newsfirstkannada.com

ರಾಷ್ಟ್ರ ಪ್ರಶಸ್ತಿ ಬಂದ ಕೂಡಲೇ ಹೆಚ್ಚಾಯ್ತು ಹೈಪ್​​.. 1,000 ಕೋಟಿ ಮೇಲೆ ಕಣ್ಣಿಟ್ಟ ಪುಷ್ಪರಾಜ್!

Share :

09-09-2023

  ಪುಷ್ಪರಾಜ್ ಬಗ್ಗೆ ಹೊರಬಿದ್ದ ಮತ್ತಷ್ಟು ಹೊಸ ಹೊಸ ಸರ್ಪ್ರೈಸ್​ ಅಪ್ಡೇಟ್ಸ್​​

  14 ಸೆಕೆಂಡ್‌ಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌!

  ಮೊದಲನೇ ಪುಷ್ಪಗಿಂತ ಎರಡನೇ ಪುಷ್ಪಗೆ ಪ್ರೊಡಕ್ಷನ್ ಖರ್ಚು ಜಾಸ್ತಿ!

ಅಲ್ಲು ಅರ್ಜುನ್​ ಈ ವಂಡರ್​ ಕ್ರಿಯೇಟ್​ ಮಾಡೋಕೆ ಹೊರಟಿದ್ದಾರೆ. ಜೈಲರ್, ಜವಾನ್, ಸಲಾರ್​ ಏನೇ ಬರಲಿ ಪುಷ್ಪ 2 ಇನ್ನೊಂದು ಲೆವೆಲ್​ನಲ್ಲಿರುತ್ತೆ ಅನ್ನೋ ಮೆಸೇಜ್ ಪಾಸ್ ಮಾಡ್ತಾ ಇದ್ದಾರೆ. ಅದಕ್ಕೆ ಸಾಕ್ಷಿ ಅನ್ನೋಥರಾ ರಣರೋಚಕವಾದ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದ್ದಾರೆ. ಈಗ ಪುಷ್ಪರಾಜ್ ಬಗ್ಗೆ ಮತ್ತಷ್ಟು ಸರ್ಪ್ರೈಸ್​ ಅಪ್ಡೇಟ್​ಗಳು ಹೊರಬಿದ್ದಿದ್ದು ನಿರೀಕ್ಷೆಯ ಲೆವೆಲ್​ ಇನ್ನೂ ಜಾಸ್ತಿಯಾಗಿದೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ‘ಪುಷ್ಪ ದಿ ರೂಲ್’​ ಸಿನಿಮಾ ದಿನೇ ದಿನೇ ಸೆನ್ಸೇಷನ್ ಕ್ರಿಯೇಟ್ ಮಾಡ್ತಾ ಸಾಗ್ತಿದೆ. ಮೊದಲ ಭಾಗಕ್ಕಿಂತ ಎರಡನೇ ಅಧ್ಯಾಯ ಬಹಳ ಅದ್ಧೂರಿ ಹಾಗೂ ರೋಚಕವಾಗಿ ಸಿದ್ಧವಾಗ್ತಿದ್ದು, ನಿರೀಕ್ಷೆಗಳು ಆಕಾದಷ್ಟು ಎತ್ತರಕ್ಕೆ ಸಾಗ್ತಿದೆ.

ಪುಷ್ಪರಾಜ್ ಈಗ ಬದಲಾಗಿದ್ದಾನೆ. ದಿನದ ಕಾಸಿಗಾಗಿ ಕೂಲಿ ಮಾಡ್ತಿದ್ದ ಪುಷ್ಪರಾಜ್ ಈಗ ಸಿಂಡಿಕೇಟ್​ ಇಂಚಾರ್ಜ್​ ತಗೊಂಡಿದ್ದಾನೆ. ಮೊದಲ ಭಾಗದಲ್ಲಿ ಪುಷ್ಪ ಹೇಗೆ ಬೆಳೆದ ಅಂತ ಪ್ರೇಕ್ಷಕರು ನೋಡಿದ್ದಾರೆ. ಇದೀಗ ಪುಷ್ಪರಾಜ್ ಹೇಗೆ ರೂಲ್ ಮಾಡ್ತಾನೆ ಅನ್ನೋದು ಸೆಕೆಂಡ್​ ಚಾಪ್ಟರ್​ನ ಪ್ರಮುಖ ಕಥೆ. ಹಾಗಾಗಿ, ಎರಡನೇ ಚಾಪ್ಟರ್​ನಲ್ಲಿ ಪುಷ್ಪರಾಜ್​ ಲುಕ್, ಗೆಟಪ್​, ಧಿಮಾಕು ಎಲ್ಲವೂ ಇನ್ನೊಂದು ಲೆವೆಲ್​ ಬದಲಾಗಿರುತ್ತೆ. ಇದರ ಮೇಕ್ ಓವರ್ ಹಾಗೂ ಮೇಕಿಂಗ್ ಝಲಕ್ ಈಗಾಗಲೇ ರಿವೀಲ್ ಆಗಿದ್ದು, ಅಭಿಮಾನಿಗಳಲ್ಲಿ ರೋಚಕತೆ ಹೆಚ್ಚಿಸಿದೆ.

