newsfirstkannada.com

Video: ಜಸ್ಟ್​​ ಮಿಸ್​..! ನೋಡ ನೋಡುತ್ತಿದ್ದಂತೆಯೇ ನಿಯಂತ್ರಣ ತಪ್ಪಿದ ಸಿಎಂ ಪ್ರಯಾಣಿಸುತ್ತಿದ್ದ ಬೋಟ್​

Share :

15-07-2023

  ಪ್ರವಾಹ ಪೀಡಿತ ಗ್ರಾಮಗಳಿಗೆ ಸಿಎಂ ಭಗವಂತ್​ ಮಾನ್​ ಭೇಟಿ

  ಬೋಟ್​ ಏರಿ ಪ್ರವಾಹ ಪೀಡಿತ ಗ್ರಾಮಗಳನ್ನು ನೋಡಲು ಹೊರಟ ಪಂಜಾಬ್ ಸಿಎಂ

  ಈ ವೇಳೆ ನೀರಿನಲ್ಲಿ ಅತ್ತಿಂದಿತ್ತ ತೇಲಿದ ಬೋಟ್​; ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಮಳೆಯಿಂದಾಗಿ ಹಲವೆಡೆ ಪ್ರವಾಹ ಏರ್ಪಟ್ಟಿದೆ. ಪಂಜಾಬ್​ ಜಲಂದರ್​ ಜಿಲ್ಲೆಯಲ್ಲಿ ಕೆಲವು ಗ್ರಾಮಗಳಿಗೆ ನೀರು ನುಗ್ಗಿದೆ. ಈ ಸಮಯದಲ್ಲಿ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಲು ಸಿಎಂ ಭಗವಂತ್​ ಮಾನ್​​ ಮುಂದಾಗಿದ್ದರು. ಆದರೆ ಈ ವೇಳೆ ಅವರು ಪ್ರಯಾಣಿಸುತ್ತಿದ್ದ ಬೋಟ್​ ನಿಯಂತ್ರಣ ಕಳೆದುಕೊಂಡಿದ್ದು, ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಸಿಎಂ ಭಗವಂತ್​ ಮಾನ್ ಪ್ರವಾಹ ಪೀಡಿತ ಗಿಡರಪಿಂಡಿ ಗ್ರಾಮಕ್ಕೆ ಭೇಟಿ ನೀಡಲು ಮುಂದಾಗಿದ್ದರು. ಈ ವೇಳೆ ಬೋಟ್​ ಮೂಲಕ ಪ್ರಯಾಣ ಬೆಳೆಸಬೇಕಾಗಿತ್ತು. ಹಾಗಾಗಿ ಬೋಟ್​ ಹತ್ತಿದ್ದರು. ಆದರೆ ಸಿಎಂ ಸೇರಿದಂತೆ ಜನರು ತುಂಬಿದ್ದ ಬೋಟ್​ ನೀರಿನಲ್ಲಿ ಚಲಿಸುತ್ತಿದ್ದಂತೆಯೇ ಅತ್ತಿಂದಿತ್ತ ತೇಲಿದೆ. ಈ ವೇಳೆ ಅದರಲ್ಲಿದ್ದವರು ಗಾಬರಿಗೆ ಒಳಗಾಗಿದ್ದಾರೆ.

ಇನ್ನು ಸಿಎಂ ತೆರಳುತ್ತಿದ್ದ ಬೋಟ್​ ಅತ್ತಿಂದಿತ್ತ ತೇಲಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲೂ ದೃಶ್ಯ ವೈರಲ್​ ಆಗಿದೆ. ಬೋಟ್​ ಅತ್ತಿಂದಿತ್ತ ತೇಲಾಡಿದಂತೆ ನಾವಿಕ ನಿಯಂತ್ರಣಕ್ಕೆ ತಂದಿದ್ದಾನೆ. ಹೀಗಾಗಿ ಭಾರೀ ಅನಾಹುತವೊಂದು ಕೈತಪ್ಪಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಜಸ್ಟ್​​ ಮಿಸ್​..! ನೋಡ ನೋಡುತ್ತಿದ್ದಂತೆಯೇ ನಿಯಂತ್ರಣ ತಪ್ಪಿದ ಸಿಎಂ ಪ್ರಯಾಣಿಸುತ್ತಿದ್ದ ಬೋಟ್​

https://newsfirstlive.com/wp-content/uploads/2023/07/Boat.jpg

Load More