newsfirstkannada.com

1000 ಕೋಟಿ ಮೇಲೆ ಪುಷ್ಪರಾಜ್ ಕಣ್ಣು: ಸಖತ್ ಫಾಸ್ಟ್​ ಆಗಿ ರೆಡಿಯಾಗ್ತಿದೆ ಪುಷ್ಪ ಸೀಕ್ವೆಲ್ ಸೀನ್ಸ್‌

Share :

01-07-2023

  ದಿನೇ ದಿನೇ ಜಾಸ್ತಿಯಾಗ್ತಿದೆ ಪುಷ್ಪರಾಜ್​ ಹವಾ ಮತ್ತು ಹಾವಳಿ

  ಸ್ವರ್ಣಮುಖಿ ನದಿಯಲ್ಲಿ ಶೂಟ್​ ಆಗಲಿದೆ ಪುಷ್ಪ-2 ಮಸ್ತ್ ಆ್ಯಕ್ಷನ್!

  ಪುಷ್ಪ​​​ ಡ್ಯಾನ್ಸ್​ಗಾಗಿ ಪಾಪ್ಯುಲರ್‌ ಕೋರಿಯೋಗ್ರಾಫರ್‌ ಡಬಲ್ ವರ್ಕ್

ಪುಷ್ಪ 2 ನಿಜವಾಗಲೂ ದೊಡ್ಡದಾಗಿ ರೆಡಿ ಆಗ್ತಿದ್ಯಾ? ಕೆಜಿಎಫ್, ತ್ರಿಬಲ್ ಆರ್​ನ ಮೀರಿಸೋ ಲೆವೆಲ್​ಗೆ ಇರುತ್ತಾ ಅನ್ನೋ ಕುತೂಹಲ ಪ್ರತಿಯೊಬ್ಬ ಸಿನಿಮಾ ಪ್ರೇಮಿಗೂ ಕಾಡುತ್ತಿದೆ. ಬಹುಶಃ ಪುಷ್ಪರಾಜ್​ನ ಹಂಟಿಂಗ್​ ಅಂಡ್ ಶೂಟಿಂಗ್​ ಕಥೆ ಕೇಳಿದ್ರೆ ನಿಜಕ್ಕೂ ನೀವು ಸಹ ಬೆರಗಾಗ್ತೀರಾ. ಏನಪ್ಪಾ ಇವ್ರು ಇಷ್ಟೆಲ್ಲಾ ರಿಸ್ಕ್​ ತೆಗೊಂಡು ಕೆಲಸ ಮಾಡ್ತಿದ್ದಾರೆ ಅಂತ ಸರ್ಪ್ರೈಸ್​ ಆಗ್ತಿರಾ. ವೇರ್ ಈಸ್ ಪುಷ್ಪಾ? ಟೀಸರ್ ನೋಡಿದ್ಮೇಲೆ ಈ ಸಿನಿಮಾದ ಮೇಲಿದ್ದ ನಿರೀಕ್ಷೆ ಡಬಲ್ ಆಗಿದೆ. ಪುಷ್ಪ-1ಗಿಂತ ಪುಷ್ಪ-2ಗಾಗಿ ಕಾಯ್ತಿರೋರ ಸಂಖ್ಯೆಯೂ ದುಪ್ಪಟ್ಟಾಗ್ತಿದೆ. ಯಾಕಂದ್ರೆ, ದಿನೇ ದಿನೇ ಪುಷ್ಪರಾಜ್​ ಹವಾ ಮತ್ತು ಹಾವಳಿ ಅಷ್ಟು ಜಾಸ್ತಿಯಾಗ್ತಿದೆ.

