newsfirstkannada.com

ಜಲಪಾತದ ನೀರಿಗೆ ಈಜಲು ಹಾರಿದ್ದ Gymer.. ನೋಡ್ ನೋಡ್ತಿದ್ದ ಹಾಗೆ ಕೊಚ್ಚಿಕೊಂಡು ಹೋದ ಯುವಕ

Share :

Published July 1, 2024 at 5:56pm

Update July 1, 2024 at 8:18pm

  ಜಿಮ್​ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿರುವಾಗ ಘಟನೆ

  ಈಜಲು ಜಲಪಾತದ ನೀರಿಗೆ ಹಾರಿದ್ದ ಯುವಕ ದಾರುಣ ಸಾವು

  ನೀರಿನ ರಭಸಕ್ಕೆ ನಿಲ್ಲಲು ಆಗದೇ ಜಲಪಾತದ ಆಳಕ್ಕೆ ಬಿದ್ದ

ಮುಂಬೈ: ಜಿಮ್​ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವಕ ಈಜಾಡಲೆಂದು ಜಲಪಾತದ ನೀರಿಗೆ ಹಾರಿ ಕೊಚ್ಚಿಕೊಂಡು ಹೋಗಿದ್ದಾನೆ. ಈ ಘಟನೆಯು ಮಹಾರಾಷ್ಟ್ರದ ಪುಣೆಯ ತಮ್ಹಿನಿ ಘಾಟ್‌ನ ವಾಟರ್​​ಫಾಲ್ಸ್​ನಲ್ಲಿ ನಡೆದಿದೆ.

ಇದನ್ನೂ ಓದಿ: ರಾತ್ರಿ ಅಂತ್ಯಸಂಸ್ಕಾರ ಮಾಡಿದ್ದ ಮಗುವಿನ ಮೃತದೇಹ.. ಬೆಳಗ್ಗೆ ಉಯ್ಯಾಲೆಯಲ್ಲಿ ಪ್ರತ್ಯಕ್ಷ..! ಗಾಬರಿಬಿದ್ದ ಜನ

ಪುಣೆಯ ಭೋಸಾರಿ ಪ್ರದೇಶದ ಪಿಂಪ್ರಿ ಚಿಂಚ್ವಾಡ್​ನ ನಿವಾಸಿ ಸ್ವಪ್ನಿಲ್​ ಧಾವ್ಡೆ ಸಾವನ್ನಪ್ಪಿದ ಯುವಕ. ತನ್ನ ಜೊತೆ ಜಿಮ್ ಮಾಡುವ 32 ಸ್ನೇಹಿತರೊಂದಿಗೆ ಯುವಕ ಪ್ರವಾಸಕ್ಕೆಂದು ಬಂದಿದ್ದನು. ಈ ವೇಳೆ ತಮ್ಹಿನಿ ಘಾಟ್‌ನ ಜಲಪಾತಕ್ಕೆ ಈಜಾಡಲೆಂದು ಜಂಪ್ ಮಾಡಿದ್ದಾನೆ. ಆದರೆ ನೀರಿನ ರಭಸಕ್ಕೆ ಜೋರಾಗಿದ್ದರಿಂದ ಈಜಲು ಸಾಧ್ಯವಾಗದೆ ಹಾಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರೋಹಿತ್ ಶರ್ಮಾ ಟೀಮ್​ ಬಗ್ಗೆ KL ರಾಹುಲ್ ಏನಂದ್ರು..? ವಿಶ್ವಕಪ್ ಗೆಲುವಿನ ಬಗ್ಗೆ ಕನ್ನಡಿಗನ ಮನದ ಮಾತುಗಳು

ಯುವಕ ಈಜಲೆಂದು ಜಲಪಾತದ ನೀರಿಗೆ ಜಂಪ್ ಮಾಡುತ್ತಿರುವ ದೃಶ್ಯ ಮೊಬೈಲ್​​ನಲ್ಲಿ ಸೆರೆ ಹಿಡಿಯಲಾಗಿದೆ. ಯುವಕನು ನೀರಿಗೆ ಜಿಗಿದು ಈಜಿ ದಡ ಸೇರಲು ಮುಂದಾಗುತ್ತಾನೆ. ಆದರೆ ನೀರಿನ ಹರಿಯುವ ರಭಸ ಜೋರಾಗಿದ್ದರಿಂದ ಕೊಚ್ಚಿಕೊಂಡು ಹೋಗಿದ್ದಾನೆ. ಯುವಕನ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದ್ದು ಇದುವರೆಗೂ ಪತ್ತೆಯಾಗಿಲ್ಲ ಎಂದು ರಕ್ಷಣ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಹುಡುಕಾಟ ಮುಂದುವರೆದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ನಟ ದರ್ಶನ್ ತಾಯಿ ಮೀನಾ, ಸಹೋದರ ದಿನಕರ ಜೈಲಿಗೆ ಭೇಟಿ.. ಮಗನ ಸಂಕಟ ನೋಡಿ ಅಮ್ಮ ಭಾವುಕ..

ಪುಣೆಯ ಲೋನಾವಾಲಾ ಪ್ರದೇಶದ ಭೂಶಿ ಅಣೆಕಟ್ಟಿನ ಹಿನ್ನೀರಿನ ಸಮೀಪದ ಜಲಪಾತದಲ್ಲಿ ನಿನ್ನೆಯಷ್ಟೇ ಪಿಕ್ನಿಕ್‌ಗೆ ಬಂದಿದ್ದ ಒಂದೇ ಕುಟುಂಬದ ಮಹಿಳೆ ಹಾಗೂ ನಾಲ್ವರು ಮಕ್ಕಳು ಜಲಪಾತಕ್ಕೆ ಬಿದ್ದು ಸಾವನ್ನಪ್ಪಿದ್ದರು. ಇದು ಆಗಿರುವ ಬೆನ್ನಲ್ಲೇ ಅಂತಹದ್ದೆ ಒಂದು ಘಟನೆ ಮತ್ತೆ ಮಹಾರಾಷ್ಟ್ರದಲ್ಲಿ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಲಪಾತದ ನೀರಿಗೆ ಈಜಲು ಹಾರಿದ್ದ Gymer.. ನೋಡ್ ನೋಡ್ತಿದ್ದ ಹಾಗೆ ಕೊಚ್ಚಿಕೊಂಡು ಹೋದ ಯುವಕ

https://newsfirstlive.com/wp-content/uploads/2024/07/MH_WATERFALL.jpg

Load More