/newsfirstlive-kannada/media/post_attachments/wp-content/uploads/2024/11/shiluchinnu1.jpg)
ಕಿರುತೆರೆಯಲ್ಲಿ ಹೈವೋಲ್ಟೇಜ್ ಟಿಆರ್​​ಪಿ ಪಡೆದುಕೊಂಡು ಮೊದಲ ಎಪಿಸೋಡ್​ನಿಂದಲೂ ಎಲ್ಲರ ಗಮನ ಸೆಳೆಯುತ್ತಿರೋ ಧಾರಾವಾಹಿ ಅಂದ್ರೆ ಪುಟ್ಟಕ್ಕನ ಮಕ್ಕಳು. ಈ ಧಾರಾವಾಹಿಯ ಕಲಾವಿದರಿಂದ ಹಿಡಿದು ಡೈರೆಕ್ಷನ್ ಟೀಮ್​ವರೆಗೂ ಎಲ್ಲರೂ ಸಹ ಈ ದೊಡ್ಡ ಸಕ್ಸಸ್​ಗೆ ಕಾರಣ. ಆದರೆ ಮಗಳನ್ನ ಕಳೆದುಕೊಂಡು ಬರಿದಾಗಿರೋ ಪುಟ್ಟಕ್ಕನ ಮಡಿಲಿಗೆ ಸಹನಾ ಬಂದಿದ್ದಾಳೆ.
ಇದನ್ನೂ ಓದಿ: ‘ಬ್ಯೂಟಿ’ ಬ್ಯಾಡ್‌ಲಕ್.. ಶವದ ಮುಂದೆ 24 ಗಂಟೆ ಕಾಲ ಕಳೆದ ಪ್ರಿಯಕರ; ಬೆಂಗಳೂರಲ್ಲಿ ಭಯಾನಕ ಕೃತ್ಯ!
/newsfirstlive-kannada/media/post_attachments/wp-content/uploads/2024/11/shiluchinnu2.jpg)
ಒಬ್ಬಳು ಮಗಳು ಬಂದಳೂ ಅಂತ ಖುಷಿ ಪಡೋಕೆ ಆಗದೇ ಜೀವಕ್ಕೆ ಜೀವವಾಗಿದ್ದ ಸ್ನೇಹಾಳನ್ನ ಕಳೆದುಕೊಂಡು ನೋವು ಅನುಭವಿಸ್ತಿದ್ದಾಳೆ ಪುಟ್ಟಕ್ಕ. ತಾಯಿಯ ನೋವು ಸಂಕಟವನ್ನ ಅನುಭವಿಸಿ ಅಭಿನಯಿಸ್ತಿರೋ ಉಮಾಶ್ರೀ ಅಮ್ಮನ ಅಭಿನಯಕ್ಕೆ ಎಂಥವರಿಗೂ ಒಂದು​ ಕ್ಷಣ ಕಣ್ಣಾಲೆಗಳು ತುಂಬಿಕೊಳ್ಳುತ್ತಿವೆ. ಸದ್ಯ ಪುಟ್ಟಕ್ಕನಿಗೆ ಕಿರಿಯ ಮಗಳು ಸುಮಾ ಮದುಮಗಳಂತೆ ರೆಡಿಯಾಗಿ ಫೋಟೋಗೆ ಪೋಸ್​ ಕೊಟ್ಟಿದ್ದಾಳೆ.
/newsfirstlive-kannada/media/post_attachments/wp-content/uploads/2024/11/shiluchinnu.jpg)
ಸುಮಾ ಪ್ರಾತಕ್ಕೆ ಜೀವ ತುಂಬಿರೋ ನಟಿಯ ಹೆಸರು ಶಿಲ್ಪಾ ಸವಸೆರೆ. ಇದೀಗ ನಟಿ ಶಿಲ್ಪಾ ಸವಸೆರೆ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅದೇ ವಿಡಿಯೋದಲ್ಲಿ ನಟಿ ಶಿಲ್ಪಾ ಸವಸೆರೆ ಥೇಟ್​ ಮದುಮಗಳ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ ಇದೇ ವಿಡಿಯೋ ನೋಡಿದ ಅಭಿಮಾನಿಗಳು ಮೇಡಂ ಮದುವೆನಾ? ಏನ್​ ಮೇಡಂ ವಿಶೇಷ, ಲುಕ್ಕಿಂಗ್​ ಸೂಪರ್​ ಅಂತೇಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ. ಇನ್ನು, ಶಿಲ್ಪಾ ಸವಸೆರೆ ಮಾಡೆಲ್​ ಹಾಗೂ ಫ್ಯಾಷನ್​ ಡಿಸೈನರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಸದ್ಯ ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಸುಮಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us