newsfirstkannada.com

ಹೊಂಬಾಳೆ ‘ಸಲಾರ್​’​ಗೆ ವೈಜಯಂತಿ ‘ಕಲ್ಕಿ’ ಪೈಪೋಟಿ; ಪ್ರಭಾಸ್ ಕಲ್ಕಿ ಚಿತ್ರದ ಗ್ಲಿಂಮ್ಸ್​​ಗೆ ಭಾರೀ ಪ್ರಶಂಸೆ

Share :

23-07-2023

    ‘ಸಲಾರ್’ V/S ‘ಕಲ್ಕಿ’ ರಣರಂಗ; ಈ ಇಬ್ಬರಲ್ಲಿ ಗೆಲ್ಲೋದ್ಯಾರು?

    ಪ್ರಭಾಸ್​​ ನಟನೆಯ ಸಲಾರ್ ದಾಖಲೆ ಮುರಿಯುತ್ತಾ ‘ಕಲ್ಕಿ’ ಚಿತ್ರ

    ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ

ತಂದೆಯನ್ನ ಮಗ ಮೀರಿಸಬೇಕು, ಗುರುವನ್ನ ಶಿಷ್ಯ ಮೀರಿಸಬೇಕು ಅಂತಾರಲ್ಲ ಅದೇ ರೀತಿ ಒಬ್ಬ ಸ್ಟಾರ್ ನಟನ ಸಿನಿಮಾದ ರೆಕಾರ್ಡ್ ಅನ್ನ ಆ ಸ್ಟಾರ್ ನಟನ ಸಿನಿಮಾವೇ ಮುರಿಬೇಕು. ಜೊತೆಗೆ ಮೀರಿಸಿ ಮೆರವಣಿಗೆ ಮಾಡಬೇಕು. ಆಗಲೇ ನೋಡಿ ಸಿನಿಮಾ ರಂಗಕ್ಕೆ ಮೆರಗು ಬರುವುದು. ಸಿನಿಮಾ ರಂಗದಲ್ಲಿ ಸ್ಟಾರ್ ನಟರ ಸಿನಿಮಾದ ಎದುರು ಮತ್ತೊಬ್ಬ ಸ್ಟಾರ್ ನಟರ ಸಿನಿಮಾ ಪೈಪೋಟಿಗೆ ಬರೋದು ಸರ್ವೇ ಸಾಮಾನ್ಯ. ಆದರೆ ಒಬ್ಬ ಸ್ಟಾರ್ ನಟನ ಸಿನಿಮಾಗೆ ಅದೇ ಸ್ಟಾರ್ ನಟನ ಚಿತ್ರವೇ ಪೈಪೋಟಿಗೆ ನಿಲ್ಲೋದು ಒಂದು ರೀತಿ ಸ್ಪೆಷಲ್ ಅಧ್ಯಾಯ.

ಮೋಸ್ಟ್ ವೈಲೆಂಟ್ ಮ್ಯಾನ್ ಎದುರು ಹೈವೋಲ್ಟೇಜ್ ಗಾಡ್
ಹೊಂಬಾಳೆ ಸಲಾರ್ ಎದುರು ವೈಜಯಂತಿ ಕಲ್ಕಿ ಫೈಟ್

