newsfirstkannada.com

VIDEO: ವಡಾಪಾವ್​​ ತಿನ್ನಲು ಹೋಗಿ ಚಿನ್ನದ ಒಡವೆ ಕಳೆದುಕೊಂಡ ದಂಪತಿ; ಕಳ್ಳ ಕದ್ದಿದ್ದು ಹೀಗೆ!

Share :

Published August 31, 2024 at 4:28pm

    ವಡಪಾವ್ ತಿನ್ನಲು ಅಂತ ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿದ ದಂಪತಿ

    ಸ್ಕೂಟರ್ ಪಕ್ಕದಲ್ಲಿಯೇ ಪತ್ನಿ ನಿಂತಿದ್ರು ಕೈಚಳಕ ತೋರಿಸಿದ ಕಿಲಾಡಿ ಕಳ್ಳ

    ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳನ ಕರಾಮತ್ತು, ಅಸಹಾಯಕಳಾಗಿ ನಿಂತ ಮಹಿಳೆ

ಪುಣೆ: ಕಳ್ಳರು ಅಂದ್ರೆ ಪರಮ ಚಾಲಾಕಿಗಳು, ಚಾಲಕಿತನ ಒಲಿಯದವನಿಗೆ ಕಳ್ಳತನದ ಕಲೆಗಳು ಕರಗತವಾಗುವುದೇ ಇಲ್ಲ. ಅಪ್ಪಟ ನರಿಯಂತೆ ಹೊಂಚು ಹಾಕಿ ಇಟ್ಟ ಗುರಿಯನ್ನು ಹೊಡೆದುಕೊಂಡು ಬರ್ತಾರೆ. ಅದಕ್ಕೆ ದೊಡ್ಡ ಸಾಕ್ಷಿಯಂತಿದೆ ಪುಣೆಯಲ್ಲಿ ನಡೆದ ಒಂದು ಕಳ್ಳತನ. ವಡಾಪಾವ್ ತಿನ್ನೋಣ ಅಂತ ರಸ್ತೆ ಪಕ್ಕ ಸ್ಕೂಟರ್ ನಿಲ್ಲಿಸಿದ್ದೆ ದೊಡ್ಡ ತಪ್ಪಾಗಿ ಹೋಯ್ತು ಅನಿಸುವಂತೆ ಕಳ್ಳತನ ಮಾಡಿದ್ದಾನೆ ಚಾಲಾಕಿ ಕಳ್ಳ.

ಇದನ್ನೂ ಓದಿ: ಯೋಗ ಕಲಿಸಿಕೊಡ್ತೀನಿ ಎಂದು ಮಾಡಬಾರದ ಮಾಡಿದ; ಯೋಗ ಗುರುಗೆ 23 ತಿಂಗಳ ಜೈಲು ಶಿಕ್ಷೆ

ಪುಣೆಯಲ್ಲಿ ಹಿರಿಯ ದಂಪತಿಗಳು ರಸ್ತೆ ಪಕ್ಕ ತಮ್ಮ ಸ್ಕೂಟರ್ ನಿಲ್ಸಿದ್ದಾರೆ. ಹೆಂಡತಿ ಸ್ಕೂಟರ್ ಪಕ್ಕದಲ್ಲಿಯೇ ನಿಂತಿದ್ದಾರೆ. ಪತಿ ವಡಾಪಾವ್ ತರೋಣ ಅಂತ ಪಕ್ಕದ ಅಂಗಡಿಗೆ ಹೋಗಿದ್ದಾನೆ. ಮಹಿಳೆಯ ಗಮನ ಬೇರೆ ಕಡೆ ತಿರುಗಿದಾಗ ಸ್ಕೂಟರ್​ನ ಮುಂಭಾಗದಲ್ಲಿ ಇಟ್ಟಿದ್ದ ಬ್ಯಾಗ್​ನ್ನು ತೆಗೆದುಕೊಂಡು ಪೇರಿಕಿತ್ತಿದ್ದಾನೆ ಅಲ್ಲೇ ಪಕ್ಕದಲ್ಲಿಯೇ ಇದ್ದ ಕಳ್ಳ. ಕಳ್ಳನ ಕರಾಮತ್ತು ಸಿಸಿ ಕ್ಯಾಮರಾದದಲ್ಲಿ ದಾಖಲಾಗಿದೆ. ಬಿಳಿ ಅಂಗಿಯನ್ನು ಧರಿಸಿದ್ದ ಕಳ್ಳ ಸ್ಕೂಟರ್ ಮುಂಭಾಗದಲ್ಲಿ ಇಟ್ಟಿದ್ದ ಬ್ಯಾಗನ್ನು ಎತ್ತಿಕೊಂಡು ಓಡಿಹೋಗಿದ್ದಾನೆ, ಇದನ್ನು ಗಮನಿಸಿದ ಮಹಿಳೆ ಕಿರುಚಿಕೊಂಡು ಸುತ್ತಮುತ್ತಲಿನ ಜನರನ್ನು ಸೇರಿಸಿದ್ದಾಳೆ. ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು.

ಇದನ್ನೂ ಓದಿ: ತಮಿಳುನಾಡಲ್ಲಿ ದೇವರ ರಾಜಕೀಯ; ರಾಮನ ಬದಲಿಗೆ ಭಗವಾನ್ ಮುರುಗನ್; ಬಿಜೆಪಿಗೆ ಸಿಎಂ ಸ್ಟಾಲಿನ್​ ಕೌಂಟರ್​

ಕಳ್ಳ ಅದಾಗಲೇ ಮಾರು ದೂರ ಓಡಿ ಹೋಗಿಬಿಟ್ಟಿದ್ದ. ದಂಪತಿಗಳು ಹೇಳವು ಪ್ರಕಾರ, ಬ್ಯಾಗ್​ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆಗಳು, ಬ್ಯಾಂಕ್ ದಾಖಲೆಗಳು ಸೇರಿದಂತೆ ಮೊಬೈಲ್​ಗಳು ಕೂಡ ಇದ್ದವು ಅಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ವಡಾಪಾವ್​​ ತಿನ್ನಲು ಹೋಗಿ ಚಿನ್ನದ ಒಡವೆ ಕಳೆದುಕೊಂಡ ದಂಪತಿ; ಕಳ್ಳ ಕದ್ದಿದ್ದು ಹೀಗೆ!

https://newsfirstlive.com/wp-content/uploads/2024/08/PUNE-ROBBERY.jpg

Load More