Advertisment

Puttakkana Makkalu: ಬಂಗಾರಮ್ಮನ ಮುದ್ದಾದ ಮಗ ಕಂಠಿಯ ಬಗ್ಗೆ ತಾಯಿ ಹೆಮ್ಮೆಯ ಮಾತು; ನಟ ಮಾಡಿದ್ದೇನು?

author-image
Veena Gangani
Updated On
Puttakkana Makkalu: ಬಂಗಾರಮ್ಮನ ಮುದ್ದಾದ ಮಗ ಕಂಠಿಯ ಬಗ್ಗೆ ತಾಯಿ ಹೆಮ್ಮೆಯ ಮಾತು; ನಟ ಮಾಡಿದ್ದೇನು?
Advertisment
  • ಕಿರುತೆರೆ ನಟ ಧನುಷ್​ ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತಾ?
  • ಕಂಠಿ ಪಾತ್ರದ ಮೂಲಕ ಅಭಿಮಾನಿಗಳನ್ನು ಗಳಿಸಿಕೊಂಡ ಧನುಷ್​
  • ಯಂಗ್​ ರೆಬಲ್​ ಸ್ಟಾರ್​ ಅಂತ ಬಿರುದು ಪಡೆದುಕೊಂಡ ಕಂಠಿ

ಪುಟ್ಟಕ್ಕನ ಮಕ್ಕಳು ಸಂಸಾರನೇ ಸಖತ್​ ಸ್ಪೆಷಲ್​. ಅಮ್ಮ ಮಕ್ಕಳ ನಿಜವಾದ ಮೌಲ್ಯ ಹೇಳಿ ಕೊಡ್ತಿರೋ ಸ್ಟೋರಿ ಇದಾಗಿದೆ. ಪುಟ್ಟಕ್ಕನ ಜೊತೆ ಮಕ್ಕಳ ಬಾಂಧವ್ಯ, ಬಡ್ಡಿ ಬಂಗಾರಮ್ಮ-ಕಂಠಿ ನಡುವಿನ ಮಮತೆ ವಾತ್ಸಲ್ಯ ನೋಡಿದವರಿಗೆ ಕಣ್ಣಂಚಲ್ಲಿ ಸಣ್ಣ ಹನಿ ಮೂಡುತ್ತೆ. ಅದಕ್ಕೆ ಈ ಸೀರಿಯಲ್​ ತುಂಬಾ ವಿಶೇಷ ಅಂತ ಹೇಳಿದ್ದು.

Advertisment

ಇದನ್ನೂ ಓದಿ:BBK11: ಐಶ್ವರ್ಯ VS ಅನುಷಾ ಮಧ್ಯೆ ಶುರುವಾಯ್ತು ಗದ್ದಲ; ಬಿಗ್​ಬಾಸ್​ ​ಮನೆಯಲ್ಲಿ ‘ಬಕೆಟ್‌’ ಹಿಡಿಯೋದ್ಯಾರು?

publive-image

ನಿಮಗೊಂದು ವಿಚಾರ ಗೊತ್ತಾ? ಕಂಠಿ ಸೀರಿಯಲ್​ನಲ್ಲಿ ಎಷ್ಟು ಅವ್ವನಿಗೆ ಬೆಲೆ ಕೊಡ್ತಾನೋ ಅದಕ್ಕಿಂತ ಹೆಚ್ಚಾಗಿ ನಿಜ ಜೀವನದಲ್ಲಿ ಅಮ್ಮನನ್ನ ಪ್ರೀತಿಸ್ತಾರೆ. ಒಳ್ಳೆ ಮಗ ಅಂತ ಎನಿಸಿಕೊಂಡಿದ್ದಾರೆ. ಯಾವುದೇ ಪಾತ್ರ ವೀಕ್ಷಕರಿಗೆ ಹತ್ತಿರವಾಗೋದು ಜೀವ ತುಂಬಿ ಅಭಿನಯಿಸೋ ಕಲಾವಿದ ಇದ್ದಾಗ ಮಾತ್ರ. ಇದರಲ್ಲಿ ಕಂಠಿ ಪಾತ್ರಧಾರಿ ನಟ ಧನುಷ್​ ಗೆದ್ದಿದ್ದಾರೆ. ಮುಗ್ಧ ಅಭಿನಯ, ಖದರ್​ ಆಗಿರೋ ಡೈಲಾಗ್​ಗಳ ಮೂಲಕ ಗಮನ ಸೆಳೆದಿರೋ ಕಂಠಿ ವೀಕ್ಷಕರ ಫೇವರಿಟ್ ಅಳಿಯ, ಮಗ.