2021 ಡಿಸೆಂಬರ್ 17ರಂದು ತೆರೆಕಂಡಿದ್ದ ಪುಷ್ಪ ಪ್ಯಾನ್ ಇಂಡಿಯಾ ಸೂಪರ್​ ಹಿಟ್ ಬಾರಿಸಿತ್ತು. ಹಿಂದಿಯೊಂದರಲ್ಲೇ 100 ಕೋಟಿ ಗಳಿಸಿ ದಾಖಲೆ ಬರೆದಿತ್ತು. ಪುಷ್ಟ ಮಾಡುವಾಗ ಈ ಸಿನಿಮಾ ಓವರ್​ ಆಲ್ ಹಿಟ್​ ಆಗುತ್ತೆ, ಆದ್ರೆ ಸೌತ್​ನಲ್ಲಿ ಬ್ಲಾಕ್ ಬಸ್ಟರ್ ಆಗಬಹುದು, ಬಟ್ ನಾರ್ತ್ ಇಂಡಿಯಾದಲ್ಲಿ ಆವರೇಜ್ ಎನಿಸಿಕೊಳ್ಳುತ್ತೆ ಅನ್ನೋ ಲೆಕ್ಕಾಚಾರವಿತ್ತು. ಆದ್ರೆ ಸುಕುಮಾರ್ ಅಂಡ್ ಟೀಮ್ ಲೆಕ್ಕಾಚಾರವನ್ನ ಉಲ್ಟಾ ಮಾಡಿದ ಪುಷ್ಪ ಸೌತ್​ಗಿಂತ ನಾರ್ತ್​ನಲ್ಲೇ ಸುನಾಮಿ ಸೃಷ್ಟಿಸಿತ್ತು. ಬಾಲಿವುಡ್ ಒಂದರಲ್ಲೇ ಹಂಡ್ರೆಡ್​ ಕ್ರೋರ್​ ಗಳಿಸಿದ ಮೊದಲ ಅಲ್ಲು ಅರ್ಜುನ್ ಸಿನಿಮಾ ಎಂಬ ರೆಕಾರ್ಡ್​ ಬರೆಯಿತು.

ಸಖತ್ ಫಾಸ್ಟ್​ ಆಗಿ ರೆಡಿಯಾಗ್ತಿದೆ ಪುಷ್ಪ ಸೀಕ್ವೆಲ್

ನಿಮಗೆಲ್ಲಾ ಗೊತ್ತಿರೋ ಹಾಗೇ, ಪುಷ್ಪ-2 ಶೂಟಿಂಗ್ ತುಂಬಾ ಫಾಸ್ಟ್​ ಆಗಿ ನಡೀತಿದೆ. ಈಗಾಗಲೇ ಅರ್ಧದಷ್ಟ ಶೂಟಿಂಗ್ ಕಂಪ್ಲೀಟ್ ಆಗಿದೆ ಅಂತಾ ಹೇಳಲಾಗ್ತಿದೆ. ಬಹುತೇಕ ಕಾಡಿನೊಳಗೆ ಮತ್ತು ಕಾಡಿನ ಅಂಚಿನಲ್ಲೇ ಚಿತ್ರೀಕರಣ ಸಾಗ್ತಿದೆಯಂತೆ. ಅಲ್ಲು ಅರ್ಜುನ್​, ಫಾಹದ್ ಫಾಸಿಲ್ ಇಬ್ಬರು ಕೆಲವು ಪ್ರಮುಖ ಭಾಗಗಳ ಶೂಟಿಂಗ್ ಸಹ ಮುಗಿಸಿದ್ದಾರಂತೆ. ಲೇಟೆಸ್ಟ್​ ಆಗಿ ರಶ್ಮಿಕಾ ಮಂದಣ್ಣ, ಅನುಸೂಯ ಭಾರಧ್ವಜ್​ ಸಹ ಪುಷ್ಟ ಟೀಮ್ ಸೇರಿಕೊಂಡಿದ್ದು, ಒಂದಿಷ್ಟು ಫೋಟೋಗಳನ್ನ ಶೇರ್ ಮಾಡಿದ್ದರು. ಈ ಹಿಂದೆ ಹೇಳಿದಂತೆ ಪುಷ್ಪ 2 ಸಿನಿಮಾದಲ್ಲಿ ಒಂದೊಂದು ಸೀನ್​ಗೂ ಸಿರೀಯಸ್​ ಆಗಿ ಕೆಲಸ ಮಾಡಲಾಗ್ತಿದೆ. ಅದರಲ್ಲೂ ಈ ಸಲ ಆ್ಯಕ್ಷನ್ ದೃಶ್ಯಗಳೇ ಜಾಸ್ತಿಯಿದ್ದು, ಪ್ರತಿಯೊಂದು ಫೈಟ್​ ಬಗ್ಗೆಯೂ ಹೆಚ್ಚಿನ ಕಾಳಜಿ ತೆಗೆದುಕೊಳ್ಳಲಾಗ್ತಿದೆ.

ರೋಚಕವಾಗಿ ಇರಲಿದೆ ಪುಷ್ಪ ಇಂಟರ್​ವಲ್ ಸೀನ್!
ಸ್ವರ್ಣಮುಖಿ ನದಿಯಲ್ಲಿ ಶೂಟ್​ ಆಗಲಿದೆ ಮಸ್ತ್ ಆ್ಯಕ್ಷನ್!

