newsfirstkannada.com

ಪಿಎಸ್​​ಐ ಮಗನ ಬೈಕ್​​ ವ್ಹೀಲಿಂಗ್​ನಿಂದ ರೈತ ಸಾವು ಕೇಸ್​ಗೆ ಟ್ವಿಸ್ಟ್​​​.. ಏನಿದು ಹೊಸ ಡಿಮ್ಯಾಂಡ್​​?

Share :

18-09-2023

    ಆರೋಪಿ ಸೈಯದ್​ನ ತಾಯಿ ಪಿಎಸ್ಐ ಎತ್ತಂಗಡಿ

    ಪೊಲೀಸ್​ ಇಲಾಖೆ ವಿರುದ್ಧ ಜನರ ಆಕ್ರೋಶ

    ವ್ಹೀಲಿಂಗ್​ ಹುಚ್ಚಾಟಕ್ಕೆ ಅಮಾಯಕ ಜೀವ ಬಲಿ

ಮೈಸೂರು: ಪಿಎಸ್ಐ ಪುತ್ರನ ಚೆಲ್ಲಾಟಕ್ಕೆ ರೈತನೊಬ್ಬ ಬಲಿಯಾದ ಘಟನೆ ಮೈಸೂರಿನಲ್ಲಿ ನಡೆೆದಿದೆ.‌ ವ್ಹೀಲಿಂಗ್ ಗೀಳು ಹತ್ತಿಸಿಕೊಂಡ ಯುವಕನಿಂದಾಗಿ ಸಂಭವಿಸಿದ ಸಾವಿಗೆ ಪ್ರತಿಯಾಗಿ ಆತನ ತಾಯಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಪಿಎಸ್ಐ ವರ್ಗಾವಣೆ ಮಾಡಲಾಗಿದೆ. ಆದ್ರೆ ಇಲಾಖೆಯ ಆದೇಶ ಪ್ರತಿಯನ್ನೇ ವಾಟ್ಸ್ಅಪ್ ಸ್ಟೇಟಸ್ ಹಾಕಿಕೊಂಡು ಅಸಮಾಧಾನ ಹೊರಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.

ಮಹಿಳಾ ಪಿಎಸ್ಐ ಪುತ್ರನ ವ್ಹೀಲಿಂಗ್ ಶೋಕಿಗೆ ವೃದ್ಧ ಬಲಿ
ಮಹಿಳಾ ಪಿಎಸ್ಐ ಮತ್ತು ಪುತ್ರನ ವಿರುದ್ಧ ಕ್ರಮಕ್ಕೆ ಒತ್ತಾಯ

ನಂಜನಗೂಡು ತಾಲೂಕಿನ ಹಿಮ್ಮಾವು ಬಳಿ 68 ವರ್ಷದ ಗುರುಸ್ವಾಮಿ ಎಂಬುವರಿಗೆ ವ್ಹೀಲಿಂಗ್ ಮಾಡಿಕೊಂಡು ಬಂದು ಪಿಎಸ್​ಐ ಪುತ್ರ ಸೈಯದ್​ ಐಮಾನ್​ ಡಿಕ್ಕಿ ಹೊಡೆದಿದ್ದ. ಬೈಕ್​ ಗುದ್ದಿದ ರಭಸಕ್ಕೆ ಗುರುಸ್ವಾಮಿ ಮೃತಪಟ್ಟಿದ್ದರು. ಪಿಎಸ್​ಐ ಪುತ್ರನ ವ್ಹೀಲಿಂಗ್​ ಹುಚ್ಚಾಟಕ್ಕೆ ಸಿಡಿದೆದ್ದ ಮೃತನ ಮನೆಯವರು ಮತ್ತು ಗ್ರಾಮಸ್ಥರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದರು. ಅಷ್ಟೇ ಅಲ್ಲ, ಆತನನ್ನು ಬಂಧಿಸೋವರೆಗೂ, ಶವವನ್ನು ಕೊಂಡೊಯ್ಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಸೈಯದ್ ಐಮಾನ್ ವ್ಹೀಲಿಂಗ್ ಚಟ ನಿನ್ನೆ ಮೊನ್ನೆಯದ್ದಲ್ಲ. ಬರೋಬ್ಬರಿ ನಾಲ್ಕು ವರ್ಷದಿಂದಲೂ ವ್ಹೀಲಿಂಗ್ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡ್ತಿದ್ದ. ಈತನ ತಾಯಿ ಪಿಎಸ್​ಐ ಆಗಿದ್ದ ಕಾರಣ, ಆಡಿದ್ದೇ ಆಟವಾಗಿತ್ತು. ಈ ಹಿಂದೆ ಈತನ ವಿರುದ್ಧ ಎಫ್​ಐಆರ್​ ಆಗಿದ್ರೂ ಕ್ರಮ ಆಗಿರಲಿಲ್ಲ. ಈ ನಿರ್ಲಕ್ಷ್ಯವೇ ಗುರುಸ್ವಾಮಿಯವರ ಸಾವಿಗೆ ಕಾರಣವಾಗಿದೆ ಅಂತಾ ರೈತರು ಆರೋಪಿಸಿದ್ದಾರೆ.

