/newsfirstlive-kannada/media/post_attachments/wp-content/uploads/2023/11/Fight-1-1.jpg)
ಉತ್ತರ ಪ್ರದೇಶ: ಯುವಕರ ಗುಂಪೊಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಆತನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಮೀರತ್​ನಲ್ಲಿ ನಡೆದಿದೆ. ಘಟನೆ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೃತ್ಯವೆಸಗಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಡಿಯೋದಲ್ಲಿ ಸೆರೆಯಾದ ದೃಶ್ಯದಲ್ಲಿ, ವ್ಯಕ್ತಿಯೊಬ್ಬ ವಿದ್ಯಾರ್ಥಿಗೆ ಹೊಡೆಯುತ್ತಾನೆ. ಮತ್ತೊಬ್ಬ ಈ ದೃಶ್ಯವನ್ನು ಸೆರೆಹಿಡಿಯುತ್ತಿರುತ್ತಾನೆ. ವ್ಯಕ್ತಿ ಪದೇ ಪದೇ ವಿದ್ಯಾರ್ಥಿಯ ತಲೆಗೆ, ಬೆನ್ನಿಗೆ ಹೊಡೆಯುತ್ತಾನೆ. ಬಳಿಕ ವಿಡಿಯೋ ಸೆರೆಹಿಯುತ್ತಿದ್ದವನು ಕೂಡ ಬಾಲಕನಿಗೆ ಗೂಸಾ ನೀಡುತ್ತಾನೆ. ನಂತರ ಮಗದೊಬ್ಬ ವಿದ್ಯಾರ್ಥಿಯ ಮುಖದ ಮೇಲೆ ಮೂರ್ತ ವಿಸರ್ಜನೆ ಮಾಡುತ್ತಾನೆ. ಈ ದೃಶ್ಯವೆಲ್ಲವೂ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಿಯುಸಿ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ ಹೀನಾ ಕೃತ್ಯವೆಸಗಿದ ನಾಲ್ವರನ್ನು ಪೊಲೀಸರು ಗುರುತಿಸಿದ್ದಾರೆ. ಅವಿ ಶರ್ಮಾ, ಆಶಿಶ್​ ಮಾಲಿಕ್, ರಾಜನ್, ಮೋಹಿತ್​ ಠಾಕೂರ್​ ಈ ಕೃತ್ಯವೆಸಗಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ.
मेरठ मे भी मध्यप्रदेश जैसा पेशाब कांड; पहले युवक को बुरी तरह पीटा, फिर मुंह पर किया पेशाब, युवक पर पेशाब करते हुए वीडियो बनाया और खुद ही आरोपियों ने वीडियो वायरल की। #Meerut#UttarPradesh#UPPolicepic.twitter.com/Is0dfBylEZ
— iMayankofficial ?? (@imayankindian)
मेरठ मे भी मध्यप्रदेश जैसा पेशाब कांड; पहले युवक को बुरी तरह पीटा, फिर मुंह पर किया पेशाब, युवक पर पेशाब करते हुए वीडियो बनाया और खुद ही आरोपियों ने वीडियो वायरल की। #Meerut#UttarPradesh#UPPolicepic.twitter.com/Is0dfBylEZ
— iMayankofficial 🇮🇳 (@imayankindian) November 26, 2023
">November 26, 2023
ವಿದ್ಯಾರ್ಥಿಯ ತಂದೆ ಹೇಳುವಂತೆ, ಆತನನ್ನು ಸಂಬಂಧಿಕರ ಮನೆಯಿಂದ ಅಪಹರಿಸಲಾಗಿದೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಲ್ಲೆ ಮಾಡಲಾಗಿದೆ. ಅಪಹರಣದ ದಿನ ವಿದ್ಯಾರ್ಥಿಯನ್ನು ಮನೆಯವರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಎಲ್ಲೂ ಆತ ಕಾಣಿಸಿರಲಿಲ್ಲ. ನಂತರ ಮಾರನೆ ದಿನ ಬೆಳಗ್ಗಿನ ಜಾವ ವಿದ್ಯಾರ್ಥಿ ಮನೆಗೆ ತಲುಪಿದ್ದಾನೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಯ ಕುಟುಂಬಸ್ಥರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲು ಮುಂದಾದಾಗ ಆರಂಭದಲ್ಲಿ ಕ್ರಮ ಕೈಗೊಂಡಿಲ್ಲ. ನವೆಂಬರ್​ 16ರಂದು ಮತ್ತೆ ಪೊಲೀಸ್​ ಠಾಣೆ ತೆರಳಿದಾಗ ಪ್ರಕರಣ ದಾಖಲಿಸಿಕೊಂಡರು.
ಇನ್ನು ವಿದ್ಯಾರ್ಥಿಯನ್ನು ಅಪಹರಿಸಿದವರು ಆತನ ಸ್ನೇಹಿತರಾಗಿದ್ದರು ಎಂದು ತಿಳಿದುಬಂದಿದೆ. ಆದರೆ ಯಾವ ಕಾರಣಕ್ಕೆ ಅಪಹರಣ ಮಾಡಲಾಗಿದೆ ಎಂದು ತನಿಖೆ ಬಳಿಕ ಬೆಳಕಿಗೆ ಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us