ಕಿರುತೆರೆಯ ದೊಡ್ಡ ರಿಯಾಲಿಟಿ ಶೋ dkdಯಲ್ಲಿ ಸ್ಪರ್ಧಿಯಾಗಿದ್ದ ಅಕ್ಷರಾ
ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೂಲಕ ಖ್ಯಾತಿ ಪಡೆದುಕೊಂಡ ಸಹನಾ
ತಮ್ಮ ಅದ್ಭುತ ನಟನೆಯ ಮೂಲಕವೇ ಅಭಿಮಾನಿಗಳನ್ನು ಗಳಿಸಿದ ನಟಿ
ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಭರ್ಜರಿ ರೆಸ್ಪಾನ್ಸ್ ದೊರಕಿದೆ. ಪ್ರತಿ ಸೀಸನ್ನಲ್ಲೂ ವೀಕ್ಷಕರ ಮನಸ್ಸನ್ನು ಗೆಲ್ಲುತ್ತಾ ಬಂದಿರೋ ಡಿಕೆಡಿ ಶೋ ಈ ಬಾರಿ ವಿಭಿನ್ನ ಸ್ಪೆಷಾಲಿಟಿಯನ್ನು ಹೊತ್ತು ತಂದಿತ್ತು. ಸದ್ಯ ಡ್ಯಾನ್ಸರ್ ಮತ್ತು ಸೆಲೆಬ್ರಿಟಿಗಳ ಕಾಂಬಿನೇಷನ್‌ನಲ್ಲಿ ಡಿಕೆಡಿ ಮೂಡಿ ಬರುತ್ತಿದೆ. ಶೋ ಶುರುವಾದ ದಿನದಿಂದ ಇಲ್ಲಿಯವರೆಗೆ ವೀಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಹೊಸ ಅವತಾರದಲ್ಲಿ ಕಾಣಿಸಿಕೊಂಡ ಬಿಗ್ಬಾಸ್ ಖ್ಯಾತಿಯ ಆರ್ಯವರ್ಧನ್ ಗುರೂಜಿ; ಏನಿದೆ ಸ್ಪೆಷಲ್?
ಡಿಕೆಡಿ ಸ್ಪರ್ಧಿಗಳು ವಾರದಿಂದ ವಾರಕ್ಕೆ ಭರ್ಜರಿ ಡ್ಯಾನ್ಸ್ ಮಾಡುತ್ತಿದ್ದಾರೆ. ಆದರೆ ಇದರ ಮಧ್ಯೆ ಡಿಕೆಡಿ ಶೋಯಿಂದ ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಸಹನಾ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಅಕ್ಷರ ಆಚೆ ಬಂದಿದ್ದಾರೆ. ಹೌದು, ಕಳೆದ ಎರಡು ಎಪಿಸೋಡ್ಗಳಲ್ಲಿ ನಟಿ ಅಕ್ಷರ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅಭಿಮಾನಿಗಳಲ್ಲಿ ಗೊಂದಲ ಮನೆ ಮಾಡಿತ್ತು. ಆದರೆ ಈ ಬಗ್ಗೆ ಡಿಕೆಡಿ ಶೋ ನಿರೂಪಕಿ ಅನುಶ್ರೀ ಅವರು ವೇದಿಕೆ ಮೇಲೆ ಈ ವಿಚಾರದ ಬಗ್ಗೆ ಹೇಳಿದ್ದರು.
ಡಿಕೆಡಿ ಶೋ ನಿರೂಪಕಿ ಅನುಶ್ರೀ ಹೇಳಿದ್ದೇನು?
ಶ್ರಾವಣಿ ಸುಬ್ರಮಣ್ಯ ಸೀರಿಯಲ್ ನಟಿ ಶ್ರೀವಲ್ಲಿ ಅವರನ್ನು ಪರಿಚಯಿಸಿದ ನಿರೂಪಕಿ ಅನುಶ್ರೀ ಅವರು ಸಹನಾ ಅವರು ಕಾರಣಾಂತರಗಳಿಂದ ಈ ಶೋನಿಂದ ಹೊರ ನಡೆದಿದ್ದಾರೆ ಎಂದಷ್ಟೇ ಹೇಳಿಕೊಂಡಿದ್ದರು.
ಇದನ್ನೂ ಓದಿ: ಗರ್ಭಿಣಿ ಪತ್ನಿಗಾಗಿ ಏನೆಲ್ಲಾ ಮಾಡ್ತಾರೆ ಚಂದನ್ ಗೌಡ; ಕವಿತಾ ಗೌಡ ಆಸೆ ಈಡೇರಿಸಿದ್ರು ನೋಡಿ
ನಟಿಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ..
ನಟಿ ಅಕ್ಷರ ಅವರು ಡಿಕೆಡಿ ಶೋಯಿಂದ ಆಚೆ ಬಂದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವೇದಿಕೆ ಮೇಲೆ ಆಗಲಿ, ಸೋಷಿಯಲ್ ಮೀಡಿಯಾದಲ್ಲಿ ಆಗಲಿ ಎಲ್ಲೂ ಕೂಡ ಈ ಬಗ್ಗೆ ಸ್ಪಷ್ಟ ಉತ್ತರ ಕೊಟ್ಟಿಲ್ಲ. ಇದರಿಂದ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ. ಅಷ್ಟು ಚೆನ್ನಾಗಿ ಡ್ಯಾನ್ಸ್ ಮಾಡುತ್ತಿದ್ದ ನಟಿಗೆ ಏನಾಯ್ತು ಎಂದು ಕಾಮೆಂಟ್ಸ್ ಮಾಡುವ ಮೂಲಕ ಅನುಮಾನ ವ್ಯಕ್ತಪಡಿಸಿದ್ದಾರೆ.
ಡಿಕೆಡಿಗೆ ಎಂಟ್ರಿ ಕೊಟ್ಟ ಮತ್ತೊಬ್ಬ ಕಿರುತೆರೆ ನಟಿ
ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಮೂಲಕ ಖ್ಯಾತಿ ಪಡೆದುಕೊಂಡ ನಟಿ ಕೀರ್ತಿ ವೆಂಕಟೇಶ್ ಅವರು ಡಿಕೆಡಿಗೆ ಎಂಟ್ರಿ ಕೊಟ್ಟಿದ್ದಾರೆ. ಇದು ಕೀರ್ತಿ ಅವರ ಮೊದಲ ರಿಯಾಲಿಟಿ ಶೋ ಆಗಿದೆ. ಶ್ರೀವಲ್ಲಿ ಡ್ಯಾನ್ಸ್‌ಗೆ ಸಾಕಷ್ಟು ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಡ್ಯಾನ್ಸ್ ಮಾಡಿದ ನಂತರದಲ್ಲಿ ಕೀರ್ತಿ ವೆಂಕಟೇಶ್ ಅವರು ನಟ ಶಿವರಾಜ್‌ಕುಮಾರ್ ಅವರು ಹಾಡಿ ಹೊಗಳಿದ್ದಾರೆ. ಇನ್ನು ಇದನ್ನೇ ನೋಡಿದ ಅವರ ತಾಯಿ ಭಾವುಕರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