/newsfirstlive-kannada/media/post_attachments/wp-content/uploads/2024/11/pushapa3.jpg)
ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ದಿ ರೂಲ್ ಸಿನಿಮಾಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಸಿನಿಮಾವನ್ನು ಫಸ್ಟ್​ ಡೇ ಫಸ್ಟ್​ ಶೋ ನೋಡಲು ಈಗಾಗಲೇ ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ
/newsfirstlive-kannada/media/post_attachments/wp-content/uploads/2024/11/pushapa2.jpg)
ಸ್ಟಾರ್ ನಿರ್ದೇಶಕ​ ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಪುಷ್ಪ 2 ದಿ ರೂಲ್ ಡಿಸೆಂಬರ್ 5, 2024ರಂದು ತೆರೆಗೆ ಬರಲು ನಿರ್ಧರಿಸಲಾಗಿದೆ. ಹೀಗಾಗಿ ನಿರ್ಮಾಪಕರು ಈ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ದೊಡ್ಡ ಮಟ್ಟದ ಯೋಜನೆಗಳಲ್ಲಿದ್ದಾರೆ. ಹೌದು, ಟಾಲಿವುಡ್‌ನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಂಚಲನ ಸೃಷ್ಟಿಸಲು ಸಜ್ಜಾಗಿದೆ ಪುಷ್ಪ 2 ದಿ ರೂಲ್ ಟೀಮ್​. ಹೀಗಾಗಿ ಪುಷ್ಪ 2 ಸಿನಿಮಾದ ಪ್ರಮೋಷನ್‌ಗಾಗಿ ಚಿತ್ರತಂಡ ದೇಶದ ಆರು ಪ್ರದೇಶಲ್ಲಿ ಬೃಹತ್ ಸೆಟ್ ಹಾಕುವ ಮೂಲಕ ಪ್ರೀ ಇವೆಂಟ್ ಕಾರ್ಯಕ್ರಮ ಮಾಡಲು ಪ್ಲಾನ್ ಮಾಡಿಕೊಂಡಿದೆ.
/newsfirstlive-kannada/media/post_attachments/wp-content/uploads/2024/11/pushapa.jpg)
ಇನ್ನೂ, ಪುಷ್ಪ 2 ಸಿನಿಮಾದ ಮೊದಲ ಪ್ರಮೋಷನ್ ನವೆಂಬರ್ ಅಂತ್ಯದೊಳಗೆ ಆರಂಭವಾಗಲಿದೆ. ಚಿತ್ರ ತಂಡ ಮೊದಲ ಕಾರ್ಯಕ್ರಮವನ್ನು ಬಿಹಾರ ಪಾಟ್ನಾ ನಗರದಲ್ಲಿ ಹಮ್ಮಿಕೊಂಡಿದೆ. ಇದಾದ ಬಳಿಕ ನಮ್ಮ ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೃಹತ್ ಕಾರ್ಯಕ್ರಮ ನಡೆಯುತ್ತಿದೆ. ಜೊತೆಗೆ ಸಿನಿಮಾ ಬಿಡುಗಡೆ ವೇಳೆಗೆ ತಮಿಳುನಾಡಿನ ಚೆನ್ನೈ ಸೇರಿದಂತೆ ಕೇರಳದ ಕೊಚ್ಚಿ ನಗರಗಳಲ್ಲಿ ಪ್ರಮೋಷನ್ ಮಾಡಲಿದೆ. ಕೊನೆಯದಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಪ್ರಮುಖ ಸಿಟಿಗಳಲ್ಲಿ ದೊಡ್ಡ ಮಟ್ಟದ ಇವೆಂಟ್ ಮಾಡುವ ಮೂಲಕ ತೆರೆ ತರಲು ಚಿತ್ರತಂಡ ನಿರ್ಧರಿಸಿದೆ.
/newsfirstlive-kannada/media/post_attachments/wp-content/uploads/2024/11/pushapa1.jpg)
ಈಗಾಗಲೇ ಅಧಿಕೃತವಾಗಿ ಸಿನಿಮಾ ಪ್ರಚಾರ ಆರಂಭಿಸಿರುವ ಚಿತ್ರತಂಡ ಒಂದೊಂದಾಗಿ ಅಪ್ಲೇಟ್​ಗಳನ್ನು ನೀಡುತ್ತಿದೆ. ಅಭಿಮಾನಿಗಳಿಗೆ ದೀಪಾವಳಿ ಗಿಫ್ಟ್ ನೀಡಿರುವ ಚಿತ್ರತಂಡ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಮಾಡಿತ್ತು. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರ ರೋಮ್ಯಾಂಟಿಕ್ ಪೋಸ್ಟರ್ ನೀಡಿದ ಪ್ರೇಕ್ಷಕರಲ್ಲಿ ಚಿತ್ರದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us