Advertisment

ರಿಲೀಸ್​​​ಗೆ ಮುನ್ನವೇ ಪುಷ್ಪಾ 2 ಸಿನಿಮಾಗೆ ಭಾರೀ ಡಿಮ್ಯಾಂಡ್​​; 1 ಟಿಕೆಟ್​ ಎಷ್ಟು ಸಾವಿರ?

author-image
Gopal Kulkarni
Updated On
ರಿಲೀಸ್​ಗೂ ಮುನ್ನವೇ ಪುಷ್ಪ 2 ಸಖತ್ ಸೌಂಡ್; ​KGF 2, ಪಠಾಣ್ ದಾಖಲೆಗಳು ಪುಡಿ ಪುಡಿ ಆಗುತ್ತಾ..?
Advertisment
  • ರಿಲೀಸ್​ಗೂ ಮುನ್ನವೇ ದೊಡ್ಡ ಹೈಪ್ ಕ್ರಿಯೇಟ್ ಮಾಡಿದ ಪುಷ್ಪಾ-2 ಸಿನಿಮಾ
  • ಹಿಂದಿ ಭಾಷೆ ಪ್ರಭಾವ ಇರುವ ರಾಜ್ಯಗಳಲ್ಲಿಯೇ ಟಿಕೆಟ್​ಗೆ ಫುಲ್ ಡಿಮ್ಯಾಂಡ್​!
  • ಒಂದು ಟಿಕೆಟ್​ ಎಷ್ಟು ಸಾವಿರ ರೂಪಾಯಿಗೆ ಬಿಕರಿಯಾಗುತ್ತಿವೆ ಅಂತ ಗೊತ್ತಾ?

ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಪುಷ್ಪಾ 2 ಬಿಡುಗಡೆಗೆ ಮುನ್ನವೇ ದೊಡ್ಡ ಹವಾ ಕ್ರಿಯೇಟ್ ಮಾಡಿದೆ. ಸಿನಿಮಾ ಬಿಡುಗಡೆಗೆ ಇನ್ನೂ ನಾಲ್ಕು ದಿನ ಇರುವಾಗಲೇ ಬುಕ್ಕಿಂಗ್ ಈಗಾಗಲೇ ಶುರುವಾಗಿವೆ. ಅದರಲ್ಲೂ ಹಿಂದಿ ಭಾಷೆಯ ಪ್ರಭಾವ ಇರುವ ಪ್ರದೇಶಗಳಲ್ಲಿಯೇ ಟಿಕೆಟ್​ಗೆ ಫುಲ್ ಡಿಮ್ಯಾಂಡ್ ಉಂಟಾಗಿದೆ. ಸಿನಿಮಾದ ಹೈಪ್ ಎಷ್ಟರ ಮಟ್ಟಿಗೆ ಇದೆ ಅಂದ್ರೆ, ಹಿಂದಿ ಡಬ್ ಸಿನಿಮಾಗಾಗಿ 2 ಸಾವಿರ ರೂಪಾಯಿ ಕೊಟ್ಟು ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದಾರೆ ಸಿನಿ ಪ್ರಿಯರು. ಮುಂಬೈ ಹಾಗೂ ದೆಹಲಿಯ ಕೆಲವು ಥಿಯೇಟರ್​ಗಳಲ್ಲಿ ಪುಷ್ಪಾ 2 ಸಿನಿಮಾದ ಒಂದು ಟಿಕೆಟ್​ ಬೆಲೆ 2 ಸಾವಿರ ರೂಪಾಯಿ ದಾಟಿ ಹೋಗಿದೆ.

Advertisment

ಇದನ್ನೂ ಓದಿ:ಬಾಲಿವುಡ್ ಸಿನಿಮಾ ಯಾಕೆ ಮಾಡಲಿಲ್ಲ.. ಶಾಕಿಂಗ್ ಹೇಳಿಕೆ ನೀಡಿದ ಪುಷ್ಪಾ 2 ಸ್ಟಾರ್ ಅಲ್ಲು ಅರ್ಜುನ್!

