newsfirstkannada.com

ಮದುವೆ ಬಂಧನದಲ್ಲಿ ಸಿಕ್ಕಾಕೊಂಡ ಅಕ್ಕ-ತಂಗಿಯ ಪುಣ್ಯವತಿ; ಟ್ವಿಸ್ಟ್ ಮೇಲೆ ಟ್ವಿಸ್ಟ್​ ಪಡೆದುಕೊಂಡ ಲಕ್ಷಣ ಧಾರಾವಾಹಿ

Share :

02-07-2023

    ಲಕ್ಷಣ ಧಾರಾವಹಿಯಲ್ಲಿ ಅತ್ತೆ ಹಾಗೂ ಸೋಸೆಗೆ​ ಟ್ವಿಸ್ಟ್​ ಮೇಲೆ ಟ್ವಿಸ್ಟ್​​

    ಮದುವೆ ಬಂಧನದಲ್ಲಿ ಸಿಕ್ಕಿಹಾಕಿಕೊಂಡಿರುವ ಅಕ್ಕ-ತಂಗಿ ಕತೆ ಪುಣ್ಯವತಿ

    ಸಂತೋಷದಲ್ಲಿದ್ದ ಶ್ವೇತಾಳಿಗೆ ಅರೆಸ್ಟ್​​ ಮಾಡಿಸಿ ಶಾಕ್ ಕೊಟ್ಟ ಮೌರ್ಯ!

ವಿಭಿನ್ನ ಕಂಟೆಂಟ್​ ಮೂಲಕ ವೀಕ್ಷಕರನ್ನ ಹಿಡಿದಿಟ್ಟುಕೊಂಡಿರುವ ಕಲರ್ಸ್​ ಕನ್ನಡ ಮನರಂಜನೆಯ ಡೋಸ್​ನ ಡಬಲ್​ ಮಾಡುತ್ತಿದೆ. ಲೀಡ್​ನಲ್ಲಿರೋ ಎರಡು ಪ್ರಮುಖ ಧಾರಾವಾಹಿಗಳ ಕತೆಯಲ್ಲಿ ರೋಚಕ ತಿರುವು ಎದುರಾಗುತ್ತಿದೆ. ಇದರಲ್ಲಿ ವಿಶೇಷ ಅಂದ್ರೆ ಈ ಎರಡು ಕತೆಗಳಲ್ಲಿ ಅಕ್ಕ-ತಂಗಿನೇ ಪ್ರಧಾನ.

ಹೌದು, ಬಣ್ಣ-ಗುಣದ ನಡುವಿನ ವ್ಯತ್ಯಾಸವನ್ನ ತೋರಿಸುತ್ತಿರುವ ಲಕ್ಷಣ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಶಕುಂತಲಾದೇವಿಯಿಂದ ಆಸ್ತಿ ಬರೆಸಿಕೊಂಡು ಸಂತೋಷದ ಗುಂಗಿನಲ್ಲಿದ್ದ ಶ್ವೇತಾಳನ್ನ ಅರೆಸ್ಟ್​​ ಮಾಡಿಸಿ ಶಾಕ್​ ನೀಡಿದ್ದಾನೆ ಮೌರ್ಯ. ಶ್ವೇತಾ ಈಗ ಪೆಟ್ಟುತ್ತಿಂದ ಸರ್ಪದಂತೆ ಬುಸುಗುಟ್ಟುತ್ತಿದ್ದಾಳೆ.

ಇನ್ನು, ಮದುವೆ ಬಂಧನದಲ್ಲಿ ಸಿಕ್ಕಿಹಾಕಿಕೊಂಡಿರುವ ಅಕ್ಕ-ತಂಗಿ ಕತೆ ಪುಣ್ಯವತಿ. ಸದ್ಯ ಮದುವೆ ಗುಟ್ಟು ಅಮ್ಮಾಜಿ ಮುಂದೆ ರಟ್ಟಾಗಿದೆ. ನಂದನ್​ಗೆ ಪದ್ಮಿನಿಯಿಂದ ದೂರ ಉಳಿಯಲು ಇಂಡೈರೆಕ್ಟ್​ ಆಗಿ ಹೇಳಿತಿದ್ದಾರೆ ಅಮ್ಮಾಜಿ. ಸದ್ಯ ಪೂರ್ವಿ ಮನೆ ಬಿಟ್ಟು ಹೋಗಿದ್ದು, ಎಲ್ಲರಲ್ಲೂ ಗೊಂದಲ ಸೃಷ್ಟಿಸಿದೆ. ಇದರ ಜೊತೆಗೆ ಶೂಟಿಂಗ್​ ಕೆಲಸಗಳು ಭರದಿಂದ ನಡೆಯುತ್ತಿವೆ.

ಸದ್ಯದಲ್ಲೇ ಅಮ್ಮಾಜಿ ಮದುವೆ ಕಂಗಂಟನ್ನ ಬಿಚ್ಚಲಿದ್ದಾರೆ. ಪೂರ್ವಿಯನ್ನ ಸೊಸೆ ಅಂತಾ ಸ್ವೀಕರಿಸಲು ತಯಾರಿ ಮಾಡಿಕೊಳ್ತಿದ್ದಾರೆ. ಒಟ್ಟಿನಲ್ಲಿ ಲಕ್ಷಣದಲ್ಲಿ ಶ್ವೇತಾ ಮುಖವಾಡ ಕಳಚಲಿದ್ದು, ಇನ್ನು ನಿಜವಾದ ಪುಣ್ಯವತಿ ಯಾರು ಎಂಬುವುದು ತಿಳಿಯಲಿದೆ. ಮನರಂಜನೆಯ ರೋಚಕ ಅನುಭವ ಪಡೆಯಲು ಎರಡು ಸೀರಿಯಲ್​ ಫಾಲೋ ಮಾಡಿ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಮದುವೆ ಬಂಧನದಲ್ಲಿ ಸಿಕ್ಕಾಕೊಂಡ ಅಕ್ಕ-ತಂಗಿಯ ಪುಣ್ಯವತಿ; ಟ್ವಿಸ್ಟ್ ಮೇಲೆ ಟ್ವಿಸ್ಟ್​ ಪಡೆದುಕೊಂಡ ಲಕ್ಷಣ ಧಾರಾವಾಹಿ

https://newsfirstlive.com/wp-content/uploads/2023/07/colors-kannada-3.jpg

Load More