newsfirstkannada.com

HDK ಕಾಲಘಟ್ಟದ ಹಗರಣ ಆರೋಪ; ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್​ ಕೇಳಿದ ವರದಿ 10 ತಿಂಗಳಿಂದ ಬಾಕಿ?

Share :

Published August 9, 2024 at 8:10am

Update August 9, 2024 at 3:00pm

    ಕುಮಾರಸ್ವಾಮಿ ಕಾಲಘಟ್ಟದ ಹಗರಣ ಮಹಾ ಸ್ಫೋಟ

    2007ರಲ್ಲಿ ಗಣಿ ಮಂಜೂರಾತಿಗೆ ನಿಯಮ ಉಲ್ಲಂಘನೆ ಆರೋಪ

    ಕೇಂದ್ರ ಸಚಿವ ಕುಮಾರಸ್ವಾಮಿ ಮೇಲಿನ ಆರೋಪ ಏನು?

ಇದು ಅಗೆದಷ್ಟು-ಬಗೆದಷ್ಟು ಮುಗಿಯದ ಕಹಾನಿ. ಸಿಎಂ ಸಿದ್ದರಾಮಯ್ಯನವರ ವಿರುದ್ಧ ಮುಡಾ ಬೆಂಬಿಡದೇ ಕಾಡ್ತಿರುವಾಗ ಮೈತ್ರಿಯೊಳಗೆ ಅಕ್ರಮದ ಬಾಂಬ್​​​ ಬಿದ್ದಿದೆ. 2007ರಲ್ಲಿ ಗಣಿಗೆ ಕೊಟ್ಟ ಪರ್ಮಿಷನ್​​, ಪ್ರಾಸಿಕ್ಯೂಷನ್​​ಗೆ ಅನುಮತಿ ಕೇಳ್ತಿದೆ. ಅನುಮತಿಗೆ ಕೇಳಿದ ಪ್ರಾಸಿಕ್ಯೂಷನ್​ ಮಾತ್ರ ರಾಜಭವನದಲ್ಲೇ ಧೂಳು ಹಿಡಿದು ಕೂತಿರೋದು ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ.

ಇದನ್ನೂ ಓದಿ: ಫಸ್ಟ್‌ ನೈಟ್‌ನಲ್ಲಿ ಮಚ್ಚಿನ ಏಟು.. ನವವಧು-ವರರು ರೂಮಿಗೆ ಹೋದ ಮೇಲೆ ಆಗಿದ್ದೇನು? ಸಾವಿನ ಸುತ್ತ ಅನುಮಾನ!

ರಾಜಭವನದ ಮೇಲೆ ಗುಮಾನಿ ಏನು..?

ರಾಜ್ಯಪಾಲರು ಹೇಳಿದ ಕಾನೂನು ಕ್ರಮದ ನೋಟಿಸ್​ ಸಿದ್ದರಾಮಯ್ಯರ ಸಂತಸವನ್ನೇ ಕಿತ್ತುಕೊಂಡಿದೆ. ಈಗ ಇದೇ ರಾಜಭವನದ ಹೊಸ ಗುಟ್ಟೊಂದು ರಟ್ಟಾಗಿದೆ. ಮಾಜಿ ಸಿಎಂ ಹೆಚ್​ಡಿಕೆ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಿದ್ದ ಎಸ್ಐಟಿ ವಿಚಾರ ಹೊಸ ಸಂಘರ್ಷಕ್ಕೆ ಕಾರಣ ಆಗಿದೆ. ಗಣಿ ಅಕ್ರಮ ಪ್ರಕರಣದಲ್ಲಿ 2014ರಿಂದ ಲೋಕಾಯುಕ್ತದ ಎಸ್‌ಐಟಿಯು ವಿಚಾರಣೆ ನಡೆಸಿದೆ. ಕೇಸ್​​ನಲ್ಲಿ ಕುಮಾರಸ್ವಾಮಿ ತಪ್ಪಿತಸ್ಥರು ಎಂಬ ತೀರ್ಮಾನಕ್ಕೆ ಬಂದು ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್​ಗೆ ಅನುಮತಿ ಕೇಳಿದೆ. ಬರೊಬ್ಬರಿ 10 ತಿಂಗಳ ಹಿಂದೆಯೇ ಮನವಿ ಮಾಡಿಕೊಂಡಿದ್ರೂ ರಾಜ್ಯಪಾಲರು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಅನ್ನೋ ಮಾತು ಕೇಳಿ ಬರ್ತಿದೆ.