ಈ ವರ್ಷ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಪುಷ್ಪಾ 2 ದಿ ರೂಲ್ ಸಿನಿಮಾ ಕೂಡ ಒಂದು. ಮೊದಲ ಭಾಗ ಪುಷ್ಪಾ ಸಿನಿಮಾ ಸೂಪರ್ ಹಿಟ್ ಆದ ನಂತರ, ಸಿನಿ ಪ್ರಿಯರು ಎರಡನೇ ಭಾಗದ ಸಿನಿಮಾಗಾಗಿ ಕಾಯುತ್ತಿದ್ದರು. ಸದ್ಯ ಡಿಸೆಂಬರ್ 5 ರಂದು ಸಿನಿಮಾ ರಿಲೀಸ್ ಆಗಲಿದೆ. ದೆಹಲಿಯ ಪಿವಿಆರ್​​ ಗಳಲ್ಲಿ ಈಗಾಗಲೇ ಟಿಕೆಟ್ ಬುಕ್ಕಿಂಗ್ ಆರಂಭವಾಗಿವೆ. ಹಿಂದಿ 2ಡಿ ವರ್ಷನ್ ಟಿಕೆಟ್​ಗಳ ಬೆಲೆ 2,400 ರೂಪಾಯಿ ತಲುಪಿದೆ ಎಂದು ಹೇಳಲಾಗುತ್ತಿದೆ. ಮುಂಬೈನ ಮಯಸನ್ ಪಿವಿಆರ್ ಥಿಯೇಟರ್​ನಲ್ಲಿ ಒಂದು ಟಿಕೆಟ್​ ಬೆಲೆ 2100 ರೂಪಾಯಿಗೆ ತಲುಪಿದೆ. ಆದರೂ ಕೂಡ ಜನರು ಮುಗಿಬಿದ್ದು ಟಿಕೆಟ್ ಖರೀದಿಸುತ್ತಿದ್ದಾರೆ. ಸಾಮಾನ್ಯವಾಗಿ ಹೊಸ ಸಿನಿಮಾ ರಿಲೀಸ್ ಆದಾಗ ಟಿಕೆಟ್ ಬೆಲೆಗಳಲ್ಲಿ ಏರಿಕೆಯಾಗೋದು ಸಾಮಾನ್ಯ, ಆದ್ರೆ ಈ ಹಿಂದೆ ಇಷ್ಟು ಮೊತ್ತ ಕೊಟ್ಟು ಟಿಕೆಟ್ ಖರೀದಿ ಮಾಡಿದ ಉದಾಹರಣೆಗಳು ಕಡಿಮೆ ಎನ್ನುತ್ತಿದ್ದಾರೆ ಪಿವಿಆರ್​ ಸಿಬ್ಬಂದಿ.

ಇದನ್ನೂ ಓದಿ:ನ್ಯಾಷನಲ್​ ಕ್ರಶ್​ನದ್ದೇ ಹವಾ.. ಪ್ಯಾನ್ ಇಂಡಿಯಾದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯೋ ನಟಿಯಾದ್ರಾ ರಶ್ಮಿಕಾ ಮಂದಣ್ಣ?

Advertisment

ಇನ್ನು ಐಮ್ಯಾಕ್ಸ್​ ಸ್ಕ್ರೀನ್​ನಲ್ಲಿಯೂ ಕೂಡ ಪುಷ್ಪಾ ಸಿನಿಮಾದ ಟಿಕೆಟ್ ದರ ಗಗನಕ್ಕೆ ಏರಿದೆ. ದೆಹಲಿಯ ಸಿಟಿ ವಾಕ್ ಮಾಲ್​​ನಲ್ಲಿನ ಐಮ್ಯಾಕ್ಸ್​​ ಥಿಯೇಟರ್​ನಲ್ಲಿ ಒಂದು ಟಿಕೆಟ್​ಗೆ 1860 ರೂಪಾಯಿ ದರ ನಿಗದಿಯಾಗಿದೆ. ಮುಂಬೈನ ಥಿಯೇಟರ್​ನಲ್ಲಿ 1500 ರಿಂದ 1700 ರೂಪಾಯಿಗೆ ತಲುಪಿದೆ.

ಆಂಧ್ರಪ್ರದೇಶ ತೆಲಂಗಾಣದಲ್ಲಿಯೂ ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿವೆ. ಆದ್ರೆ ವಿಶೇಷ ಅಂದ್ರೆ ತೆಲಂಗಾಣ ಸರ್ಕಾರ ಅಭಿಮಾನಿಗಳಿಗಾಗಿ ಡಿಸೆಂಬರ್ 4 ರಂದು ರಾತ್ರಿ 9.30ಕ್ಕೆ ವಿಶೇಷ ಶೋ ಏರ್ಪಡಿಸಿದೆ. ಇದರ ನಡುವೆಯೂ ಕೂಡ ತೆಲಂಗಾಣ ಹಾಗೂ ಆಂಧ್ರದಲ್ಲಿ ಪುಷ್ಪಾ 2 ಸಿನಿಮಾದ ಟಿಕೆಟ್ ದರ 800 ರೂಪಾಯಿಗೆ ತಲುಪಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment