newsfirstkannada.com

ಮಣಿಪುರದಲ್ಲಿ ಹಿಂಸಾಚಾರ.. ಚರ್ಚ್, ಕ್ರೈಸ್ತರ ಮೇಲಿನ ದಾಳಿ ಖಂಡಿಸಿ ಮಂಗಳೂರಲ್ಲಿ ಭಾರೀ ಪ್ರತಿಭಟನೆ

Share :

Published June 7, 2023 at 3:13am

Update June 7, 2023 at 3:14am

    ಮೇ 3ರ ರಾತ್ರಿ ನಡೆದ ಹಿಂಸಾಚಾರ

    ಸರ್ಕಾರಗಳ ದ್ವೇಷದ ರಾಜಕಾರಣ ನಿಲ್ಲಿಸಬೇಕೆಂದು ಆಗ್ರಹ

    ಫಾದರ್ ಪಾವೋಸ್ಟಿನ್ ಲೋಬೋ ನೇತೃತ್ವದಲ್ಲಿ ನಡೆದ ಪ್ರತಿಭಟನೆ

ಮೇಟಿಗಳಿಗೆ ಮೀಸಲಾತಿ ವಿರೋಧಿಸಿ ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಭಾರೀ ಸಾವು-ನೋವುಗಳು ಸಂಭವಿಸಿದೆ. ಮಣಿಪುರದಲ್ಲಿ ಮೇ 3 ರಂದು ನಡೆದ ಪ್ರತಿಭಟನೆಯಲ್ಲಿ ಅಲ್ಲಿನ 10 ಜಿಲ್ಲೆಗಳಲ್ಲಿ ಭಾರೀ ಹಿಂಸಾಚಾರ ನಡೆದಿತ್ತು.

ಚರ್ಚ್, ಕ್ರೈಸ್ತರ ಮೇಲಿನ ದಾಳಿ ಖಂಡಿಸಿ ಮಂಗಳೂರಲ್ಲಿ ಪ್ರತಿಭಟನೆ

ಮಣಿಪುರದಲ್ಲಿ ಮೀಸಲಾತಿ ವಿಚಾರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಚರ್ಚ್ ಹಾಗೂ ಕ್ರೈಸ್ತರ ಮೇಲೆ ನಡೆದ ವ್ಯಾಪಕ ದಾಳಿಯನ್ನು ಖಂಡಿಸಿ ಹಾಗೂ ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಒತ್ತಾಯಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ, ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ ಮತ್ತು ಯುನೈಟೆಡ್ ಕ್ರಿಶ್ಚಿಯನ್ ಫೋರಂ ಮಂಗಳೂರು ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಕಾರರು ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ರು.

ಈ ವೇಳೆ ಮಾತನಾಡಿದ ಕಿನ್ನಿಗೋಳಿ ಚರ್ಚ್‌ ಧರ್ಮಗುರು ಫಾದರ್ ಪಾವೋಸಿನ್ ಲೋಬೋ, ಮಣಿಪುರ ಸರಕಾರ ಸೌಹಾರ್ದ ವಾತಾವರಣ ಮೂಡಿಸುವ ಬದಲು ದ್ವೇಷ ರಾಜಕಾರಣ ಮಾಡ್ತಿದೆ. ಮೈತಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಭುಗಿಲೆದ್ದ ಗಲಭೆಯನ್ನು ಮುಂದಿಟ್ಟು ಕುಕಿ ಸಮುದಾಯದ ಕ್ರೈಸ್ತರು ಹಾಗೂ ಚರ್ಚ್‌ಗಳ ಮೇಲೆ ದಾಳಿ ನಡೆಸಲಾಗಿದೆ. ಇದರಿಂದ ನೂರಾರು ಸಂಖ್ಯೆಯ ಪ್ರಾಣಹಾನಿಯಾಗಿದ್ದು 50 ಸಾವಿರಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ ಅಂತ ವಿಷಾದ ವ್ಯಕ್ತಪಡಿಸಿದರು.

ಸರ್ಕಾರ ಎಲ್ಲ ಜನರನ್ನು ಅಭಿವೃದ್ಧಿ ಮಾಡಬೇಕು. ಸರ್ಕಾರ ಮೂಲ ಉದ್ದೇಶ ಬಿಟ್ಟು ಧರ್ಮವನ್ನು ಬಳಸಿಕೊಂಡು ರಾಜಕೀಯ ಮಾಡ್ತಿದೆ. ಮಣಿಪುರದಲ್ಲಿನ ಸಮಸ್ಯೆ ಬಗ್ಗೆ ಸರ್ಕಾರ ಗಮನ ಕೊಡ್ತಿಲ್ಲ. ಸ್ಥಳೀಯ ಸರ್ಕಾರ ಇರಲಿ, ಕೇಂದ್ರ ಸರ್ಕಾರವಿರಲಿ. ಮೊದಲು ದ್ವೇಷದ ರಾಜಕಾರಣವನ್ನು ನಿಲ್ಲಿಸಬೇಕು
ಫಾ. ಪಾವೋಸ್ಟಿನ್ ಲೋಬೋ

ಇನ್ನು ಪ್ರತಿಭಟನೆಯಲ್ಲಿ ಕ್ರೈಸ್ತ ಸಮುದಾಯದ ಹಲವು ಮುಖಂಡರು ಸೇರಿದಂತೆ ಹಲವರು ಭಾಗವಹಿಸಿದ್ದರು. ಆದ್ರೆ ಈ ಪ್ರತಿಭಟನಾ ಮನವಿಯನ್ನು ಕೇಂದ್ರ ಸರ್ಕಾರ ಹೇಗೆ ಸ್ವೀಕರಿಸುತ್ತೋ ಕಾದುನೋಡ್ಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಣಿಪುರದಲ್ಲಿ ಹಿಂಸಾಚಾರ.. ಚರ್ಚ್, ಕ್ರೈಸ್ತರ ಮೇಲಿನ ದಾಳಿ ಖಂಡಿಸಿ ಮಂಗಳೂರಲ್ಲಿ ಭಾರೀ ಪ್ರತಿಭಟನೆ

https://newsfirstlive.com/wp-content/uploads/2023/06/MNG_PROTEST.jpg

Load More