newsfirstkannada.com

ಜೋಗದ ತುತ್ತ ತುದಿಯಲ್ಲಿ ಅಪ್ಪು ಸಖತ್​​ ಪುಶ್ ಅಪ್ಸ್; ಇಲ್ಲಿದೆ ಅಪರೂಪದ ವಿಡಿಯೋ!

Share :

13-07-2023

    ಪುನೀತ್​ ರಾಜ್​ಕುಮಾರ್​ ಅವಿಸ್ಮರಣೀಯ ವಿಡಿಯೋ ವೈರಲ್​​

    ಅಪ್ಪು ವಿಡಿಯೋ ಶೇರ್​​ ಮಾಡಿ ಫ್ಯಾನ್ಸ್​ಗೆ ಸರ್ಪ್ರೈಸ್ ಕೊಟ್ಟ ಸಿಂಗರ್​​​

    ಜೋಗ ಜಲಪಾತದ ತುತ್ತ ತುದಿಯಲ್ಲಿ ಪುಶ್ ಅಪ್‌ ಹೊಡೆದ ಅಪ್ಪು

ನಟ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಅದುವೇ ಜೋಗ ಜಲಪಾತದ ತುತ್ತ ತುದಿಯಲ್ಲಿ ಪುಶ್ ಅಪ್‌ ಹೊಡೆದಿರೋ ವಿಡಿಯೋ. ಇನ್ನು ಅಪ್ಪು ಅವರ ಅಪರೂಪದ, ಅವಿಸ್ಮರಣೀಯ ವಿಡಿಯೋವನ್ನು ಗಾಯಕ ನವೀನ್ ಸಜ್ಜು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇದೀಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಪರೂಪದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ನಟ ಪುನೀತ್ ರಾಜ್‌ಕುಮಾರ್ ಅವರು ಅಕ್ಟೋಬರ್​ 29, 2021ರಂದು ನಿಧನ ಹೊಂದಿದ್ದರು. ನೆಚ್ಚಿನ ನಟನನ್ನು ಕಳೆದುಕೊಂಡ ನೋವಿನಲ್ಲಿ ಅದೇಷ್ಟೋ ಜನರು ಇನ್ನು ದುಖಃದಲ್ಲಿದ್ದಾರೆ. ಮರೆಯಲಾಗದ ಮಾಣಿಕ್ಯ ನಗುವಿನ ಒಡೆಯ ಅಪ್ಪು ಆಗಿದ್ದಾರೆ.

ಇನ್ನು, ನಟ ಪುನೀತ್​​ ರಾಜ್​ಕುಮಾರ್​ ಅವರ ತುಂಬಾ ಹಳೆ ವರ್ಕೌಟ್ ವಿಡಿಯೋ ಇದಾಗಿದೆ. ಆದರೆ ಈ ವಿಡಿಯೋವನ್ನು ನೋಡುತ್ತಿದ್ದರೆ ಅಪ್ಪು ಅವರು ಇನ್ನು ಇದ್ದಾರೆ ಅನ್ನೋ ಭಾವನೆ ಮೂಡುತ್ತದೆ. ಜೋಗದ ತುತ್ತ ತುದಿಯಲ್ಲಿ ಅಪ್ಪು ಪುಶ್ ಅಪ್‌ ಮಾಡಿದ್ದಾರೆ. ಒಂದಲ್ಲ ಎರಡಲ್ಲ ಬರೊಬ್ಬರಿ 50 ಪುಶ್ ಅಪ್‌ ಹೊಡೆದಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರಿಗೆ ವರ್ಕೌಟ್ ಬಗ್ಗೆ ತುಂಬಾನೆ ಪ್ರೀತಿ ಇತ್ತು. ಚಿಕ್ಕ ಹುಡುಗನಾಗಿದ್ದಾಗಲೂ ಈ ಕುರಿತು ಸಿಕ್ಕಾಪಟ್ಟೆ ಕ್ರೇಜ್ ಬೆಳಸಿಕೊಂಡಿದ್ದರು. ಅಪ್ಪು ಅವರು ಬಾಡಿ ವರ್ಕೌಟ್‌ಗಳನ್ನ ಕೂಡ ಸುಲಭವಾಗಿ ಮಾಡುತ್ತಿದ್ದರು. ಅದರಂತೆ ಗೆಳೆಯರ ಜೊತೆಗೆ ಜೋಗದ ಪೀಕ್ ಪಾಯಿಂಟ್‌ಗೂ ಹೋಗಿದ್ದರು. ಇನ್ನು, ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು ‘ನಮ್ಮ ಅಪ್ಪು ಬಾಸ್​’, ಪವರ್​​​ ಸ್ಟಾರ್​​ ಸ್ಟ್ರಾಂಗ್ ವರ್ಕೌಟ್ ಎಂದು ಬಗೆ ಬಗೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಜೋಗದ ತುತ್ತ ತುದಿಯಲ್ಲಿ ಅಪ್ಪು ಸಖತ್​​ ಪುಶ್ ಅಪ್ಸ್; ಇಲ್ಲಿದೆ ಅಪರೂಪದ ವಿಡಿಯೋ!

https://newsfirstlive.com/wp-content/uploads/2023/07/punith-raj-kumar-1.jpg

Load More