ಬಾಹುಬಲಿ ಪಾರ್ಟ್ 1 ಮತ್ತು 2 ಬಂದ ನಂತರ ದಕ್ಷಿಣ ಭಾರತದ ಸಿನಿಮಾಗಳ ಮಾರ್ಕೆಟ್ ಇಡೀ ಇಂಡಿಯಾದ ತುಂಬಾ ಹರಡಿತು. ದಕ್ಷಿಣದ ಬಿಗ್ ಬಜೆಟ್ ಸಿನಿಮಾಗಳ ಜೊತೆಗೆ ಪ್ರಭಾಸ್ ಮಾರ್ಕೆಟ್ ಕೂಡ ಪ್ಯಾನ್ ವರ್ಲ್ಡ್‌ ಲೆವಲ್​ನಲ್ಲಿ ದೊಡ್ಡದಾಗಿದೆ. ಹಿಂಗಾಗಿಯೇ ಸಾಹೋ, ರಾಧೆ ಶ್ಯಾಮ್ ಮತ್ತು ಆದಿಪುರುಷ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ದುಡ್ಡು ಮಾಡಿದ್ರು ಪ್ರೇಕ್ಷಕರ ಮನಸು ಗೆಲ್ಲಲಿಲ್ಲ. ಯೂನಿವರ್ಸೆಲ್ ಪ್ರೇಕ್ಷಕರ ವಿಚಾರ ಬಿಟ್ಟು ಪ್ರಭಾಸ್ ಅವರ ಅಭಿಮಾನಿಗಳಿಗೆ ಸಾಹೋ , ರಾಧೆ ಶ್ಯಾಮ್ , ಮತ್ತು ಆದಿಪುರುಷ್ ಸಿನಿಮಾ ಇಷ್ಟ ಆಗಲಿಲ್ಲ. ಈ ಕಾರಣಕ್ಕೆ ಕೆಜಿಎಫ್ ಸೃಷ್ಟಿಕರ್ತ ಪ್ರಶಾಂತ್ ನೀಲ್ ಕಲ್ಪನೆಯ ಸಲಾರ್ ಮೇಲೆ ಅಪಾರ ನಿರೀಕ್ಷೆಗಳು ದುಪ್ಪಟ್ಟಾಗಿದೆ. ಸಲಾರ್ ಮೇಲೆ ಅಪಾರ ನಿರೀಕ್ಷೆ ಇದ್ದ ಕಾರಣಕ್ಕೇ ಸಲಾರ್ ಸಿನಿಮಾ ಟೀಸರ್ ರಾಕೆಟ್ ವೇಗದಲ್ಲಿ ವೀಕ್ಷಣೆಯಾಗಿ ದಾಖಲೆ ಬರೆದಿದೆ. ಆದ್ರೆ ಎಲ್ಲರಿಗೂ ಸಲಾರ್ ಸಿನಿಮಾದ ಕಿರು ನೋಟ ಇಷ್ಟ ಆಗಿದೆ ಅನ್ನೋದು ಸುಲಭವಲ್ಲ. 70% ಜನರಿಗೆ ಸಲಾರ್ ಟೀಸರ್ ಇಷ್ವವಾಗಿದ್ದರೆ ಇನ್ 30 % ಜನರಿಗೆ ಇಷ್ಟವಾಗಿಲ್ಲ. ಆದ್ರೆ ಟೀಸರ್​​ನಲ್ಲೇ ಎಲ್ಲವನ್ನ ನಾವು ಅಳೆದು ತೂಗೋದಕ್ಕೆ ಆಗೋದಿಲ್ಲ. ಇನ್ನು ಪಿಕ್ಚರ್ ಅಭಿಬಾಕಿ ಹೈ.. ಟ್ರೈಲರ್​ ಹಾಗೂ ಹಾಡುಗಳು ಎಲ್ಲವನ್ನ ಸಲಾರ್ ಬಳಗದಿಂದ ಹೊರ ಬಂದ ಮೇಲೆ ಏನಾಗುತ್ತೋ ಕಾದು ನೋಡಬೇಕು.

ಇದೀಗ ಸಲಾರ್​ಗೆ ಟಾಂಗ್ ಸಲಾರ್ ಸಿನಿಮಾದ ನಟನ ಮತ್ತೊಂದು ಸಿನಿಮಾ ಕಲ್ಕಿ ಕಡೆಯಿಂದ ಸಿಕ್ತಿದೆ. ರೆಬಲ್ ಸ್ಟಾರ್ ಪ್ರಭಾಸ್, ಬಿಟೌನ್ ಬಾಕ್ಸಾಫೀಸ್ ಪದ್ಮಾವತಿ ದೀಪಿಕಾ ಪಡುಕೋಣೆ, ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಉಳಗನಾಯಗನ್ ಕಮಲ್ ಹಾಸನ್. ಹೈ ಬಜೆಕ್ಟ್, ಪೌರಣಿಕ ಕಥೆಯ ಜೊತೆಗೆ ಸೈನ್ಸ್ ಫಿಕ್ಷನ್ ಟಚ್ಚ್, ಹಾಲಿವುಡ್ ರೆಂಜು.. ಇಷ್ಟೆಲ್ಲ ಇದ್ದ ಮೇಲೆ ನಿರೀಕ್ಷೆಗಳು ಪ್ರೊಜೆಕ್ಟ್ ಕೆ ಅಲಿಯಾಸ್ ‘‘ಕಲ್ಕಿ 2898AD’’ ಮೇಲೆ ಎಳದೆ ಇರುತ್ತಾ? ಸಲಾರ್ ಸಿನಿಮಾ ಇನ್ನೂ ದೊಡ್ಡ ಮಟ್ಟಕ್ಕೆ ಪ್ರಚಾರದ ಮಾರ್ಕೆಟ್​​​ಗೆ ಇಳಿಯದೆ ಕುಳಿತಿರುವಾಗ ಕಲ್ಕಿ ಎಂಟ್ರಿ ವಂಡರ್ ಥಂಡರ್ ಎಬ್ಬಿಸಿದೆ. ಈಗ ಒಂದಷ್ಟು ಫಿಲ್ಮ್ ಪಂಡಿತ ಪಾಮರರು ಒಂದು ವಾದ ಎತ್ತಿದ್ದಾರೆ. ಸಲಾರ್​ಗಿಂತ ಕಲ್ಕಿ ಚಿತ್ರಕ್ಕೆ ಡಿಮ್ಯಾಂಡ್ ಜಾಸ್ತಿಯಾಗುತ್ತದೆ. ಸಲಾರ್ ಸಿನಿಮಾ ಟೀಸರ್ ರೆಕಾರ್ಡ್ ಅನ್ನ ಕಲ್ಕಿ ಮುರಿಯುತ್ತೆ. ಸಲಾರ್ ಸಿನಿಮಾದ ಟೀಸರ್ ವೀವ್ಸ್ ದುಡ್ಡು ಕೊಟ್ಟು ಮಾಡಿಸಿರೋದು ಆದ್ರೆ ಕಲ್ಕಿದು ಹಂಗಲ್ಲ ಆ ವೀಕ್ಷಣೆ ಆರ್ಗೆನಿಕ್ ಆಗಿ ಆಗುತ್ತಿದೆ ಅಂತೆಲ್ಲ ಅಭಿಪ್ರಾಯದ ಅಣುಬಾಂಬ್​ ಅನ್ನ ಸೋಶೀಯಲ್ ಮೀಡಿಯಾದ ಸಮುದ್ರದ ದಡದಲ್ಲಿ ಹಾಕುತ್ತಿದ್ದಾರೆ.

