newsfirstkannada.com

×

ಪುಷ್ಪಾ 2 ರಿಲೀಸ್‌ಗೆ ಫೈನಲ್ ಮುಹೂರ್ತ.. ಅಲ್ಲು ಅರ್ಜುನ್ ಹೊಸ ಲುಕ್ ಬಿಡುಗಡೆ; ಬಿಗ್ ಅಪ್ಡೇಟ್ ಇಲ್ಲಿದೆ!

Share :

Published October 25, 2024 at 6:08am

    ಪುಷ್ಪಾ 2 ಬಿಡುಗಡೆಯ ದಿನಾಂಕವನ್ನು ಬಹಿರಂಗಗೊಳಿಸಿದ ಅಲ್ಲು ಅರ್ಜುನ್

    ಡಿಸೆಂಬರ್​ನಲ್ಲಿಯೇ ತೆರೆಗೆ ಅಪ್ಪಳಿಸಲಿದೆ ಬಹು ನಿರೀಕ್ಷಿತ ಸಿನಿಮಾ ಪುಷ್ಪಾ 2

    ಆಗಸ್ಟ್​ನಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾ ಇಷ್ಟು ವಿಳಂವಾಗಿದ್ದು ಏಕೆ?

2021ರಲ್ಲಿ ಬೆಳ್ಳಿ ತೆರೆಗೆ ಅಪ್ಪಳಿಸಿ ಬಾಕ್ಸ್ ಆಫೀಸ್ ದೋಚಿದ್ದು ಪುಷ್ಪಾ ಸಿನಿಮಾ ನೋಡದವರೆಲ್ಲಾ ಪುಷ್ಪಾ 2 ಯಾವಾಗ ಬರುತ್ತೆ ಅಂತ ಸತತ ಮೂರು ವರ್ಷಗಳ ಕಾಲದಿಂದಲೂ ಕಾಯುತ್ತಿದ್ದಾರೆ. ಈ ರೀತಿ ಕಾಯುತ್ತಿರುವ ಸಿನಿ ಪ್ರಿಯರಿಗೆ ಪುಷ್ಪಾ ಸಿನಿಮಾ ತಂಡ ಒಂದು ಗುಡ್ ನ್ಯೂಸ್ ಕೊಟ್ಟಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪುಷ್ಪಾ2 ಮೂವಿ ತೆರೆಗೆ ಅಪ್ಪಳಿಸಲಿದೆ.

ಡಿಸೆಂಬರ್​ನಲ್ಲಿ ತೆರೆಗೆ ಬರಲು ಸಜ್ಜಾದ ಪುಷ್ಪಾ
ತೆಲುಗು ಸೂಪರ್​ಸ್ಟಾರ್ ಅಲ್ಲು ಅರ್ಜುನ್ ಪುಷ್ಪಾ 2 ಬಿಡುಗಡೆಯ ದಿನಾಂಕವನ್ನ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಹಿಂದೆ ಪುಷ್ಪಾ 3 ಡಿಸೆಂಬರ್ 6ಕ್ಕೆ ರಿಲೀಸ್ ಮಾಡುವ ಉದ್ದೇಶದಲ್ಲಿ ಚಿತ್ರತಂಡವಿತ್ತು. ಆದ್ರೆ ಈಗ ಒಂದು ದಿನ ಮುಂಚೆಯೇ ತೆರೆಯ ಮೇಲೆ ಕಮಾಲ್ ಮಾಡಲು ಪುಷ್ಪ 2 ತಂಡ ಸಿದ್ಧವಾಗಿದೆ. ಪುಷ್ಪಾ 2 ಇದೇ ಡಿಸೆಂಬರ್ 5 ರಂದು ದೇಶಾದ್ಯಂತ ತೆರೆ ಕಾಣಲಿದೆ ಎಂದು ನಟ ಅಲ್ಲು ಅರ್ಜುನ್ ಹೇಳಿದ್ದಾರೆ.

ಇದನ್ನೂ ಓದಿ: ಅನ್ನು ಕಪೂರ್​ಗೆ ಕಿಸ್​ ಮಾಡಲು ಹಿಂದೇಟು ಹಾಕಿದ್ದೇಕೆ ಪ್ರಿಯಾಂಕ ಚೋಪ್ರಾ; ತೆರೆಯ ಹಿಂದಿನ ಸತ್ಯ ಬಿಚ್ಚಿಟ್ಟ ನಟ