ದಿನಾಂಕ 10/9/2014ರ ಕ್ರೈಮ್‌ ನಂ. 16/14 ಕೇಸ್​ನ ಗಣಿ ಅಕ್ರಮಗಳ ಬಗ್ಗೆ ಎಸ್‌ಐಟಿ ತನಿಖೆ ನಡೆಸ್ತಿದೆ. ಕಳೆದ ವರ್ಷ 2023 ನವೆಂಬರ್​​​ 21ರಂದು ಲೋಕಾಯುಕ್ತದ ಎಡಿಜಿಪಿ ಚಂದ್ರಶೇಖರ್‌ ಖುದ್ದಾಗಿ ಇವತ್ತಿನ ರಾಜ್ಯಪಾಲ ಗೆಹ್ಲೋಟ್​​ಗೆ ಪತ್ರ ಕಳಿಸಿದ್ದಾರೆ. ಹೆಚ್​​ಡಿಕೆ ವಿರುದ್ಧ ತನಿಖೆ ಕೈಗೆತ್ತಿಕೊಳ್ಳುವಾಗ ಅಗತ್ಯವಿರದಿದ್ದ ಅನುಮತಿ ಈಗ ಸಿದ್ದು ವಿಚಾರದಲ್ಲಿ ಏಕೆ ಅನ್ನೋ ಪ್ರಶ್ನೆ ಹಬ್ಬಿದೆ.

ಹೆಚ್​ಡಿಕೆ ಮೇಲಿನ ಆರೋಪ ಏನು?

ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಎಂಬ ಬೋಗಸ್‌ ಸಂಸ್ಥೆಗೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಈ ಆರೋಪ ಕೇಳಿ ಬಂದಿದೆ. 2007 ಡಿಸೆಂಬರ್​​​ 6ರಂದು ಬಳ್ಳಾರಿಯ ಸಂಡೂರು ತಾಲೂಕಿನ ಭಾವಿಹಳ್ಳಿ, ತಿಮ್ಮಪ್ಪಗುಡಿಯಲ್ಲಿ 550 ಎಕರೆ ಜಾಗವನ್ನ ಗಣಿಗಾರಿಕೆಗೆ ಅಕ್ರಮವಾಗಿ ಗುತ್ತಿಗೆಗೆ ನೀಡಿದ್ದರು ಎನ್ನಲಾಗಿದೆ. ಸದರಿ ಗುತ್ತಿಗೆ ನೀಡುವಾಗ ಮಿನರಲ್ಸ್‌ ಕನ್ಸಿಷನ್‌ ನಿಯಮಗಳ, ನಿಯಮ 59 (2)ನ್ನ ಉಲ್ಲಂಘನೆ ಆರೋಪ ಇತ್ತು. ಈ ಅಕ್ರಮದ ಕುರಿತಾಗಿ ಎಫ್‌ಐಆರ್‌ ದಾಖಲಾಗಿ ಲೋಕಾಯುಕ್ತದ ಎಸ್‌ಐಟಿಯು ತನಿಖೆ ಕೈಗೆತ್ತಿಕೊಂಡು, ಚಾರ್ಚ್‌ಶೀಟ್​ ಸಹ ಹಾಕಲಾಗಿದೆ.

ಕುಮಾರಸ್ವಾಮಿ ಅವರ ಮೇಲೆ ತನಿಖೆ ಮುಗಿದು ಚಾರ್ಜ್‌ಶೀಟ್‌ ಸಹ ಆಗಿದೆ. ಅವರು ತಪ್ಪಿತಸ್ಥರೆಂದೇ ಲೋಕಾಯುಕ್ತ ಎಸ್‌ಐಟಿಗೆ ಮನವರಿಕೆಯೂ ಆಗಿದೆ. ಆದರೂ ರಾಜ್ಯಪಾಲರು ಅನುಮತಿ ನೀಡಿಲ್ಲ. ಹೀಗಾಗಿ ರಾಜ್ಯಪಾಲರ ನಡೆಗೆ ಪಕ್ಷಪಾತ ಅನ್ನೋ ಆರೋಪ ಮೆತ್ತಿಸಿದೆ. ಕೇವಲ ದೂರುದಾರರೊಬ್ಬರ ದೂರನ್ನಷ್ಟೇ ಆಧರಿಸಿ ಒಂದು ದಿನದಲ್ಲಿ ಶೋಕಾಸ್‌ ನೋಟಿಸ್‌ ನೀಡಿದ್ದು ಪ್ರಶ್ನೆ ಹುಟ್ಟುಹಾಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

HDK ಕಾಲಘಟ್ಟದ ಹಗರಣ ಆರೋಪ; ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್​ ಕೇಳಿದ ವರದಿ 10 ತಿಂಗಳಿಂದ ಬಾಕಿ?

https://newsfirstlive.com/wp-content/uploads/2024/03/HDK_News.jpg

Load More