newsfirstkannada.com

ಖ್ಯಾತ ನಿರ್ಮಾಪಕನಿಗೆ ಬಡ್ಡಿ ದಂಧೆಕೋರರ ಕಿರುಕುಳ; 13 ಕೋಟಿ ನೀಡುವಂತೆ ಬೆದರಿಕೆ!

Share :

Published June 28, 2024 at 5:14pm

  ಅವನೇ ಶ್ರೀಮನ್ನಾರಾಯಣ, ಅವತಾರ ಪುರುಷ ಸಿನಿಮಾ ನಿರ್ಮಿಸಿದ್ದ ನಿರ್ಮಾಪಕ

  ಸಿಲಿಕಾನ್​ ಸಿಟಿಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಮೀಟರ್ ಬಡ್ಡಿ, ಚಕ್ರ ಬಡ್ಡಿ ದಂಧೆ

  ಹತ್ತಕ್ಕೂ ಹೆಚ್ಚು ಸಿನಿಮಾ ನಿರ್ಮಿಸಿ ಪ್ರಶಸ್ತಿ ಪಡೆದುಕೊಂಡಿದ್ದ ನಿರ್ಮಾಪಕ ಪುಷ್ಕರ್

ಬೆಂಗಳೂರು: ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಸ್ಯಾಂಡಲ್​ವುಡ್​ ನಿರ್ಮಾಪಕರೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಬೆಳಕಿಗೆ ಬಂದಿದೆ. ಹತ್ತಕ್ಕೂ ಹೆಚ್ಚು ಚಿತ್ರ ನಿರ್ಮಿಸಿ ಪ್ರಶಸ್ತಿ ಪಡೆದುಕೊಂಡಿರುವ ನಿರ್ಮಾಪಕರಿಗೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ದೇವರ ದರ್ಶನ ಬಳಿಕ ಸೆಲ್ಫಿ ಫೋಟೋ ಹಾಕಿದ್ದ.. ಕರುಣಾಜನಕ ಕತೆ ಹೇಳ್ತಿದೆ 13 ಜನರ ಬಲಿ ಪಡೆದ ಅಪಘಾತ

ಹೌದು, ಸ್ಯಾಂಡಲ್​ವುಡ್​ ನಟ ರಕ್ಷಿತ್​ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ಅವತಾರ ಪುರುಷ ಹಾಗೂ ಅವತಾರ ಪುರುಷ ಭಾಗ 2 ಸಿನಿಮಾಗಳನ್ನು ನಿರ್ಮಿಸಿದ್ದ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಅವರಿಗೆ ಮೀಟರ್ ಬಡ್ಡಿ ದಂಧೆಕೋರರ ಕಾಟ ಶುರುವಾಗಿದೆ. ಆದರ್ಶ್, ಹರ್ಷ, ಶಿವು ಹಾಗೂ ಹರ್ಷ ಡಿ ಎಂಬುವರಿಂದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ ಸಾಲ ಪಡೆದುಕೊಂಡಿದ್ದರಂತೆ. ನಿರ್ಮಾಪಕ ಪುಷ್ಕರ್ ಅವರು ಕೆಲ ಸಿನಿಮಾಗಳ ನಿರ್ಮಾಣಕ್ಕೆ ಐದು ಕೋಟಿ ಹಣ ಸಾಲ ಪಡೆದುಕೊಂಡಿದ್ದರು.

ಆದರೆ ಆ ಮೂರು ಚಿತ್ರಗಳು ಸೋಲು ಅನುಭವಿಸಿತ್ತು. ಈ ಹಿನ್ನಲೆಯಲ್ಲಿ ಐದು ಕೋಟಿಗೆ ಇದುವರೆಗೆ ಬಡ್ಡಿ ಸೇರಿ 11 ಕೋಟಿ ಕಟ್ಟಿದ್ದಾರಂತೆ. ಆದರೂ ಇನ್ನೂ ಹದಿಮೂರು ಕೋಟಿ ಕಟ್ಟಿ ಎಂದು ದುಂಬಾಲು ಬಿದಿದ್ದಾರಂತೆ. ಜೊತೆಗೆ ದುಡ್ಡನ್ನು ಕಟ್ಟದಿದ್ದಾಗ ಹುಡುಗರನ್ನ ಕರೆಸಿ ಬೆದರಿಕೆ ಹಾಕಿದ್ದಾರಂತೆ. ಹೀಗಾಗಿ ನಿರ್ಮಾಪಕ ಪುಷ್ಕರ್ ಅವರು ಸಹಕಾರ ಸಂಘದ ಉಪ ನಿಬಂಧಕರಿಗೆ ದೂರು ನೀಡಿದ್ದಾರಂತೆ. ಈ ದೂರಿನ ಅನ್ವಯ ಉಪ ನಿಬಂಧಕರಾದ ಕಿಶೋರ್ ಕುಮಾರ್ ಅವರಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಸಿಸಿಬಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಮನಿ ಲ್ಯಾಂಡ್ರಿಂಗ್ ಸೆಕ್ಷನ್​ನಲ್ಲಿ ಎಫ್​ಐಆರ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖ್ಯಾತ ನಿರ್ಮಾಪಕನಿಗೆ ಬಡ್ಡಿ ದಂಧೆಕೋರರ ಕಿರುಕುಳ; 13 ಕೋಟಿ ನೀಡುವಂತೆ ಬೆದರಿಕೆ!

https://newsfirstlive.com/wp-content/uploads/2024/06/Pushkara-Mallikarjunaiah2.jpg

Load More