ಹೊಸದಾಗಿ ರಿಲೀಸ್ ಆಗಿರುವ ಪುಷ್ಪಾ ಸಿನಿಮಾದ ಪೋಸ್ಟರ್​ನ್ನು ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿರುವ ಅಲ್ಲು ಅರ್ಜುನ್ ಡಿಸೆಂಬರ್ 5ಕ್ಕೆ ಪುಷ್ಪಾ ಸಿನಿಮಾ ರಿಲೀಸ್ ಆಗುವ ಬಗ್ಗೆ ಹೇಳಿದ್ದಾರೆ. ಬಾಯಲ್ಲಿ ಸ್ಮೋಕಿಂಗ್ ಪೈಪ್​, ಕೈಯಲ್ಲಿ ಗನ್​, ಗ್ಲಾಸಿ ಬ್ಲ್ಯೂ ಬಣ್ಣದ ಟಿಶರ್ಟ್ ಧರಿಸಿ ರಗಡ್​ ಲುಕ್ ನಲ್ಲಿ ಅಲ್ಲು ಅರ್ಜುನ್ ಈ ಪೋಸ್ಟರ್​ನಲ್ಲಿ ಕಾಣಿಸಿದ್ದಾರೆ. ಅಲ್ಲು ಅರ್ಜುನ್ ಈ ಲುಕ್​ಗೆ ಫಿದಾ ಆಗಿರುವ ಫ್ಯಾನ್ಸ್ ಪುಷ್ಪಾ 1 ಗಿಂತ ಪುಷ್ಪಾ 2 ಇನ್ನೂ ದೊಡ್ಡದಾಗಿ ಮನರಂಜನೆ ನೀಡಲಿದೆ ಅನ್ನೋ ಭರವಸೆಯಲ್ಲಿದ್ದಾರೆ.

ಇತ್ತೀಚೆಗೆ ಪುಷ್ಪಾ ಸಿನಿಮಾದ ನಿರ್ಮಾಪಕ ನವೀನ್ ಯರ್ನೇನಿ ಹೈದ್ರಾಬಾದ್​ನಲ್ಲಿ ಸಿನಿಮಾ ರಿಲೀಸ್ ಕುರಿತಾಗಿ ಮಾಧ್ಯಮಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡಿದ ನವೀನ್. ಸಿನಿಮಾ ಆಗಷ್ಟ್​ನಲ್ಲಿಯೇ ರಿಲೀಸ್ ಮಾಡಲು ಉದ್ದೇಶಿಸಲಾಗಿತ್ತು. ಅದು ಕೊಂಚ ವಿಳಂಬವಾಯ್ತು ಆಗಸ್ಟ್ 15ರ ಬಳಿಕ ನಾವು ಬಿಡುಗಡೆಗಾಗಿ ಅನೇಕ ದಿನಗಳನ್ನು ಆಯ್ಕೆ ಮಾಡಿದ್ದೇವು ಆದ್ರೆ ನಮಗೆ ಹೆಚ್ಚು ಹೆಚ್ಚು ಥಿಯೇಟರ್​ಗಳು ಬೇಕಾದ ಕಾರಣದಿಂದ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಯ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪುಷ್ಪ ಮಾದರಿ ಸ್ಮಗ್ಲಿಂಗ್.. ಆಯಿಲ್ ಟ್ಯಾಂಕರ್​ನಲ್ಲಿ 200 ಬಾಕ್ಸ್​ ಮದ್ಯ ಸಾಗಾಟ; ಆಮೇಲೇನಾಯ್ತು?

ಇನ್ನು ಈ ಬಗ್ಗೆ ಮಾತನಾಡಿರುವ ಸಿನಿಮಾ ನಿರ್ದೇಶಕ ಸುಕುಮಾರ್, ಪುಷ್ಪಾ 2 ಕೂಡ ಪುಷ್ಪಾ ಸಿನಿಮಾದಂತೆಯೇ ನಿಮ್ಮನ್ನು ಮನರಂಜಿಸಲಿದೆ. ನೀವು ಯಾವ ಭರವಸೆಯನ್ನಿಟ್ಟು ಥಿಯೇಟರ್​ಗೆ ಬರುತ್ತೀರೋ ಅದು ಹುಸಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಪುಷ್ಪಾ ಸಿನಿಮಾ 2021ರಲ್ಲಿ ಬಿಡುಗಡೆಯಾಗಿತ್ತು. ಚಿತ್ರದ ಪ್ರಮುಖ ಪಾತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಕಾಣಿಸಿಕೊಂಡಿದ್ದರು ಸದ್ಯ ಡಿಸೆಂಬರ್​ನಲ್ಲಿ ಬಿಡುಗಡೆಯಾಗುತ್ತಿರುವ ಪುಷ್ಪಾ 2 ಸಿನಿಮಾ ಅದ್ಧೂರಿ ಬಜೆಟ್​ನಲ್ಲಿ ಸಿದ್ಧಗೊಂಡಿದೆ. ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ ಎಂದು ಹೇಳಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುಷ್ಪಾ 2 ರಿಲೀಸ್‌ಗೆ ಫೈನಲ್ ಮುಹೂರ್ತ.. ಅಲ್ಲು ಅರ್ಜುನ್ ಹೊಸ ಲುಕ್ ಬಿಡುಗಡೆ; ಬಿಗ್ ಅಪ್ಡೇಟ್ ಇಲ್ಲಿದೆ!

https://newsfirstlive.com/wp-content/uploads/2024/10/Pushpa-2-new-poster.jpg

Load More