ಪುರಾಣಗಳಲ್ಲಿ ‘ಕಲ್ಕಿ’ ಅವತಾರದ ಬಗ್ಗೆ ಉಲ್ಲೇಖವಿದೆ. ರೆಕ್ಕೆಗಳುಳ್ಳ ದೇವದತ್ತ ಎಂಬ ಹೆಸರಿನ ಬಿಳಿಯ ಬಣ್ಣದ ಕುದುರೆಯ ಮೇಲೆ ಎಡಗೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಕಲಿಯುಗವನ್ನು ಕೊನೆಗೊಳಿಸಲು ಕಲ್ಕಿ ಬರುತ್ತಾನೆ ಎಂದು ಕಲ್ಕಿಯ ಬಗ್ಗೆ ಕಲ್ಪಿಸಲಾಗಿದೆ. ಈಗ ಪ್ರಭಾಸ್​ ಸೃಷ್ಟಿಸಿರೋ ಸಿನಿಮಾ ಇದೇ ಕಲ್ಕಿ ಬಗ್ಗೆ ಎನ್ನುವ ಸುಳಿವು ಈಗ ಬಿಡುಗಡೆಯಾಗಿರುವ ಗ್ಲಿಂಪ್ಸ್​ನಲ್ಲಿ ಗೊತ್ತಾಗಿದೆ. ಚಿತ್ರದ ಟೈಟಲ್​ನಲ್ಲೇ ಅದನ್ನ ರಿಜಿಸ್ಟರ್ ಮಾಡಿರುವ ಚಿತ್ರತಂಡ 2898 ಎಂದು 875 ವರ್ಷ ಭವಿಷ್ಯದ ಸೂಚನೆ ಕೊಟ್ಟಿದೆ. ಕಲಿಯುಗ ಅಂತ್ಯಗೊಳಿಸೋಕೆ ಕಲ್ಕಿ ಬರ್ತಾನೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಆಗ ಜಗತ್ತನ್ನ ಕೆಲವು ಶಕ್ತಿಗಳು ಹಾಗೂ ತಾಂತ್ರಿಕತೆ ಆಳುತ್ತವೆ. ಇಲ್ಲಿ ಜನರನ್ನು ಹಿಂಸಾತ್ಮಕವಾಗಿ ನಡೆಸಿಕೊಳ್ಳಲಾಗುತ್ತದೆಯಂತೆ. ಇದೇ ಅಂಶಗಳನ್ನ ಪ್ರಭಾಸ್ ನಟನೆಯ ಕಲ್ಕಿ ಸಿನಿಮಾದ ತೋರಿಸಲಾಗದ್ದು, ಕುತೂಹಲ ಹೆಚ್ಚಾಗಿದೆ. ಇನ್ನೊಂದು ವಿಷಯ ಮರಿಬಾರದು ನೀವು ನಮ್ಮ ಬುದ್ಧಿವಂತ ರಿಯಲ್ ಸ್ಟಾರ್ ಉಪೇಂದ್ರ ಕೂಡ U&I ಸಿನಿಮಾದ ಪೋಸ್ಟರ್​​ನಲ್ಲಿ ಇದೇ ರೀತಿ ಪ್ರಯೋಗ ಮಾಡಿದ್ದಾರೆ. ಆದ್ರೆ ಅದ್ಹೆಂಗೆ ಮೂಡಿಬಂದಿದೆ ಅನ್ನೋದು ಈಗಾಗಲೇ ಊಹಿಸಲು ಅಸಾಧ್ಯ. ಯಾಕೆಂದ್ರೆ ಉಪೇಂದ್ರ ಅವರ ಕಲ್ಪನೆಯೂ ನಮ್ಮನಿಮ್ಮ ಊಹೆಗೂ ಎಟ್ಟುಕೊದಿಲ್ಲ.

