ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ದಿನಗಣನೆ ಆರಂಭ
ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿ ಮಾಡಲು ಭರ್ಜರಿ ಪ್ಲ್ಯಾನ್
ಪಂಜಾಬ್ ಕಿಂಗ್ಸ್ ತಂಡಕ್ಕೆ ರಿಕ್ಕಿ ಪಾಂಟಿಂಗ್ ಹೊಸ ಮುಖ್ಯ ಕೋಚ್!
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ದಿನಗಣನೆ ಆರಂಭವಾಗಿದೆ. ಮೆಗಾ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿ ಮಾಡಲು ಆರ್ಸಿಬಿ ತಂಡಗಳು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿವೆ. ಇದರ ಮಧ್ಯೆ ಪಂಜಾಬ್ ಕಿಂಗ್ಸ್ ತಂಡಕ್ಕೆ ರಿಕ್ಕಿ ಪಾಂಟಿಂಗ್ ಹೊಸ ಮುಖ್ಯ ಕೋಚ್ ಆಗಿ ಬಂದಿದ್ದಾರೆ.
ರಿಕ್ಕಿ ಪಾಂಟಿಂಗ್ ಮುಖ್ಯ ಕೋಚ್ ಆಗುತ್ತಿದ್ದಂತೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ಮೇಜರ್ ಸರ್ಜರಿ ಆಗಿದೆ. ತಂಡದ ನಿರ್ದೇಶಕ ಸಂಜಯ್ ಬಂಗಾರ್ ಮತ್ತು ಮುಖ್ಯ ಕೋಚ್ ಆಗಿದ್ದ ಟ್ರೆವರ್ ಬೇಲಿಸ್ ಇಬ್ಬರಿಗೂ ಕೊಕ್ ನೀಡಲಾಗಿದೆ. ಕಳೆದ ಸೀಸನ್ನಲ್ಲಿ ಪಂಜಾಬ್ ಕಳಪೆ ಪ್ರದರ್ಶನ ನೀಡಿದ್ದ ಕಾರಣಕ್ಕಾಗಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬಂಗಾರ್‌ಗೆ ಗೇಟ್ ಪಾಸ್
2025ರ ಐಪಿಎಲ್‌ಗಾಗಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಇದರ ಭಾಗವಾಗಿ ಸಂಜಯ್ ಬಂಗಾರ್‌ಗೆ ಗೇಟ್ಪಾಸ್ ಕೊಡಲಾಗಿದೆ. ಸಂಜಯ್ ಬಂಗಾರ್ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಿರ್ದೇಶಕರಾಗಿದ್ದರು. ಹಾಗೆಯೇ ಅನಿಲ್ ಕುಂಬ್ಳೆ ಅವರಿಂದ ತೆರವಾದ ಮುಖ್ಯ ಕೋಚ್ ಸ್ಥಾನಕ್ಕೆ ಬೇಲಿಸ್ ಅವರನ್ನು ನೇಮಿಸಲಾಗಿತ್ತು. ಈಗ ಇಬ್ಬರಿಗೂ ಗೇಟ್ಪಾಸ್ ಕೊಡಲಾಗಿದೆ.
ಆರ್ಸಿಬಿ ತಂಡದ ಕೋಚ್ ಆಗಿದ್ದ ಬಂಗಾರ್
ಇದಕ್ಕೂ ಮುನ್ನ ಸಂಜಯ್ ಬಂಗಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಗಿದ್ದರು. 2023ರ ಐಪಿಎಲ್ ಸೀಸನ್ ನಂತರ ಸಂಜಯ್ ಬಂಗಾರ್‌ಗೆ ಆರ್ಸಿಬಿಯಿಂದ ಕೊಕ್ ನೀಡಲಾಗಿತ್ತು.
ಇದನ್ನೂ ಓದಿ: ‘ಭಾರತದಲ್ಲಿ ಬದುಕು ಚೆಂದ‘ ನಮ್ಮ ದೇಶವನ್ನು ಹಾಡಿ ಹೊಗಳಿದ್ದೇಕೆ ಅಮೆರಿಕಾದ ಈ ಮಹಿಳೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