ಪುಷ್ಪ ಚಿತ್ರದಲ್ಲಿ ಇಂಟರ್​ವಲ್​​ ಸೀನ್ ತುಂಬಾನೇ ಇಂಪಾರ್ಟೆಂಟ್​ ಅಂತೆ. ಇಡೀ ಚಿತ್ರಕ್ಕೆ ಇದೊಂಥರಾ ಬೂಸ್ಟರ್​ ಎನ್ನಲಾಗ್ತಿದೆ. ಸೆಕೆಂಡ್​ ಹಾಫ್​ಗೆ ಬೆಸ್ಟ್​ ಇಂಟ್ರೊಡಕ್ಷನ್ ದೃಶ್ಯ ಇದಾಗಲಿದೆಯಂತೆ. ಹಾಗಾಗಿ, ಈ ಸೀನ್​ಗಾಗಿ ಸಿಕ್ಕಾಪಟ್ಟೆ ಪ್ಲಾನ್ ಮಾಡಿ ಕೆಲಸ ಮಾಡ್ತಿದೆಯಂತೆ ಸುಕುಮಾರ್ ಟೀಮ್. ಅದಕ್ಕಾಗಿ ಪುಷ್ಪ ಟೀಮ್ ಆಯ್ಕೆ ಮಾಡಿಕೊಂಡಿರೋದು ಸ್ವರ್ಣಮುಖಿ ನದಿ. ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದಾಗಿರುವ ತಿರುಪತಿ ಜಿಲ್ಲೆಯ ಪೂರ್ವ ಘಟ್ಟದಲ್ಲಿರುವ ಸ್ವರ್ಣಮುಖಿ ನದಿಯಲ್ಲಿ ಪುಷ್ಪ ಚಿತ್ರದ ಇಂಟರ್​ವಲ್​ ಸೀನ್ ಶೂಟ್ ಮಾಡೋಕೆ ಯೋಜಿಸಲಾಗಿದೆಯಂತೆ. ಇದು ಪುಷ್ಪರಾಜ್ ಮತ್ತು ಭನ್ವಿರ್ ಸಿಂಗ್ ಶೇಖಾವತ್ ನಡುವೆ ನಡೆಯೋ ಚೇಸಿಂಗ್ ಸೀನ್ ಆಗಿದ್ದು, ಭಾರಿ ರೋಚಕವಾಗಿ ಮೂಡಿಬರಲಿದೆಯಂತೆ. ಈ ದೃಶ್ಯದಲ್ಲಿ ಅಲ್ಲು ಅರ್ಜುನ್ ಜೊತೆ ಮಲಯಾಳಂ ನಟ ಫಾಹದ್ ಫಾಸಿಲ್ ಫೇಸ್​ ಟು ಫೇಸ್​ ಮುಖಾಮುಖಿಯಾಗಲಿದ್ದಾರಂತೆ.

102 ಎತ್ತರದಲ್ಲಿ ನೇತಾಡಿದ ಅಲ್ಲು ಅರ್ಜುನ್!

ಪುಷ್ಪ ಚಿತ್ರದಲ್ಲಿ ಒಂದೊಂದು ಸೀನ್​ ಕೂಡ ವಾಹ್ ವಂಡರ್ ಅನ್ನೋಥರ ರೆಡಿ ಆಗ್ತಿದೆಯಂತೆ. ಅದಕ್ಕೆ ಮತ್ತೊಂದು ಬೆಸ್ಟ್​ ಎಕ್ಸಾಂಪಲ್ ವೈಜಾಕ್ ಬಂದರಿನಲ್ಲಿ ನಡೆದ ಬಜರ್​ದಸ್ತ್​​ ದೃಶ್ಯ. ಇತ್ತೀಚೆಗೆ ವೈಜಾಕ್​ ಬಂದರಿನಲ್ಲಿ ಪ್ರಮುಖ ಸೀನ್​ವೊಂದರ ಚಿತ್ರೀಕರಣ ಆಗಿದೆ. ಈ ಸೀನ್​ನಲ್ಲಿ ನಟ ಅಲ್ಲು ಅರ್ಜುನ್ 102 ಅಡಿ ಎತ್ತರದಲ್ಲಿ ನೇತಾಡಿದ್ದಾರಂತೆ. ವಿಲನ್ ಗ್ಯಾಂಗ್​ ಜೊತೆ ಸೆಣಸಾಡೋ ದೃಶ್ಯದಲ್ಲಿ ಪುಷ್ಪರಾಜ್​ನ ಕ್ರೇನ್ ಸಹಾಯದಿಂದ ತಲೆಕೆಳಗಾಗಿ ನೇತಾಕಾಲಾಗಿತ್ತಂತೆ. ಈ ಸೀನ್​ಗಾಗಿ ಜರ್ಮನಿಯಿಂದ 50 ಜನ ಸ್ಟಂಟ್​ ಕಲಾವಿದರನ್ನ ಕರೆಸಲಾಗಿತ್ತು ಎನ್ನಲಾಗಿದೆ. ನೂರು ಅಡಿ ಎತ್ತರದಲ್ಲಿ ತಲೆಕೆಳಗಾಗಿ ನೇತಾಡುತ್ತಿದ್ದರೂ ಅಲ್ಲಿಯೂ ಪುಷ್ಪರಾಜ್ ತನ್ನ ಮ್ಯಾನರಿಸಂ ಬಿಡದೆ ಇರೋ ಸೀನ್ ಇದಂತೆ. ನಿಮಗೆ ನೆನಪಿರಬಹುದು ಪಾರ್ಟ್​ 1ರಲ್ಲಿ ‘ಈ ಕಾಲು ನಂದೆ.. ಈ ಕಾಲು ನಂದೆ.. ನನ್ನ ಕಾಲಿನ ಮೇಲೆ ನನ್ನ ಕಾಲಿದೆ’ ಅನ್ನೋ ಡೈಲಾಗ್​ನಂತೆ ಇಲ್ಲಿಯೂ ಅವರ ಮ್ಯಾನರಿಸಂ ಇರುತ್ತಂತೆ. ಈ ದೃಶ್ಯದಲ್ಲಿ ಎಲ್ಲಿಯೂ ಡೂಪ್ ಬಳಸದ ಅಲ್ಲು ಅರ್ಜುನ್ ಖುದ್ದು ತಾವೇ ಮಾಡಿದ್ರು ಅನ್ನೋದು ವಿಶೇಷ.

