newsfirstkannada.com

ಕಾಲೇಜು ಆವರಣದಲ್ಲೇ ಮಚ್ಚು-ಲಾಂಗ್​ಗಳಿಂದ ಕೊಚ್ಚಿ ಪಿಯುಸಿ ವಿದ್ಯಾರ್ಥಿಯ ಬರ್ಬರ ಹತ್ಯೆ

Share :

04-11-2023

    ಜೊತೆಗಿದ್ದ ಯುವಕರ ಗ್ಯಾಂಗ್​ನಿಂದ ಹತ್ಯೆ ಮಾಡಿರುವ ಶಂಕೆ

    ಹತ್ಯೆಯಾದ ಬಾಲಕನ ಮೈಮೇಲೆ ಲಾಂಗು-ಮಚ್ಚಿನ ಗುರುತು

    ಶಾಲಾ ಆವರಣದಲ್ಲೇ ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್

ಕೋಲಾರ: ಸರ್ಕಾರಿ ಶಾಲೆಯ ಆವರಣದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಪೇಟೆಚಾಮನಹಳ್ಳಿ ಬಡಾವಣೆಯಲ್ಲಿ ನಡೆದಿದೆ.

ಕಾರ್ತಿಕ್ ಸಿಂಗ್ (17) ಕೊಲೆಯಾದ ವಿದ್ಯಾರ್ಥಿ. ಹತ್ಯೆಯಾಗಿರುವ ವಿದ್ಯಾರ್ಥಿ ಪ್ರಥಮ‌ ಪಿಯುಸಿ ಓದುತ್ತಿದ್ದ. ನಿನ್ನೆ ಹೊಟ್ಟೆ ನೋವು ಎಂದು ಕಾಲೇಜಿಗೆ ರಜೆ ಹಾಕಿ ಮನೆಯಲಿದ್ದ. ಸಂಜೆ ವೇಳೆ ಯಾರೋ ಸ್ನೇಹಿತರು ಫೋನ್ ಮಾಡಿ ಕರೆದಿದ್ದಾರೆ. ಹೀಗಾಗಿ ಮನೆಯಲ್ಲಿ ಅಮ್ಮನಿಗೆ ಹೇಳಿ ಹೋಗಿದ್ದ. ರಾತ್ರಿ 7:30 ರಿಂದ 8 ಗಂಟೆ ಸುಮಾರಿಗೆ ಶಾಲಾ ಆವರಣದಲ್ಲಿ ದುಷ್ಕರ್ಮಿಗಳು ಬಾಲಕನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಬಾಲಕನ ಮೇಲೆ ಲಾಂಗು-ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಿರುವ ಗುರುತುಗಳು ಪತ್ತೆಯಾಗಿವೆ. ಜೊತೆಗಿದ್ದ ಯುವಕರ ಗ್ಯಾಂಗ್​ ಕೊಲೆ‌‌ ಮಾಡಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಮಗನನ್ನು ಕಳೆದುಕೊಂಡ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಘಟನಾ ಸ್ಥಳಕ್ಕೆ ಕೋಲಾರ ನಗರ ಠಾಣಾ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲು ಮಾಡಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಲೇಜು ಆವರಣದಲ್ಲೇ ಮಚ್ಚು-ಲಾಂಗ್​ಗಳಿಂದ ಕೊಚ್ಚಿ ಪಿಯುಸಿ ವಿದ್ಯಾರ್ಥಿಯ ಬರ್ಬರ ಹತ್ಯೆ

https://newsfirstlive.com/wp-content/uploads/2023/11/KLR_STUDENT_MURDER.jpg

Load More