ಇನ್ನು, ಸಲಾರ್ ವಿಚಾರಕ್ಕೆ ಬರೋದಾದ್ರೆ ಕಥೆಯ ಕುತೂಹಲದ ಗುಟ್ಟು ಏನೆಂಬುದು ಗೊತ್ತಾಗಿಲ್ಲ. ಒಬ್ಬೊಬ್ಬರದ್ದು ಒಂದೂದು ರೀತಿಯ ಅಭಿಪ್ರಾಯ ಸಲಾರ್ ಕಥೆಯ ಮೇಲಿದೆ. ಒಂದಷ್ಟು ಮಹಾ ಮಂದಿ ಉಗ್ರಂ ರೀಮೇಕ್ ಅಂತಾರೆ , ಇನ್ನೊಂದಿಷ್ಟು ಜನ ಕೆಜಿಎಫ್ ಪಾರ್ಟ್ 3 ಇರಬಹುದು ಅಂತ ಊಹಿಸುತ್ತಾರೆ, ಮತ್ತೊಂದಷ್ಟು ಜನ ಕೆಜಿಎಫ್​ನಲ್ಲಿ ಬರೋ ಆ ಮುಸ್ಲಿಂ ಹುಡುಗನ ಕಥೆ ಇದು ಅಂತ ಭಾವಿಸುತ್ತಾರೆ. ಹಿಂಗೆ ಸಲಾರ್ ಮೇಲೆ ಒಂದಷ್ಟು ಕುತೂಹಲದ ಜೊತೆಗೆ ಊಹೆ ಪಾಹೆಗಳು ಪ್ರೇಕ್ಷಕರಲ್ಲಿದೆ. ಆದ್ರೆ ಈ ಎಲ್ಲಾ ಊಹೆಗೂ ಮೀರಿದ್ದು ನಮ್ಮ ಸ್ಟೋರಿ ಅಂತ ಹೊಂಬಾಳೆ ಫಿಲಂಸ್ ಎಲ್ಲಿಯೂ ಹೇಳೋ ಪ್ರಚಾರದ ಪ್ರಯತ್ನ ಇನ್ನೂ ಶುರು ಮಾಡಿಲ್ಲ. ಹಿಂಗಾಗಿ ಈಗಲೇ ಎಲ್ಲವನ್ನೂ ಹೇಳೋದಕ್ಕೆ ಆಗೋದಿಲ್ಲ. ಪ್ರಭಾಸ್ ಅಂತಹ ಸ್ಟಾರ್ ನಟನ ಸಿನಿಮಾ ಮೇಕಿಂಗ್ ಅವಕಾಶ ಸಿಕ್ಕಾಗ ಅವರದ್ದೇಯಾದ ತಯಾರಿ ಜೊತೆಗೆ ಡೆಡಿಕೇಷನ್ ಮಾಡಿಯೇ ಹೊಂಬಾಳೆ ಮತ್ತು ಪ್ರಶಾಂತ್ ನೀಲ್ ಹೆಜ್ಜೆ ಇಟ್ಟಿರುತ್ತಾರೆ. ಮುಂದಿನ ತಿಂಗಳು ಸಲಾರ್ ಸಿನಿಮಾದ ಟ್ರೈಲರ್ ಬಿಡುಗಡೆಯಾದ ನಂತರ ಮತ್ಯಾವ ರೀತಿ ಕ್ರೇಜ್ ದೊಡ್ಡದಾಗುತ್ತೆ ಅನ್ನೋದನ್ನ ಕಾದು ನೋಡಬೇಕು.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಹೊಂಬಾಳೆ ‘ಸಲಾರ್​’​ಗೆ ವೈಜಯಂತಿ ‘ಕಲ್ಕಿ’ ಪೈಪೋಟಿ; ಪ್ರಭಾಸ್ ಕಲ್ಕಿ ಚಿತ್ರದ ಗ್ಲಿಂಮ್ಸ್​​ಗೆ ಭಾರೀ ಪ್ರಶಂಸೆ

https://newsfirstlive.com/wp-content/uploads/2023/07/darling-prabas-4.jpg

Load More