‘ಹುಂ ಅಂತಿಯಾ ಹು ಹು ಅಂತಿಯಾ’ ಅನ್ನೋ ಮಸ್ತ್ ಪಾರ್ಟಿ ಸಾಂಗ್ ಎಷ್ಟು ಕಿಕ್ ಕೊಟ್ಟಿತ್ತು ಗೊತ್ತೇ ಇದೆ. ಇದೇ ಥರಾ ಸೆಕೆಂಡ್ ಚಾಪ್ಟರ್​ನಲ್ಲೂ ಸಾಂಗ್ ಇರಲಿದ್ದು, ಅದರ ಜೊತೆಗೆ ಪಾರ್ಟಿ ಸೀನ್​ ಕೂಡ ಇದೆಯಂತೆ. ಇದಕ್ಕಾಗಿ ಹೈದರಾಬಾದ್​ನ ಪ್ರಗತಿ ರೆಸಾರ್ಟ್​ನಲ್ಲಿ ಸೆಟ್​ ಹಾಕಲಾಗಿತ್ತಂತೆ. ಆದ್ರೆ ಗಾಳಿ ಸಹಿತ ಭಾರೀ ಮಳೆ ಬಂದ ಕಾರಣದಿಂದ ಸೆಟ್​ ಎಲ್ಲಾ ಹಾಳಾಗಿದ್ದು, ಸದ್ಯಕ್ಕೆ ಈ ಸೀನ್​ಗಳನ್ನ ನೈಟ್‌ಲೈಟ್‌ನಲ್ಲಿ ಚಿತ್ರೀಕರಿಸುತ್ತಿದೆಯಂತೆ.

ಪುಷ್ಪ ಡ್ಯಾನ್ಸ್​ಗಾಗಿ ಜಾನಿ ಮಾಸ್ಟರ್ ಡಬಲ್ ವರ್ಕ್!