View this post on Instagram

A post shared by Instagram (@instagram)

ಇತ್ತೀಚೆಗೆ ಸ್ವತಃ ಅಲ್ಲು ಅರ್ಜುನ್ ಅವರೇ ಪುಷ್ಪ 2 ಸಿನಿಮಾದ ಸೆಟ್​ ವಿಡಿಯೋ ಹಂಚಿಕೊಂಡಿದ್ದರು. ಪುಷ್ಪ ಎಷ್ಟು ಸ್ಪೆಷಲ್ ಆಗಿ ರೆಡಿಯಾಗ್ತಿದೆ, ಎಷ್ಟು ಅದ್ಧೂರಿಯಾಗಿ ಮೇಕಿಂಗ್ ಆಗ್ತಿದೆ, ಅದಕ್ಕಾಗಿ ಸುಕುಮಾರ್ ಅಂಡ್ ಟೀಮ್ ಎಷ್ಟು ಎಫರ್ಟ್ ಹಾಕ್ತಾ ಇದ್ದಾರೆ. ಇದಕ್ಕೆ ಅಲ್ಲು ಅರ್ಜುನ್ ಎಷ್ಟು ಸಾಥ್ ಕೊಡ್ತಿದ್ದಾರೆ ಅನ್ನೋದನ್ನ ಎರಡೂವರೆ ನಿಮಿಷದ ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಇದು ಪುಷ್ಪರಾಜ್ ಅಭಿಮಾನಿಗಳ ನಿದ್ದೆಗೆಡಿಸಿತ್ತು.

ಚೇಸಿಂಗ್.. ಫೈಟಿಂಗ್.. ಪುಷ್ಪ ರಣರೋಚಕ!
ಸಾವಿರ ಲಾರಿಗಳು.. ಅಬ್ಬಬ್ಬಾ ಇದೆಂಥಾ ದೃಶ್ಯ?

ಪುಷ್ಪ 2 ಚಿತ್ರದ ಬಹುದೊಡ್ಡ ಶಕ್ತಿ ಆ್ಯಕ್ಷನ್ ದೃಶ್ಯಗಳು ಅಂತಾ ಹೇಳಲಾಗ್ತಿದೆ. ಬಹುತೇಕ ಚಿತ್ರೀಕರಣ ಕಾಡಿನ ಭಾಗದಲ್ಲೇ ನಡೆಯುತ್ತಿದೆ. ಚೇಸಿಂಗ್, ಫೈಟಿಂಗ್ ಸೀನ್​ಗಳು ಹೈಲೈಟ್​ ಆಗಿವೆಯಂತೆ. ತಿರುಪತಿ ಜಿಲ್ಲೆಯ ಪೂರ್ವ ಘಟ್ಟದಲ್ಲಿರುವ ಸ್ವರ್ಣಮುಖಿ ನದಿಯಲ್ಲಿ ಇಂಟರ್​ವಲ್​ ಸೀನ್ ಶೂಟ್ ಮಾಡಲಾಗಿದ್ದು, ಲಾರಿಗಳ ಚೇಸಿಂಗ್​ ದೃಶ್ಯಗಳ ರಣರೋಚಕವಾಗಿ ಮೂಡಿ ಬಂದಿದೆಯಂತೆ. ಮತ್ತೊಂದು ದೃಶ್ಯವನ್ನ ವೈಜಾಕ್​ನ ಬಂದರಿನಲ್ಲಿ ಶೂಟ್ ಮಾಡಲಾಗಿದ್ದು, ಈ ಸೀನ್​ನಲ್ಲಿ ಜರ್ಮನಿಯ 50 ಜನ ಸ್ಟಂಟ್ ಕಲಾವಿದರು ಭಾಗವಹಿಸಿದ್ದರಂತೆ. ಹೀಗೆ ಒಂದೊಂದು ದೃಶ್ಯವನ್ನು ತುಂಬಾ ಎಫರ್ಟ್ ಹಾಕಿ ಶೂಟ್ ಮಾಡ್ತಿದ್ದಾರಂತೆ. ಮತ್ತೊಂದು ದೃಶ್ಯದಲ್ಲಿ ಅಂದಾಜು ಒಂದು ಸಾವಿರಕ್ಕೂ ಹೆಚ್ಚು ಲಾರಿಗಳು ಇರಬಹುದು. ಪುಷ್ಪ ‌ ಚಿತ್ರೀಕರಣಕ್ಕಾಗಿ ಇಷ್ಟು ಲಾರಿಗಳನ್ನ ಬಳಸಿಕೊಳ್ಳಲಾಗಿದೆಯಂತೆ. ಸದ್ಯ 14 ಸೆಕೆಂಡ್‌ಗಳ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಪುಷ್ಪ ಮೇಕಿಂಗ್ ಇನ್ಯಾವ ಮಟ್ಟಕ್ಕೆ ಆಗ್ತಿರಬಹುದು ಅಂತ ಫ್ಯಾನ್ಸ್​​ಗಳು ಊಹೆ ಪಡುತ್ತಿದ್ದಾರೆ.

