newsfirstkannada.com

D.K.ಬ್ರದರ್ಸ್​​ ವಿರುದ್ಧ ತಮಟೆ ಚಳವಳಿ.. ಭುಗಿಲೆದ್ದ ಆಕ್ರೋಶ.. ಯಾಕೆ..? ವಿಡಿಯೋ

Share :

28-08-2023

    ಕರಪತ್ರ ಹಿಡಿದು ತಮಟೆ ಬಾರಿಸಿ ವಾಗ್ದಾಳಿ

    ‘MLA, MP, DCM ಅವ್ರಿಂದ ಅನ್ಯಾಯ ಆಗಿದೆ’

    ಮಂಗಳವಾರ ಸಭೆಗೆ ಬರುವಂತೆ ಡಂಗೂರ

ಬೆಂಗಳೂರು: ರಾಜೀವ್ ಗಾಂಧಿ ವಿವಿಯನ್ನ ರಾಮನಗರದಿಂದ ಕನಕಪುರಕ್ಕೆ ಶಿಫ್ಟ್‌ ಆಗಿದ್ದಕ್ಕೆ ಡಿಕೆ ಬ್ರದರ್ಸ್ ವಿರುದ್ಧ ತಮಟೆ ಚಳುವಳಿ ನಡೆಸಲಾಗಿದೆ. ರಾಮನಗರದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಇದು ಕುಮಾರಸ್ವಾಮಿ ಅವ್ರ ಕನಸಿನ ಯೋಜನೆ. ಆದರೆ ಡಿ.ಕೆ.ಶಿವಕುಮಾರ್ ಈಗ ರಾಮನಗರದಿಂದ ಕನಕಪುರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇದು ರಾಮನಗರ ಜನರಿಗೆ ಮಾಡಿದ ಅನ್ಯಾಯ. ರಾಮನಗರದಲ್ಲೇ ವಿವಿ ನಿರ್ಮಾಣ ಆಗಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುತ್ತೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಮಾತ್ರವಲ್ಲ, ಡಿಕೆ ಶಿವಕುಮಾರ್ ಪ್ರಜ್ಞಾವಂತ ರಾಜಕಾರಣಿ. ಅವರು ಕೂಡ ಇದೇ ಜಿಲ್ಲೆಯವರು. ಒಂದು ಸಣ್ಣ ಮನಸ್ಸು ಮಾಡಿದ್ದರೆ ಇದೆಲ್ಲ ಆಗುತ್ತಿರಲಿಲ್ಲ. ಅದನ್ನು ಬಿಟ್ಟು ರಾಮನಗರದಲ್ಲಿ ಅಸ್ತಿ ಪಂಜರವನ್ನು ಮಾತ್ರ ಬಿಟ್ಟು, ಕನಕಪುರಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಜೆಡಿಎಸ್​ ಮುಖಂಡರು ಆರೋಪಿಸಿದ್ದಾರೆ. ಜೊತೆಗೆ ನಾಳೆ ಈ ಸಂಬಂಧ ರಾಮನಗರದಲ್ಲಿ ಸಭೆ ನಡೆಸಲಾಗುತ್ತಿದ್ದು, ತಾವೆಲ್ಲರೂ ಬರಬೇಕು ಎಂದು ಸಾರಿ ಹೇಳಿದ್ದಾರೆ. ಈ ಮೂಲಕ ತಮಟೆ ಚಳವಳಿಯೊಂದಿಗೆ ಡಂಗೂರ ಕೂಡ ಸಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

D.K.ಬ್ರದರ್ಸ್​​ ವಿರುದ್ಧ ತಮಟೆ ಚಳವಳಿ.. ಭುಗಿಲೆದ್ದ ಆಕ್ರೋಶ.. ಯಾಕೆ..? ವಿಡಿಯೋ

https://newsfirstlive.com/wp-content/uploads/2023/08/DKS-2-1.jpg

Load More