ಪ್ರತಿಭಟನಾಕಾರರ ಮ‌ನವೊಲಿಕೆಗೆ ಅಧಿಕಾರಿಗಳ ಹರಸಾಹಸ

ಆರೋಪಿ ಸೈಯದ್ ಐಮಾನ್‌ನನ್ನು ಶಿಕ್ಷೆಗೆ ಒಳ ಪಡಿಸಬೇಕು ಹಾಗೂ ಪಿಎಸ್ಐ ಯಾಸ್ಮೀನ್ ತಾಜ್‌ರನ್ನ ಅಮಾನತು ಮಾಡಬೇಕು ಅಂತಾ ಮೃತನ ಕುಟುಂಬಸ್ಥರು ಮೈಸೂರಿನ ಕೆ.ಆರ್ ಆಸ್ಪತ್ರೆ ಶವಗಾರದ ಬಳಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮನವೊಲಿಸಲು ಬಂದ ಡಿವೈಎಸ್ಪಿ ಗೋವಿಂದರಾಜುಗೆ ರೈತರು ತರಾಟೆಗೆ ತೆಗೆದುಕೊಂಡರು. ಈಗಾಗಲೇ ಗುರುಸ್ವಾಮಿಯವರ ಪುತ್ರ ನೀಡಿದ ದೂರಿನಂತೆ, ಆರೋಪಿ ಸೈಯದ್​ ಐಮಾನ್​ನನ್ನು ಬಂಧಿಸಲಾಗಿದೆ. ಯಾಸ್ಮಿನ್ ತಾಜ್ ಅವರನ್ನು ವರ್ಗಾವಣೆ ಮಾಡಿದ್ದೇವೆ. ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಡಿವೈಎಸ್ಪಿ ಗೋವಿಂದರಾಜು ಭರವಸೆ ನೀಡಿದರು.

ಆರೋಪಿ ಸೈಯದ್​ನ ತಾಯಿ ಪಿಎಸ್ಐ ಎತ್ತಂಗಡಿ
ವರ್ಗಾವಣೆ ಶಿಕ್ಷೆಗೆ ಯಾಸ್ಮಿನ್‌ ತಾಜ್​ ಆಕ್ರೋಶ

ಈ ಎಲ್ಲ ಬೆಳೆವಣಿಗೆ ಬೆನ್ನಲ್ಲೇ ಪಿಎಸ್ಐ ಯಾಸ್ಮಿನ್​ ತಾಜ್‌ರನ್ನು ನಂಜನಗೂಡು ಸಂಚಾರ ಪೊಲೀಸ್ ಠಾಣೆಯಿಂದ ಜಿಲ್ಲಾ ಅಪರಾಧ ದಾಖಲೆಗಳ ವಿಭಾಗಕ್ಕೆ ಎತ್ತಂಗಡಿ ಮಾಡಲಾಗಿದೆ. ಇದಕ್ಕೆ ಅಸಮಾಧಾನಗೊಂಡ ಯಾಸ್ಮೀನ್ ತಾಜ್ ಆದೇಶ ಪ್ರತಿಯನ್ನೇ ವಾಟ್ಸ್ಅಪ್ ಸ್ಟೇಟಸ್‌ಗೆ ಹಾಕಿ, ತಮ್ಮ ಇಲಾಖೆ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ದಿಸ್ ಇಸ್ ವಾಟ್ ಐ ಗೆಟ್ ಫ್ರಮ್ ಮೈ ಲವ್ಲಿ ಡಿಪಾರ್ಟ್‌ಮೆಂಟ್ ಹ್ಯಾಟ್ಸ್ಅಪ್ ಅಂತ ತಮ್ಮ ಇಲಾಖೆ ವಿರುದ್ಧ ಬರೆದುಕೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಸದ್ಯ ಮೈಸೂರು ಎಸ್​ಪಿ ನಂದಿನಿ ಅವರು ದೂರವಾಣಿ ಮೂಲಕ ಪ್ರತಿಭಟನಾಕಾರರೊಂದಿಗೆ ಮಾತನಾಡಿದ್ದು, ಯಾಸ್ಮೀನ್ ತಾಜ್ ವಿರುದ್ಧ ಕ್ರಮ ಕೈಗೊಳ್ಳಲು ಏಳು ದಿನಗಳ ಕಾಲಾವಕಾಶ ಕೋರಿದ್ದಾರೆ. ಎಸ್​ಪಿ ಭರವಸೆಗೆ ಸ್ಪಂದಿಸಿದ ಕುಟುಂಬಸ್ಥರು ಪ್ರತಿಭಟನೆ ಕೈಬಿಟ್ಟರು. ಹಾಗೂ ಗುರುಸ್ವಾಮಿಯವರ ಮೃತದೇಹವನ್ನು ಪಡೆದು, ಗ್ರಾಮಕ್ಕೆ ತೆರಳಿದ್ರು. ತಪ್ಪು ಮಾಡಿದವರು ಯಾರೇ ಆಗಲಿ. ಅವರು ತಪ್ಪು ಮಾಡಿದಾಗಲೇ ಸೂಕ್ತ ಶಿಕ್ಷೆಯಾದ್ರೆ ಇಂಥ ಘಟನೆಗಳು ನಡೆಯೋದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್

ಪಿಎಸ್​​ಐ ಮಗನ ಬೈಕ್​​ ವ್ಹೀಲಿಂಗ್​ನಿಂದ ರೈತ ಸಾವು ಕೇಸ್​ಗೆ ಟ್ವಿಸ್ಟ್​​​.. ಏನಿದು ಹೊಸ ಡಿಮ್ಯಾಂಡ್​​?

https://newsfirstlive.com/wp-content/uploads/2023/09/death-71.jpg

Load More