ನಿರ್ಮಾಪಕರ ಆರೋಪಕ್ಕೆ ಆಕ್ರೋಶಗೊಂಡ ಕಿಚ್ಚನ ಫ್ಯಾನ್ಸ್
ಫಿಲ್ಮ್ ಚೇಂಬರ್ ಮುಂದೆ ಕಿಚ್ಚ ಸುದೀಪ್ ಅಭಿಮಾನಿಗಳ ಪ್ರತಿಭಟನೆ
ನಿರ್ಮಾಪಕರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಿದ ಅಭಿಮಾನಿಗಳು
ಇತ್ತೀಚೆಗೆ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕ ಎಮ್ ಎನ್ ಕುಮಾರ್ ಆರೋಪ ಮಾಡಿದ್ದರು. ಕಾಲ್ ಶೀಟ್ ಮತ್ತು ಹಣ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಆ ಬಳಿಕ ನಿರ್ಮಾಪಕ ರೆಹಮಾನ್ ಕೂಡ ತಮಗೂ ಕಿಚ್ಚ ಹಣ ಕೊಡಲು ಬಾಕಿ ಇದೆ ಎಂದು ಹೇಳಿದ್ದರು. ಆದರೀಗ ಈ ಆರೋಪಕ್ಕೆ ಸಂಬಂಧಿಸಿದಂತೆ ಕಿಚ್ಚನ ಅಭಿಮಾನಿಗಳ ರೊಚ್ಚಿಗೆದ್ದಿದ್ದಾರೆ. ನಿರ್ಮಾಪಕರ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫಿಲ್ಮ್ ಚೇಂಬರ್ ಮುಂದೆ ಪ್ರತಿಭಟನೆ
ಸುದೀಪ್ ಅಭಿಮಾನಿಗಳು ಚಾಮರಾಜನಗರದಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಎ.ಗಣೇಶ್, ಕುಮಾರ್, ಪ್ರವೀಣ್ ಅವರ ಪೋಟೊಗೆ ಚಪ್ಪಲಿಯಲ್ಲಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಅಭಿಮಾನಿಗಳು ಫಿಲ್ಮ್ ಚೇಂಬರ್ ಮುಂದೆ ಪ್ರತಿಭಟನೆ ಮಾಡಿದ್ದು, ಮನವಿ ಕೊಟ್ಟಿದ್ದಾರೆ.
ನ್ಯಾಯಾಂಗದ ಮೊರೆ
ಇನ್ನು ನಿರ್ಮಾಪಕ ಎಮ್ ಎನ್ ಕುಮಾರ್ ಆರೋಪದ ವಿರುದ್ಧವಾಗಿ ಕಿಚ್ಚ ನ್ಯಾಯಾಂಗದ ಮೊರೆ ಹೋಗಿದ್ದಾರೆ. ಎಮ್ ಎನ್ ಕುಮಾರ್ಗೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. 10 ಕೋಟಿ ಕೊಡುವಂತೆ ಹೇಳಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