ಪುಷ್ಪ ಸೀಕ್ರೆಟ್​ ಬಿಟ್ಟುಕೊಟ್ಟ ದೇವಿಶ್ರೀ ಪ್ರಸಾದ್!

ಪುಷ್ಪ ಸಿನಿಮಾದ ಮತ್ತೊಂದು ಶಕ್ತಿ ಮ್ಯೂಸಿಕ್. ಮೊದಲ ಭಾಗದಲ್ಲಿ ಎಲ್ಲ ಸಾಂಗ್ಸ್​ ಸೂಪರ್​ ಹಿಟ್​ ಆಗಿತ್ತು ಜೊತೆಗೆ ಬ್ಯಾಗ್ರೌಂಡ್​ ಮ್ಯೂಸಿಕ್​ ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು​. ಈ ಸಲವೂ ಅಂಥದ್ದೇ ಜಾದೂ ಮಾಡ್ತಿದ್ದಾರಂತೆ ದೇವಿಶ್ರೀ ಪ್ರಸಾದ್. ಇತ್ತೀಚೆಗಷ್ಟೇ ಇನ್​ಸ್ಟಾಗ್ರಾಮ್​ ಲೈವ್​ ಬಂದಿದ್ದ ದೇವಿಶ್ರೀ ಪ್ರಸಾದ್ ಈಗಾಗಲೇ ಪುಷ್ಪ 2 ಚಿತ್ರದ ಎರಡು ಸಾಂಗ್​ನ ರೆಕಾರ್ಡಿಂಗ್ ಮುಗಿಸಿರುವುದಾಗಿ ಹೇಳಿದ್ದಲ್ಲದೇ ಕೆಲವು ದೃಶ್ಯಗಳ ಮೇಕಿಂಗ್ ನೋಡಿರುವ ಡಿಎಸ್​ಪಿ ಮೈಂಡ್​ ಬ್ಲೋಯಿಂಗ್ ಎಂದಿದ್ದಾರೆ.

ರಾಷ್ಟ್ರ ಪ್ರಶಸ್ತಿಯಿಂದ ಹೆಚ್ಚಾಯ್ತು ಲೆಕ್ಕಾಚಾರ!
1000 ಕೋಟಿ ಮೇಲೆ ಕಣ್ಣಿಟ್ಟ ಪುಷ್ಪರಾಜ್!

