ಮಡಿವಾಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ
ಠಾಣೆ ಬಳಿ PSI ಬೈಕ್ ಸ್ಟಾರ್ಟ್ ಮಾಡುವಾಗ ಬಂದಿದ್ದ ರಾಜ್ ಕಿಶೋರ್!
ನ್ಯಾಯದ ತೂಕ ಮಾಡದೇ ಯಾರದ್ದೋ ಮಾತು ಕೇಳಿ PSI ಜೈಲಿಗೆ
ಬೆಂಗಳೂರು: ಜಸ್ಟ್ ಒಂದು ಬೈಕ್ ರಿಪೇರಿ ಮಾಡೋ ವಿಚಾರವಾಗಿ ಅವರಿಬ್ಬರ ಪರಿಚಯವಾಗಿತ್ತು. ಕೇವಲ ಪರಿಚಯವಲ್ಲ. ಇಬ್ಬರು ಕ್ಲೋಸ್ ಫ್ರೆಂಡ್ಸ್ ಕೂಡಾ ಆಗಿದ್ದರು. ಆದ್ರೆ ಈ ಫ್ರೆಂಡ್ಶಿಪ್ನಿಂದ ತಾನು ಜೈಲಿಗೆ ಹೋಗ್ತೀನಿ ಅಂತ ಮಾತ್ರ ಆ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗೆ ಗೊತ್ತೇ ಇರಲಿಲ್ಲ. ಪ್ರೊಬೆಷನರಿ ಪಿಎಸ್ಐ ಸಿದ್ದಾರೂಡ್ ಇವರು ಕಾನ್ಸ್ಟೇಬಲ್ ಅಲ್ಲಾಭಕ್ಷಿ. ಇವರಿಬ್ಬರಿಗೆ ಚಳ್ಳೆ ಹಣ್ಣು ತಿನ್ನಿಸಿದೋನ ಹೆಸರು ರಾಜ್ ಕಿಶೋರ್. ಈ ಕಥೆಯಲ್ಲಿ ಮೇಯ್ನ್ ಕ್ಯಾರೆಕ್ಟರ್ಸ್ ಅಂದ್ರೆ ಸಿದ್ದಾರೂಡ್ ಮತ್ತು ರಾಜ್ ಕಿಶೋರ್.
ಮಡಿವಾಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ಸಿದ್ದರೂಡ್ಗೆ ಭದ್ರತಾ ಕೆಲಸವೊಂದರ ಟೈಮಲ್ಲಿ ತಾನು ಹೋಮ್ ಗಾರ್ಡ್ ಎಂದು ರಾಜ್ ಕಿಶೋರ್ ಪರಿಚಯ ಮಾಡಿಕೊಂಡಿದ್ದ. ಆದ್ರೆ ಈಗ ಆತ ಎಲ್ಲಿಯೂ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿರಲಿಲ್ಲ. ಒಮ್ಮೆ ಠಾಣೆ ಬಳಿ ಬಂದು ಬೈಕ್ ಸ್ಟಾರ್ಟ್ ಮಾಡುವಾಗ ಬಂದಿದ್ದ ರಾಜ್ ಕಿಶೋರ್, ಬೈಕ್ ಸಮಸ್ಯೆ ಆಗಿದೆ ತಾನೆ, ರಿಪೇರಿ ಮಾಡಿಸುತ್ತೇನೆಂದು ಹತ್ತಿರವಾಗಿದ್ದ. ಪಿಎಸ್ಐ ಬಳಿ ಬಂದವನೇ ನನ್ನಣ್ಣನಿಗೆ ಹಣ ಬರಬೇಕು ನೀವು ಕೊಡಿಸಿ ಎಂದು ಕೇಳಿದ್ದ. ಹಿಂದೆ ಮುಂದೆ ಯೋಚನೆ ಮಾಡದೇ PSI ಸಿದ್ಧಾರೂಡ, ಕಾನ್ಸ್ಟೇಬಲ್ ಅಲ್ಲಾಭಾಕ್ಷ್ನ ಕರೆದುಕೊಂಡು, ರಾಜ್ ಕಿಶೋರ್ ಜೊತೆ ಹೋಗಿದ್ದರು. ಹೋದವರು ಕಾರ್ತಿಕ್ ಎಂಬಾತನ ಮೇಲೆ ದೌರ್ಜನ್ಯ ಮಾಡಿ ಹೆಚ್ಎಸ್ಆರ್ ಲೇಔಟ್ನಿಂದ ಕಿಡ್ನಾಪ್ ಮಾಡಿದ್ದರು. ಜುಲೈ 25ರಂದು ಈ ಘಟನೆ ನಡೆದಿದ್ದು ಕಾರ್ತಿಕ್ನನ್ನ ಬೆದರಿಸಿ ಒಂದೂವರೆ ಕೋಟಿ ಕ್ರಿಪ್ಟೋ ಕರೆನ್ಸಿ, ₹20 ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು.
ಹಣ ಕೊಟ್ಟು ಎಸ್ಕೇಪ್ ಆದ ಕಾರ್ತಿಕ್ ಕೆಜಿ ಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಆದರೆ ಕೆ ಜಿ ಹಳ್ಳಿಯಲ್ಲಿ ತನಿಖೆ ಸರಿಯಾಗದ ಕಾರಣ ಕೇಸ್ ಸಿಸಿಬಿಗೆ ವರ್ಗಾವಣೆಯಾಗಿತ್ತು. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಪ್ರೊಬೆಷನರಿ ಪಿಎಸ್ಐ ಸೇರಿ ಮೂವನ್ನ ಅರೆಸ್ಟ್ ಮಾಡಿದ್ದಾರೆ. ಹಾಗೂ ಬ್ಯಾಂಕ್ನಲ್ಲಿದ್ದ 20 ಲಕ್ಷ ಹಣ ಮತ್ತು ಕ್ರಿಪ್ಟೊ ಕರೆನ್ಸಿಯನ್ನ ವಶಕ್ಕೆ ಪಡೆಯಲಾಗಿದೆ. ಅದೇನೇ ಇರಲಿ ಪಿಎಸ್ಐ ಆಗಿ ತಪ್ಪು ಸರಿ. ನ್ಯಾಯದ ತೂಕ ಮಾಡದೇ ಯಾರದ್ದೋ ಮಾತು ಕೇಳಿ ಕಂಬಿ ಹಿಂದೆ ಹೋಗಿದ್ದು ವಿಪರ್ಯಾಸ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