ಪುಷ್ಪ-1ನಲ್ಲಿ ಡ್ಯಾನ್ಸ್‌ ತುಂಬಾನೇ ಹೈಲೆಟ್ ಆಗಿತ್ತು. ಪ್ರತಿಯೊಂದು ಹಾಡುಗಳಲ್ಲಿದ್ದ ಹುಕ್‌ ಸ್ಟೆಪ್‌ ಜನರನ್ನ ರೀಚ್ ಆಗೋಕೆ ಸಹಕಾರಿಯಾದ್ವು. ಹೀಗಾಗಿ ಪುಷ್ಪ-2ನಲ್ಲೂ ಡ್ಯಾನ್ಸ್‌ ಸ್ಟೆಪ್‌ ಬಗ್ಗೆ ಸ್ವತಃ ಅಲ್ಲು ತಲೆಕೆಡಿಸಿಕೊಂಡಿದ್ದಾರೆ. ಪಾಪ್ಯುಲರ್‌ ಕೋರಿಯೋಗ್ರಫರ್‌, ಜಾನಿ ಮಾಸ್ಟರ್‌ ಜೊತೆ ಅಲ್ಲು ಅರ್ಜುನ್‌ ಈಗಾಗಲೇ ಗಂಭೀರವಾಗಿ ಚರ್ಚಿಸಿದ್ದು, ಕಳೆದ ಬಾರಿಗಿಂತ ಈ ಸಲ ತುಂಬಾ ಕ್ರಿಯೇಟಿವ್ ಆಗಿ ಕೆಲಸ ಮಾಡಬೇಕು. ಮತ್ತಷ್ಟು ಸೀರಿಯಸ್‌ ಆಗಿ ತಗೋಬೇಕು. ಹುಕ್‌ ಸ್ಟೆಪ್‌ಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು ಅಂತಾ ಹೇಳಿದ್ದಾರಂತೆ. ಯಾವಾಗ ಅಲ್ಲು ಫೋನ್‌ ಬಂತೋ ಜಾನಿ ಮಾಸ್ಟರ್‌ಗೆ ಟೆನ್ಷನ್‌ ಜಾಸ್ತಿಯಾಗಿದ್ದು, ಈ ಸಲ ಧಮಾಕಾ ಸೃಷ್ಟಿಸಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದಾರಂತೆ.

1000 ಕೋಟಿ ಮೇಲೆ ಕಣ್ಣಿಟ್ಟ ಪುಷ್ಪರಾಜ್

ಮೊದಲನೇ ಪುಷ್ಪಗಿಂತ ಎರಡನೇ ಪುಷ್ಪ ದೊಡ್ಡದಾಗ್ತಿದೆ ಅಂತ ಬರೀ ಮಾತಲ್ಲಿ ಹೇಳ್ತಿಲ್ಲ. ಪ್ರೊಡಕ್ಷನ್ ಖರ್ಚು ಅಷ್ಟು ಜಾಸ್ತಿ ಆಗ್ತಿದೆಯಂತೆ. ಕಳೆದ ಸಲ 400 ಕೋಟಿವರೆಗೂ ಕಲೆಕ್ಷನ್ ಮಾಡಿದ್ದ ಪುಷ್ಪ ಈ ಸಲ 1000 ಕೋಟಿ ಟಾರ್ಗೆಟ್​ ಮಾಡಿದೆಯಂತೆ. ಇನ್ನು ಈಗಾಗಲೇ ಪುಷ್ಪ ಸೆಕೆಂಡ್ ಚಾಪ್ಟರ್​ಗೆ ಬೇಡಿಕೆ ಹೆಚ್ಚಿದ್ದು, ವಿವಿಧ ರಾಜ್ಯಗಳಿಂದ ಡಿಸ್ಟ್ರಿಬ್ಯೂಷನ್ ಹಕ್ಕು ಕೇಳ್ತಿದ್ದಾರಂತೆ. ಅದರಲ್ಲೂ ಕರ್ನಾಟಕದಿಂದ ಇಬ್ಬರು ಖ್ಯಾತ ನಿರ್ಮಾಪಕರು ಪುಷ್ಪ ರೈಟ್ಸ್​ಗಾಗಿ ಪೈಪೋಟಿ ನಡೆಸ್ತಿದ್ದು, ಸುಮಾರು 30 ಕೋಟಿವರೆಗೂ ಆಫರ್ ಮಾಡಿದ್ದಾರಂತೆ. ಭಾರತೀಯ ಸಿನಿಮಾ ಲೋಕದಲ್ಲಿ ಪುಷ್ಪ ಹೊಸ ಸೆನ್ಸೇಷನ್ ಎನಿಸಿಕೊಳ್ತಿದೆ. ಕೆಜಿಎಫ್, ತ್ರಿಬಲ್ ಆರ್ ನಂತರ ಅಂಥದ್ದೇ ಸುನಾಮಿ ಸೃಷ್ಟಿಸೋ ಸಿನಿಮಾ ಅಂತಾ ಗುರುತಿಸಿಕೊಳ್ತಿದೆ. ಅದಕ್ಕೆ ತಕ್ಕಂತೆ ಸಿನಿಮಾನೂ ರೆಡಿಯಾಗ್ತಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

1000 ಕೋಟಿ ಮೇಲೆ ಪುಷ್ಪರಾಜ್ ಕಣ್ಣು: ಸಖತ್ ಫಾಸ್ಟ್​ ಆಗಿ ರೆಡಿಯಾಗ್ತಿದೆ ಪುಷ್ಪ ಸೀಕ್ವೆಲ್ ಸೀನ್ಸ್‌

https://newsfirstlive.com/wp-content/uploads/2023/07/pushpa-4.jpg

Load More