ಪ್ರಾಜೆಕ್ಟ್-K ಸಿನಿಮಾದಲ್ಲಿ ಬಹುದೊಡ್ಡ ತಾರಾಬಳಗ ಆ್ಯಕ್ಟಿಂಗ್
ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ
ಟೀಸರ್, ಟೈಟಲ್ಗೆ ಫುಲ್ ಫಿದಾ ಆದ ಪ್ರಭಾಸ್ ಅಭಿಮಾನಿಗಳು
ಯಂಗ್ ರೆಬಲ್ಸ್ಟಾರ್ ಪ್ರಭಾಸ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಸಲಾರ್ ಸಿನಿಮಾದ ಟೀಸರ್ ರಿಲೀಸ್ ಆಗಿ ಸಖತ್ ಸೌಂಡ್ ಮಾಡಿತ್ತು. ಇದರ ಬೆನ್ನಲ್ಲೇ ಪ್ರಭಾಸ್ ಅವರ ಮತ್ತೊಂದು ಬಹು ನಿರೀಕ್ಷಿತ ಸಿನಿಮಾದ ಟೀಸರ್ ಔಟ್ ಆಗಿದ್ದು, ಟೀಸರ್ ಜೊತೆ ಟೈಟಲ್ ಕೂಡ ಲಾಂಚ್ ಮಾಡಲಾಗಿದೆ.
ತೆಲುಗಿನ ದೀ ಫೇಮಸ್ ಡೈರೆಕ್ಟರ್ ಆಗಿರುವ ಮಹಾನಟಿ ನಿರ್ದೇಶಕ ನಾಗ್ ಅಶ್ವಿನ್ ಅವರು ಪ್ರಭಾಸ್ ಜೊತೆ ಬಿಗ್ ಬಜೆಟ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಪ್ರಾಜೆಕ್ಟ್- K ಎಂದು ಕರೆಯುತ್ತಿದ್ದರು. ಆದರೆ ನಿಜವಾದ ಹೆಸರನ್ನು ಇಲ್ಲಿವಯರೆಗೆ ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಸದ್ಯ ಈ ಪ್ರಾಜೆಕ್ಟ್- ಕೆ ಸಿನಿಮಾದ ಟೈಟಲ್ ಹಾಗೂ ಟೀಸರ್ ಅನ್ನು ಅಮೆರಿಕದ ಸ್ಯಾನ್ ಡಿಯಾಗೋ ಕಾಮಿಕ್ ಕಾನ್ನಲ್ಲಿ ಲಾಂಚ್ ಮಾಡಲಾಗಿದೆ. ಟೀಸರ್ ಮತ್ತು ಟೈಟಲ್ ಅನ್ನು ಬಾಹುಬಲಿ ಪ್ರಭಾಸ್ ಹಾಗೂ ಕಮಲ್ ಹಾಸನ್ ಅವರು ರಿಲೀಸ್ ಮಾಡಿರುವುದು ಇಲ್ಲಿ ಇನ್ನೊಂದು ವಿಶೇಷ ಎನಿಸಿದೆ.
ಪ್ರಾಜೆಕ್ಟ್- ಕೆ ಎಂದರೆ ‘ಕಲ್ಕಿ2898 ಕ್ರಿ.ಶ’ ಎಂದು ಟೈಟಲ್
ಪ್ರಾಜೆಕ್ಟ್- ಕೆ ಎಂದರೆ ‘ಕಲ್ಕಿ2898 ಕ್ರಿ.ಶ’ ಎಂದು ಟೈಟಲ್ ನೀಡಲಾಗಿದೆ. ಇನ್ನು ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಅಭಿನಯಿಸಿದೆ. ಡಾರ್ಲಿಂಗ್ ಪ್ರಭಾಸ್ ಜೊತೆಯಾಗಿ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ಬೆಡಗಿ, ಕನ್ನಡದ ಸುಂದರಿ ದೀಪಿಕಾ ಪಡುಕೋಣೆ, ದಿಶಾ ಪಟಾಣಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ಬಿಗ್ ಬಿ ಹಾಗೂ ದಕ್ಷಿಣ ಭಾರತದ ಸೂಪರ್ ಸ್ಟಾರ್ ಕಮಲ್ ಹಾಸನ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಒಟ್ಟು ಬಂಡವಾಳ 600 ಕೋಟಿ ರೂಪಾಯಿಗಳು ಎಂದು ಹೇಳಲಾಗುತ್ತಿದೆ.
ಮೊನ್ನೆ ಪ್ರಭಾಸ್ ಫಸ್ಟ್ ಲುಕ್ ರಿಲೀಸ್
‘ಕಲ್ಕಿ2898ಕ್ರಿ.ಶ’ ಟೀಸರ್ ರಿಲೀಸ್ ಆದ 12 ಗಂಟೆಗಳಲ್ಲಿ ಬರೋಬ್ಬರಿ 55 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಈ ಟೀಸರ್, ಟೈಟಲ್ ರಿಲೀಸ್ಗೂ ಒಂದು ದಿನ ಮೊದಲೇ ಪ್ರಭಾಸ್ ಅವರ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿತ್ತು. ಮರುದಿನವೇ ಅಮೆರಿಕದಲ್ಲಿ ಟೀಸರ್, ಟೈಟಲ್ ರಿಲೀಸ್ಮಾಡಿ ಫ್ಯಾನ್ಸ್ಗೆ ಡಬಲ್ ಡೋಸ್ ಅನ್ನು ಸಿನಿಮಾ ತಂಡ ನೀಡಿದೆ.
ಸಿನಿಮಾವು ಭಾರತದ ಪುರಾಣ-ವೈಜ್ಞಾನಿಕ ಮಹಾಕಾವ್ಯಗಳ ಆಧಾರಿತವಾಗಿದ್ದು, ಶ್ರೀಮಂತ ಕಥೆ ಹೆಣೆಯಲಾಗಿದೆ. ಭವಿಷ್ಯದ ಅಂಶಗಳ ಬಗ್ಗೆ ಕೆಲವು ಸನ್ನಿವೇಶಗಳು ಸಿನಿಮಾದಲ್ಲಿ ಇರಲಿವೆ. ಸಿನಿಮಾದ ಟೀಸರ್ನಲ್ಲಿ ಪ್ರಭಾಸ್ ಒಬ್ಬ ಧೈರ್ಯಶಾಲಿ ಯೋಧನಂತೆ ಕಾಣಿಸಿದರೆ, ದೀಪಿಕಾ ಪಡುಕೋಣೆ ಮಿಲಿಟರಿಯವಳಂತೆ ಕಾಣಿಸಿದ್ದಾರೆ. ಬಚ್ಚನ್ ಅವರು ಮಾಸ್ಕ್ ಧರಿಸಿದ್ದು ಕಣ್ಣುಗಳಷ್ಟೇ ಕಾಣುತ್ತಿದೆ. ಚಿತ್ರದ ಟೀಸರ್ ಎಲ್ಲ ಡಾರ್ಕ್ನಲ್ಲಿ ಹೆಚ್ಚಾಗಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