ನಾಲ್ಕೂ ಮಕ್ಕಳ ಉಡುಗೆ-ತೊಡುಗೆಯಲ್ಲೂ ಸಂಪ್ರದಾಯ
ಸೀಮಾ ಮಾತಿನ ದಾಟಿ ಬಗ್ಗೆ ಇದೆ ಒಂದು ಅನುಮಾನ
ಭಾರತದ ಗುಪ್ತಚರ ಮೂಲಗಳಿಂದ ಸ್ಫೋಟಕ ಮಾಹಿತಿ
ಪಬ್ಜೀ ಆಡುವಾಗ ಪ್ರೀತಿಯಲ್ಲಿ ಬಿದ್ದಿದ್ದೆ ಎಂದು ಕತೆ ಕಟ್ಟಿ ನಾಲ್ವರು ಮಕ್ಕಳೊಂದಿಗೆ ನೇಪಾಳದ ಮೂಲಕ ಅಕ್ರಮವಾಗಿ ಬಂದಿರುವ ಪಾಕಿಸ್ತಾನಿ ಸೀಮಾ ಹೈದರ್ ವಿರುದ್ಧ ನಡೆಯುತ್ತಿರುವ ತನಿಖೆಗಳು ಮುಂದುವರಿದಿವೆ. ತನಿಖಾ ಸಂಸ್ಥೆಗಳಿಂದ ಕೆಲವು ಮಹತ್ವದ ವಿಚಾರಗಳು ಹೊರಬರುತ್ತಿದ್ದು, ಭಾರತಕ್ಕೆ ನುಸುಳಲು ಅನುಕೂಲ ಆಗಲಿ ಎಂದು ವೇಷ-ಭೂಷಣಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದಳಂತೆ.
ಭಾರತೀಯ ಮಹಿಳೆಯಂತೆ ಬಿಂಬಿಸಿಕೊಳ್ಳಲು, ಅಪ್ಪಟ ಭಾರತೀಯ ನಾರಿಯಂತೆ ಡ್ರೆಸ್ಸಿಂಗ್ ಮಾಡಿಕೊಳ್ಳುವುದನ್ನು ಕಲಿತಿದ್ದಳು. ಅಂತೆಯೇ ನೇಪಾಳದ ಗಡಿ ಮೂಲಕ ಅಕ್ರಮವಾಗಿ ಬರುವಾಗ ಭಾರತದ ಸಂಪ್ರದಾಯಸ್ಥ ಮಹಿಳೆಯರು ಉಡುವ ಸೀರೆಯನ್ನೇ ಆಯ್ಕೆ ಮಾಡಿಕೊಂಡು ಹಣೆಗೆ ಬಿಂದಿ ಕೂಡ ಇಟ್ಟಿಕೊಂಡಿದ್ದಳು. ಮಾತ್ರವಲ್ಲ ಮಕ್ಕಳಿಗೆ ಯಾವುದೇ ಫ್ಯಾಷನ್ ಉಡುಗೆಗಳನ್ನು ಹಾಕದೇ ಹಳ್ಳಿ ಸೊಗಡಿನ ಮಕ್ಕಳು ಕಾಣುವಂತೆ ಡ್ರೆಸ್ಸಿಂಗ್ ಮಾಡಿ ಕರೆದುಕೊಂಡು ಬಂದಿದ್ದಳು ಎಂದು ಮೂಲಗಳು ತಿಳಿಸಿವೆ.
ನೆರೆಯ ರಾಷ್ಟ್ರಗಳಿಂದ ಭಾರತಕ್ಕೆ ಅಕ್ರಮವಾಗಿ ನುಸುಳಲು ಮತ್ತು ಮಾನವ ಕಳ್ಳಸಾಗಾಟ ಮಾಡುವ ದಂಧೆಕೋರರು ಇದೇ ರೀತಿಯ ತಂತ್ರಗಳನ್ನು ಬಳಸುತ್ತಿದ್ದಾರೆ. ಸೀಮಾ ಪ್ರಕರಣದಲ್ಲೂ ಇದೇ ಆಗಿದೆ ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ಖಾಸಗಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಗುಪ್ತಚರ ಇಲಾಖೆಯ ಮೂಲಗಳ ತಿಳಿಸಿರುವ ಪ್ರಕಾರ, ಸೀಮಾಳ ಸಂವಹನ ಕೂಡ ಚೆನ್ನಾಗಿದೆ. ಆಕೆ ಮಾತನಾಡುವಾಗ ಎಲ್ಲಿಯೂ ಎಡವದೇ ನಿರರ್ಗಳವಾಗಿ ಮಾತನಾಡುತ್ತಾಳೆ. ಅವಳು ಮಾತನಾಡುವ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಪಾಕಿಸ್ತಾನಿ ಹ್ಯಾಂಡ್ಲರ್ಸ್ನಿಂದ ಟ್ರೈನಿಂಗ್ ಆದಂತೆ ಕಾಣ್ತಿದೆ. ಭಾರತದಲ್ಲಿ ವಿಧ್ವಂಸಕ ಚಟುವಟಿಕೆ ನಡೆಸಲು ಪಾಕಿಸ್ತಾನದ ಹ್ಯಾಂಡ್ಲರ್ಸ್ (Pakistani handlers) ಇದೇ ರೀತಿ ಟ್ರೈನಿಂಗ್ ನೀಡಿ, ದೇಶದ ಗಡಿಯೊಳಗೆ ನುಸುಳಿಸುತ್ತಾರೆ. ಹೀಗಾಗಿ ಆಕೆಗೆ ಪಾಕಿಸ್ತಾನದ ಗುಪ್ತಚರ ಇಲಾಖೆಯ ಜೊತೆ ಸಂಪರ್ಕ ಇರಬಹುದು ಎನ್ನಲಾಗಿದೆ. ಈ ಸಂಬಂಧ ಭಾರತದ ಗುಪ್ತಚರ ಇಲಾಖೆ ತನಿಖೆಯನ್ನು ಆರಂಭಿಸಿದೆ.
ಇದನ್ನೂ ಓದಿ: ಸೀಮಾ ಹೈದರ್ ಮೇಲೆ ಹದ್ದಿನ ಕಣ್ಣು.. ಆಕೆಗೂ ಪಾಕ್ ಆರ್ಮಿಗೂ ಇದೆ ಭಾರೀ ನಂಟು!?
ಸೀಮಾಳನ್ನು ಎಟಿಎಸ್ ಅಧಿಕಾರಿಗಳು ಮತ್ತು ಇಂಟಲಿಜೆನ್ಸ್ ಬ್ಯೂರೋ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈಕೆ ಪಾಕಿಸ್ತಾನ ಐಎಸ್ಐ (Inter-Services Intelligence) ಜೊತೆ ಲಿಂಕ್ ಇರುವ ಅನುಮಾನ ವ್ಯಕ್ತವಾಗಿದೆ. ನಮ್ಮಿಬ್ಬರ ಮಧ್ಯೆ ಪಬ್ಜೀ ಆಡುವಾಗ ಸಂಪರ್ಕ ಆಯಿತು. ನನಗೆ ಭಾರತದ ಸಚಿನ್ ಮೇಲೆ ಪ್ರೀತಿ ಆಗಿದ್ದರಿಂದ ನೇಪಾಳದ ಗಡಿ ಮೂಲಕ ಮೇ 13 ರಂದ ಭಾರತ ಪ್ರವೇಶ ಮಾಡಿದೆ ಎಂದು ಸೀಮಾ ಹೇಳಿಕೊಂಡಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