಮತದಾ ಗೌತಮ್ ಅವರು ಜೈ ಶ್ರೀರಾಮ್ ಘೋಷಣೆಗೆ ನನ್ನ ಯಾವುದೇ ಆಕ್ಷೇಪ ಇಲ್ಲ. ನಾನು ಸನಾತನಿ, ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಕಾಲೇಜಿನ ವಿಡಿಯೋವನ್ನು ತಪ್ಪಾಗಿ ವೈರಲ್ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

ಇದನ್ನೂ ಓದಿ: Video: ಜೈ ಶ್ರೀರಾಮ್ ಎಂದ ವಿದ್ಯಾರ್ಥಿ.. ಗೆಟ್​​ ಔಟ್ ಅಂದ್ರು ಶಿಕ್ಷಕಿ.. ಭಾರೀ ವಿವಾದ..!

ಕಾಲೇಜಿನ ವಿದ್ಯಾರ್ಥಿಗಳಿಗೆ ಶಿಸ್ತು ಕಾಪಾಡಲು ಮಾತ್ರ ನಾವು ಹೇಳಿದ್ದೇವು. ಜೈ ಶ್ರೀರಾಮ್ ಘೋಷಣೆಯ ಹಿಂದೆ, ಮುಂದೆ ಯಾವುದೇ ತೊಂದರೆ ಇಲ್ಲ. ವಿದ್ಯಾರ್ಥಿಗಳು ನಮ್ಮ ಸಹೋದ್ಯೋಗಿ ಜೊತೆಗೆ ವಾದ ಮಾಡುತ್ತಿದ್ದರು ಎಂದಿದ್ದಾರೆ. ತಮ್ಮ ಹೇಳಿಕೆಯ ವಿಡಿಯೋ ಕೊನೆಗೆ ಪ್ರೊಫೆಸರ್ ಮಮತಾ ಗೌತಮ್ ಅವರು ಜೈ ಶ್ರೀರಾಮ್ ಎಂದು ಹೇಳಿ ಮಾತು ಮುಗಿಸಿದ್ದಾರೆ.

ನಿನ್ನೆ ಗಾಜಿಯಾಬಾದ್‌ನ ಎಬಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಪ್ರೊಫೆಸರ್ ಮಮತಾ ಗೌತಮ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದ ವಿಡಿಯೋ ವೈರಲ್ ಆಗಿತ್ತು. ಸಿಎಂ ಯೋಗಿ ಆದಿತ್ಯನಾಥ್ ಅವರ ನಾಡಿನಲ್ಲೇ ಜೈ ಶ್ರೀರಾಮ್‌ ಘೋಷಣೆಗೆ ಅಡ್ಡಿ ಪಡಿಸಿತ್ತು ತೀವ್ರ ಚರ್ಚೆಗೆ ಗುರಿಯಾಗಿತ್ತು. ಪ್ರೊಫೆಸರ್ ವರ್ತನೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೆ ಎಬಿಇಎಸ್ ಕಾಲೇಜು ಈ ಘಟನೆ ಬಗ್ಗೆ ತನಿಖೆಗೂ ಸೂಚಿಸಿತ್ತು. ಗಾಜಿಯಾಬಾದ್ ಕಾಲೇಜಿನ ಜೈಶ್ರೀರಾಮ್ ಗದ್ದಲ ಉತ್ತರಪ್ರದೇಶದಲ್ಲಿ ಸಂಚಲನ ಸೃಷ್ಟಿಸಿದ ಮೇಲೆ ಪ್ರೊಫೆಸರ್ ಮಮತಾ ಗೌತಮ್ ಅವರು ತಮ್ಮ ಸ್ಪಷ್ಟನೆ ನೀಡುವುದರ ಜೊತೆಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಉಲ್ಟಾ ಹೊಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಯೋಗಿ ನಾಡಲ್ಲಿ ಜೈ ಶ್ರೀರಾಮ್‌ ಘೋಷಣೆ ಗದ್ದಲ; ಆಕ್ಷೇಪ ವ್ಯಕ್ತಪಡಿಸಿದ್ದ ಪ್ರೊಫೆಸರ್ ದಿಢೀರ್‌ ಯುಟರ್ನ್‌; ಕಾರಣವೇನು?

https://newsfirstlive.com/wp-content/uploads/2023/10/UP-Cm-Yogi-Adityanath-And-Teacher.jpg

Load More