ಮೊದಲನೇ ಪುಷ್ಪಗಿಂತ ಎರಡನೇ ಪುಷ್ಪ ದೊಡ್ಡದಾಗ್ತಿದೆ. ಪ್ರೊಡಕ್ಷನ್ ಖರ್ಚು ಅಷ್ಟು ಜಾಸ್ತಿ ಆಗ್ತಿದೆಯಂತೆ. ಕಳೆದ ಸಲ 400 ಕೋಟಿವರೆಗೂ ಕಲೆಕ್ಷನ್ ಮಾಡಿದ್ದ ಪುಷ್ಪ ಈ ಸಲ 1000 ಕೋಟಿ ಟಾರ್ಗೆಟ್​ ಮಾಡಿದೆಯಂತೆ. ಪುಷ್ಪ ಸೆಕೆಂಡ್ ಚಾಪ್ಟರ್​ಗೆ ಬೇಡಿಕೆ ಹೆಚ್ಚಿದ್ದು, ವಿವಿಧ ರಾಜ್ಯಗಳಿಂದ ಡಿಸ್ಟ್ರುಬ್ಯೂಷನ್ ಹಕ್ಕು ಕೇಳ್ತಿದ್ದಾರಂತೆ. ಅದರಲ್ಲೂ ಕರ್ನಾಟಕದಿಂದ ಇಬ್ಬರು ಖ್ಯಾತ ನಿರ್ಮಾಪಕರು ಪುಷ್ಪ ರೈಟ್ಸ್​ಗಾಗಿ ಪೈಪೋಟಿ ನಡೆಸ್ತಿದ್ದು, ಸುಮಾರು 30 ಕೋಟಿವರೆಗೂ ಆಫರ್ ಮಾಡಿದ್ದಾರಂತೆ. ಈ ನಡುವೆ ಪುಷ್ಪ ಸಿನಿಮಾದ ನಟನೆಯಗಾಗಿ ಅಲ್ಲು ಅರ್ಜುನ್​ಗೆ ಅತ್ಯತ್ತುಮ ನಟ ರಾಷ್ಟ್ರ ಪ್ರಶಸ್ತಿ ಸಿಕ್ಕಿವೆ. ಈ ಪ್ರಶಸ್ತಿ ಅಲ್ಲು ಅರ್ಜುನ್​ ಮೇಲಿನ ಜವಾಬ್ದಾರಿ ಮತ್ತು ನಿರೀಕ್ಷೆಯನ್ನ ಡಬಲ್ ಮಾಡಿದೆ. ಅಲ್ಲು ಅರ್ಜುನ್​ಗೆ ನ್ಯಾಷನಲ್ ಅವಾರ್ಡ್​ ಸಿಕ್ಕ ಮೇಲೆ ಸಿನಿ ಮಾರ್ಕೆಟ್​ನಲ್ಲಿ ಪುಷ್ಪ 2ಗೆ ಸಹಜವಾಗಿ ಡಿಮ್ಯಾಂಡ್​ ಹೆಚ್ಚಾಗಿದೆಯಂತೆ.

ಪುಷ್ಪ ನಂತರ ಬಂದ ಕೆಜಿಎಫ್, ತ್ರಿಬಲ್ ಆರ್ ಚಿತ್ರಗಳು ಬಾಕ್ಸ್​​ ಆಫೀಸ್​ನಲ್ಲಿ ದೊಡ್ಡ ಸುನಾಮಿ ಸೃಷ್ಟಿಸಿತ್ತು. ಈ ಸುನಾಮಿನ ಮೀರಿಸುವಂತೆ ಪುಷ್ಪ 2 ರೆಡಿಯಾಗಬೇಕು ಅನ್ನೋದು ಸ್ವತಃ ಅಲ್ಲು ಅರ್ಜುನ್​ ಅವರ ಟಾರ್ಗೆಟ್ ಅಂತೆ. ಹಾಗಾಗಿಯೇ ಅಲ್ಲು ಅರ್ಜುನ್ ಪುಷ್ಪ ಮುಗಿಸೋವರೆಗೂ ಈಗ ಒಪ್ಪಿಕೊಂಡಿರುವ ಬೇರೆ ಯಾವ ಚಿತ್ರಗಳನ್ನ ಮಾಡದಿರಲು ನಿರ್ಧರಿಸಿದ್ದಾರೆ. ಪುಷ್ಪ ಪ್ಯಾನ್ ಇಂಡಿಯಾದ ನೆಕ್ಸ್ಟ್ ಬಿಗ್ಗೆಸ್ಟ್​ ಸಿನಿಮಾ. ಅಂದುಕೊಂಡಂತೆ ಜಾದೂ ಮಾಡುತ್ತಾ? ರಾಜಮೌಳಿ ಚಿತ್ರಕ್ಕೆ ಸೆಡ್ಡು ಹೊಡೆಯುತ್ತಾ? ಕಾದು ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಷ್ಟ್ರ ಪ್ರಶಸ್ತಿ ಬಂದ ಕೂಡಲೇ ಹೆಚ್ಚಾಯ್ತು ಹೈಪ್​​.. 1,000 ಕೋಟಿ ಮೇಲೆ ಕಣ್ಣಿಟ್ಟ ಪುಷ್ಪರಾಜ್!

https://newsfirstlive.com/wp-content/uploads/2023/09/pushpa.jpg

Load More