newsfirstkannada.com

×

ಪುಷ್ಪ ಮಾದರಿ ಸ್ಮಗ್ಲಿಂಗ್.. ಆಯಿಲ್ ಟ್ಯಾಂಕರ್​ನಲ್ಲಿ 200 ಬಾಕ್ಸ್​ ಮದ್ಯ ಸಾಗಾಟ; ಆಮೇಲೇನಾಯ್ತು?

Share :

Published October 24, 2024 at 2:18pm

    ಪುಷ್ಪ ಸಿನಿಮಾದಲ್ಲಿ ರಕ್ತಚಂದನ ಸ್ಮಗ್ಲಿಂಗ್‌ ಮಾಡೋಕೆ ಈ ಪ್ಲಾನ್!

    ರಿಯಲ್ ಆಗಿ ಆಯಿಲ್ ಟ್ಯಾಂಕರ್‌ನಲ್ಲಿ ಸ್ಮಗ್ಲಿಂಗ್ ಮಾಡುತ್ತಿದ್ದ ಗ್ಯಾಂಗ್

    ಟ್ಯಾಂಕರ್​​ ಮುಚ್ಚಳ ತೆಗೆದು ನೋಡಿದಾಗ ಪೊಲೀಸರಿಗೆ ಅನುಮಾನ

ಪುಷ್ಪ ಸಿನಿಮಾದಲ್ಲಿ ರಕ್ತಚಂದನ ಸ್ಮಗ್ಲಿಂಗ್‌ ಮಾಡೋಕೆ ಪುಷ್ಪರಾಜ್ ಮಹಾ ಪ್ಲಾನ್ ಮಾಡುತ್ತಾನೆ. ಹಾಲಿನ ಟ್ಯಾಂಕ್​​ನಲ್ಲಿ ಮೇಲೆ ಹಾಲು ತುಂಬಿ ಕೆಳಗೆ ರಕ್ತ ಚಂದನ ಇಟ್ಟು ಪೊಲೀಸರನ್ನು ಯಾಮಾರಿಸುತ್ತಾ ಇರ್ತಾನೆ. ಇಂಥದ್ದೇ ರೀತಿಯಲ್ಲೇ ಇಲ್ಲೊಂದು ಸ್ಮಗ್ಲಿಂಗ್ ಗ್ಯಾಂಗ್ ಪ್ಲಾನ್ ಮಾಡಿ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ₹5 ಕೋಟಿ ಡಿಮ್ಯಾಂಡ್‌ ಮಾಡಿದ್ದು ತರಕಾರಿ ವ್ಯಾಪಾರಿ; ಜೀವ ಬೆದರಿಕೆ ಕೇಸ್‌ಗೆ ಹೊಸ ಟ್ವಿಸ್ಟ್! 

ಆಯಿಲ್ ಟ್ಯಾಂಕ್ ಒಳಗಿತ್ತು 200 ಬಾಕ್ಸ್​ ಮದ್ಯ!
ದೇಶದ ಕೆಲವು ರಾಜ್ಯಗಳಲ್ಲಿ ಮದ್ಯ ಮಾರಾಟ ನಿಷೇಧವಿದೆ. ಬಿಹಾರ ರಾಜ್ಯ ಮದ್ಯದ ವಿಚಾರದಲ್ಲಿ ಬಲು ಕಟ್ಟು ನಿಟ್ಟು. ಇದೇ ಕಾರಣಕ್ಕೆ ವರ್ಷಕ್ಕೆ ಕನಿಷ್ಠ ಅಂದ್ರು 150 ಮಂದಿ ಕಳ್ಳಭಟ್ಟಿ ಕುಡಿದು ಸಾಯೋ ಪ್ರಕರಣ ಇಲ್ಲಿ ದಾಖಲಾಗುತ್ತಾ ಇರುತ್ತದೆ. ಇದೀಗ ಇದೇ ರಾಜ್ಯದಲ್ಲಿ ಮದ್ಯದ ಸ್ಮಗ್ಲಿಂಗ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅಂತೆಯೇ ಇಲ್ಲೊಂದು ಗ್ಯಾಂಗ್ ಮದ್ಯ ಸ್ಮಗಲ್ ಮಾಡೋಕೆ ಹೋಗಿ ಸಿಕ್ಕಿ ಬಿದ್ದಿದೆ.

ಪುಷ್ಪ ಮಾದರಿಯಲ್ಲೇ ಆಯಿಲ್ ಟ್ಯಾಂಕ್ ಪ್ಲಾನ್
ಬಿಹಾರದ ಮುಜಾಫರ್​ ನಗರದಲ್ಲಿ ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ ಹಿಂದೂಸ್ತಾನ್ ಪೆಟ್ರೋಲಿಯಂ ಆಯಿಲ್ ಟ್ಯಾಂಕರ್​​ ತಡೆದು ಪರಿಶೀಲನೆ ನಡೆಸಿದ್ದಾರೆ. ನಾಗಾಲ್ಯಾಂಡ್​​ ನೋಂದಣಿಯ ಟ್ಯಾಂಕರ್​​ ಮುಜಾಫರ್​ ನಗರದ ಪೊಲೀಸರು ತಪಾಸಣೆ ಮಾಡಿದಾಗ ಎಲ್ಲವೂ ಸರಿಯಾಗಿಯೇ ಇತ್ತು. ತೀರಾ ತೈಲ ಟ್ಯಾಂಕರ್​​ ಮುಚ್ಚಳ ತೆಗೆದು ನೋಡಿದಾಗಲೇ ಬೆಚ್ಚಿಬಿದ್ದಿತ್ತು. ಯಾಕಂದ್ರೆ, ಅಬಕಾರಿ ಇಲಾಖೆ ನೀಡಿದ್ದ ಸುಳಿವು ನಿಜವಾಗಿತ್ತು.
ಆಯಿಲ್ ಟ್ಯಾಂಕರ್​ನಲ್ಲಿ ಸುಮಾರು 200 ಕ್ರೇಟ್ ಬಿಯರ್ ಇರುವುದು ಖಚಿತವಾಗಿದೆ. ಸದ್ಯ, ಪೊಲೀಸರು ಅಕ್ರಮ ಮದ್ಯ ಸಾಗಾಟದ ಗ್ಯಾಂಗ್ ಹಿಂದೆ ಬಿದ್ದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುಷ್ಪ ಮಾದರಿ ಸ್ಮಗ್ಲಿಂಗ್.. ಆಯಿಲ್ ಟ್ಯಾಂಕರ್​ನಲ್ಲಿ 200 ಬಾಕ್ಸ್​ ಮದ್ಯ ಸಾಗಾಟ; ಆಮೇಲೇನಾಯ್ತು?

https://newsfirstlive.com/wp-content/uploads/2024/10/Pushpa-Style-Smuggling.jpg

Load More