publive-image

ಕಂಠಿ ಅವ್ವನ ಮೇಲೆ ಇಟ್ಟಿರೋ ಪ್ರೀತಿ ಎದೆ ಮೇಲೆ ಇದೆ. ಹೃದಯ ಭಾಗದಲ್ಲಿ ಅವ್ವ ಅಂತ ಅಚ್ಚೆ ಹಾಕಿಸಿಕೊಂಡು ಮನೆ ಮೆಚ್ಚಿದ ಮಗ ಎನಿಸಿಕೊಂಡಿದ್ದಾರೆ. ಈ ಆದರ್ಶವನ್ನು ನಟನೆಗೆ ಮಾತ್ರ ಸಿಮೀತ ಮಾಡದೇ ನಿಜ ಜೀವನದಲ್ಲೂ ಅಳವಡಿಸಿಕೊಂಡಿದ್ದಾರೆ. ಡಿಕೆಡಿ ವೇದಿಕೆಯ ಯಂಗ್​ ರೆಬಲ್​ ಸ್ಟಾರ್​ ಅಂತ ಬಿರುದು ಪಡೆದು ಡ್ಯಾನ್ಸ್​ನಲ್ಲಿ ಪ್ರತಿ ವಾರ ಧಮಾಕಾ ಮಾಡ್ತಿದ್ದಾರೆ.

Advertisment

ಮೊನ್ನೆ ಡಿಕೆಡಿ ಶೋನಲ್ಲಿ ಫ್ಯಾಮಿಲಿ ರೌಂಡ್​ ಡ್ಯಾನ್ಸ್​ ಇತ್ತು. ತಾಯಿ ಹಾಗೂ ತಂಗಿ ಜೊತೆ ಕಂಠಿ ಹೆಜ್ಜೆ ಹಾಕಿ ಬಾಂಧವ್ಯವನ್ನ ಸಂಭ್ರಮಿಸಿದ್ರು. ಕಂಠಿ ಅಂದ್ರೇ ಧನುಷ್​ ಅವರ ತಾಯಿ ಮಾಯಮ್ಮ ಮಾತಾಡಿದ್ದಾರೆ. ನನ್ನ ಮಗ ನನಗೆ ಅಪ್ಪನ ಸ್ಥಾನ ತುಂಬಿದ್ದಾನೆ. ಇಬ್ಬರೂ ಮಕ್ಕಳು ಅಪ್ಪ-ಅಮ್ಮನ ಸ್ಥಾನದಲ್ಲಿ ನಿಂತು ನನ್ನನ್ನು ನೋಡಿಕೊಳ್ತಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ. ಹೆತ್ತವರನ್ನು ಚನ್ನಾಗಿ ನೋಡ್ಕೊಂಡು, ಅವ್ರಿಗೊಂದಿಷ್ಟು ಹೆಮ್ಮೆ ತರೋ ಕೆಲಸ ಮಾಡಿದ್ರೆ ಅದಕ್ಕಿಂತ ವಿಶೇಷವಾದ ಅದ್ಭುತವಾದ ಭಾವನೆ ಮತ್ತೊಂದಿಲ್ಲ ಅನ್ಸುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment