ಸೆಕ್ಯುರಿಟಿ ಗಾರ್ಡ್ಗಳನ್ನು ಬರ್ಬರವಾಗಿ ಹತ್ಯೆ ಮಾಡುತ್ತಿದ್ದ ಸೈಕೋ
ಸೈಕೋ ಕ್ರಿಮಿನಲ್ ಅಟ್ಟಹಾಸಕ್ಕೆ ಸೆಕ್ಯುರಿಟಿ ಗಾರ್ಡ್ಗಳು ವಿಲವಿಲ
ಇದು ಇಡೀ ಸಿಲಿಕಾನ್ ಸಿಟಿ ಮಂದಿ ನಿಜಕ್ಕೂ ಬೆಚ್ಚಿ ಬೀಳುವ ಸುದ್ದಿ
ಬೆಂಗಳೂರು: ಒಂಟಿಯಾಗಿದ್ದ ಸೆಕ್ಯುರಿಟಿ ಗಾರ್ಡ್ಗಳನ್ನು ಹುಡುಕಿ ಬರ್ಬರವಾಗಿ ಹತ್ಯೆ ಮಾಡುತ್ತಿದ್ದ ಸೈಕೋ ಕಿಲ್ಲರ್ನನ್ನು ಕೊನೆಗೂ ಆರ್. ಟಿ ನಗರ ಪೊಲೀಸರು ಬಂಧಿಸುವಲ್ಲಿ ಸಕ್ಸಸ್ ಕಂಡಿದ್ದಾರೆ. ತೌಸೀಪ್ ಬಂಧಿತ ಆರೋಪಿ.
ಈ ಖತರ್ನಾಕ್ ಆರೋಪಿ ತೌಸೀಪ್ ವಿಚಿತ್ರ ಸೈಕೋ ಕಿಲ್ಲರ್ ಆಗಿದ್ದ. ಸಿನಿಮೀಯ ಶೈಲಿಯಲ್ಲಿ ಬಂದು ಮಧ್ಯರಾತ್ರಿ ಕಂಠಪೂರ್ತಿ ಕುಡಿದು ಮಾದಕ ವಸ್ತುಗಳಿಂದ ನಶೆ ಏರಿಸಿಕೊಂಡು ಸೆಕ್ಯುರಿಟಿ ಗಾರ್ಡ್ಗಳನ್ನು ಹುಡುಕಿ ಕೊಲ್ಲುತ್ತಿದ್ದನು. ಜೊತೆಗೆ ಡ್ರ್ಯಾಗರ್ ಅನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡು ತಿರುಗಾಡುತ್ತಿದ್ದ. ಎರಡರಿಂದ ಮೂರು ಗಂಟೆ ಹೊತ್ತಿಗೆ ಸಿಕ್ಕ ಸಿಕ್ಕ ಸೆಕ್ಯುರಿಟಿ ಗಾರ್ಡ್ಗಳ ಮೇಲೆ ಹಲ್ಲೆ ಮಾಡುತ್ತಿದ್ದ. ಈ ಆರೋಪಿಯು ಆರ್.ಟಿ ನಗರ, ಸಂಜಯ ನಗರ, ಜೆಸಿ ನಗರ, ಕೆಜಿ ಹಳ್ಳಿಯಲ್ಲಿ ಸೆಕ್ಯುರಿಟಿ ಗಾರ್ಡ್ಗಳನ್ನು ಕೊಲೆ ಮಾಡಿದ್ದಾನೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಮನೆ ಬಳಿಯೂ ಸೆಕ್ಯುರಿಟಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ.
ಇನ್ನು, ಈ ಆರೋಪಿ ವಿರುದ್ಧ ಸಾಕಷ್ಟು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದವು. ಹೀಗಾಗಿ ಪೊಲೀಸ್ ಅಧಿಕಾರಿಗಳು ಮೂರು ದಿನಗಳ ಕಾಲ ಹಗಲು ರಾತ್ರಿ ಈತನ ಹಿಂದೆ ಬಿದ್ದಿದ್ದರು. ಕೊನೆಗೆ ಆರ್.ಟಿ ನಗರ 80 FT ರೋಡ್ ಬಳಿ ಪೊಲೀಸರ ಕಣ್ಣಿಗೆ ಬಿದಿದ್ದಾನೆ. ಈ ವೇಳೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಆರೋಪಿ ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಕೊನೆಗೆ ಸೈಕೋ ಕಿಲ್ಲರ್ ಪೊಲೀಸರ ಅಥಿತಿಯಾಗಿದ್ದಾನೆ.
ಒಂಟಿಯಾಗಿದ್ದ ಸೆಕ್ಯುರಿಟಿ ಗಾರ್ಡ್ಗಳನ್ನು ಹುಡುಕಿ ಬರ್ಬರವಾಗಿ ಹತ್ಯೆ ಮಾಡುತ್ತಿದ್ದ ಸೈಕೋ ಕಿಲ್ಲರ್ನನ್ನು ಕೊನೆಗೂ ಆರ್. ಟಿ ನಗರ ಪೊಲೀಸರು ಬಂಧಿಸಿದ್ದಾರೆ. ತೌಸೀಪ್ ಬಂಧಿತ ಆರೋಪಿಯಾಗಿದ್ದಾನೆ..#SecurityGuard #newsfirstkannada #kannadanews #Psychokiller #bangaluru pic.twitter.com/shzt10HLU5
— NewsFirst Kannada (@NewsFirstKan) June 27, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