Advertisment

ಅಬ್ಬಾ.. ಒಂದಲ್ಲ, ಎರಡಲ್ಲ, 11 ಕೋಟಿಗೆ ಹರಾಜಾದ ಎಮ್ಮೆ.. ಅಂತಹದ್ದೇನಿದೆ ಗುರು ಇದರಲ್ಲಿ ವಿಶೇಷ

author-image
AS Harshith
Updated On
ಅಬ್ಬಾ.. ಒಂದಲ್ಲ, ಎರಡಲ್ಲ, 11 ಕೋಟಿಗೆ ಹರಾಜಾದ ಎಮ್ಮೆ.. ಅಂತಹದ್ದೇನಿದೆ ಗುರು ಇದರಲ್ಲಿ ವಿಶೇಷ
Advertisment
  • 10 ಲೀಟರ್​ ಹಾಲು ಕೊಡುತ್ತೆ ಅನ್ಮೋಲ್​ ಎಮ್ಮೆ
  • ಬಿಸ್ಲೆರಿ ನೀರು ಕುಡಿಯುವ ಕುದುರೆ ಕೂಡ ದುಬಾರಿ ಬೆಲೆಗೆ ಸೇಲ್
  • ಪುಷ್ಕರ್​ ಅಂತರಾಷ್ಟ್ರೀಯ ಜಾತ್ರೆಯಲ್ಲಿ ಜನವೋ ಜನ

ರಾಜಸ್ಥಾನದಲ್ಲಿ ಎಮ್ಮೆ ಒಂದು 11 ಕೋಟಿಗೆ ಹರಾಜ್​ ಆಗಿದೆ. ಪುಷ್ಕರ್​ ಎಂಬ ಅಂತರಾಷ್ಟ್ರೀಯ ಜಾತ್ರೆಯಲ್ಲಿ ಅನ್ಮೋಲ್​​ ಎಂಬ ಹೆಸರಿನ ಎಮ್ಮೆಯನ್ನ 11 ಕೋಟಿಗೆ ಖರೀದಿಸಲಾಗಿದೆ.

Advertisment

10 ಲೀಟರ್​ ಹಾಲು ಕೊಡುತ್ತೆ

150 ಕರುಗಳಿಗೆ ಜನ್ಮ ನೀಡುವ ಸಾಮರ್ಥ್ಯ ಹೊಂದಿರುವ ವಿಶೇಷ ಎಮ್ಮೆ ಒಟ್ಟು 13 ಅಡಿ ಉದ್ದ ಹಾಗೂ 5ವರೆ ಅಡಿ ಎತ್ತರವನ್ನ ಹೊಂದಿದೆ. ಜಾತ್ರೆಯಲ್ಲಿ ಹರಾಜ್​ ಮಾಡಲೆಂದೆ ಈ ಎಮ್ಮೆಯನ್ನ ವಿಶೇಷ ರೀತಿಯಲ್ಲಿ ಪಾಲನೆ-ಪೋಷನೆ ಮಾಡಲಾಗುತ್ತದೆ.ಈ ಎಮ್ಮೆಯ ಆಹಾರ ಪದ್ಧತಿ ವಿಶೇಷವಾಗಿದ್ದು, ಪ್ರತಿ ದಿನ 10 ಲೀಟರ್​ ಹಾಲು ಹಾಗೂ ವಿವಿಧ ರೀತಿಯ ಹಣ್ಣುಗಳನ್ನ ಸೇವಿಸುತ್ತದೆ.

1 ಕೋಟಿಯ ಬಹದ್ದೂರ್

ಇನ್ನು ಈ ಜಾತ್ರೆಯಲ್ಲಿ ಅನ್ಮೋಲ್ ಜೊತೆಗೆ ಬಹದ್ದೂರ್ ಎಂಬ ಎಮ್ಮೆ ಕೂಡ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಬಹದ್ದೂರ್ ಎಮ್ಮೆ 1 ಕೋಟಿಗೆ ಹರಾಜಾಗಿದೆ. ಇದು ಕೂಡ 10 ಲೀಟರ್​ ಹಾಲು ಕೊಡುತ್ತದೆ.

ಬಿಸ್ಲೆರಿ ನೀರು ಕುಡಿಯುವ ಕುದುರೆ

ಇದಲ್ಲದೆ, ಫರ್ಜಂದ್​​ ಎಂಬ 7 ಕೋಟಿ ಬೆಲೆಯ ಕುದುರೆಯನ್ನು ಕಂಡು ಅನೇಕರು ಅಚ್ಚರಿಗೊಂಡಿದ್ದಾರೆ. ಇದರ ವಿಶೇಷವೆಂದರೆ ಬಿಸ್ಲೆರಿ ನೀರು ಕುಡಿಯುವ ಕುದುರೆಯಾಗಿದೆ. ಇನ್ನು ಈ ಜಾತ್ರೆಯಲ್ಲಿ ಭಾಗವಹಿಸುವ ಎಮ್ಮೆ, ಕುದುರೆಗಳನ್ನ ಕಣ್ತುಂಬಿಕೊಳ್ಳಲು ವಿದೇಶಿ ಪ್ರವಾಸಿಗರು ಕೂಡ ಬರುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment